PSYCHE Activity Handbook in Kannada

Page 1

1


2 | PSYCHE | 2022


ಆತ್ಮೀಯ ಕನಸುಗಾರರೇ, ಅದ್ಭುತವಾದ, ವಿಚಿತ್ರವಾದ ಮಾನವ ಮನಸ್ಸಿನ ಲೋಕಕ್ಕೆ ಸ್ವಾಗತ. ಈ ಕಾರ್ಯ ಚಟುವಟಿಕೆ ಕೈಪಿಡಿಯು, ನಮ್ಮ ಡಿಜಿಟಲ್‌ಪ್ರದರ್ಶನ ಸಂಚಿಕೆಯ ಸೈಕಿ ಮನಸ್ಸು ಜೊತೆಗೂಡಿದೆ. ಸೈಕಿ ಮನಸ್ಸು , ಪ್ರದರ್ಶನದ ಪ್ರದರ್ಶಿಕೆಗಳು, ಉಪನ್ಯಾಸಗಳು, ಚಲನಚಿತ್ರಗಳು ಮತ್ತು ಕಾರ್ಯಾಗಾರಗಳ ಮೂಲಕ ಮೆದುಳಿನ ಕೋಶಗಳ ಶಕ್ತಿ-ಕ್ಷಮತೆಯ ಬಗ್ಗೆ ತಿಳಿದುಕೊಳ್ಳ ಬಹುದು. ಈ ಕಾರ್ಯ ಚಟುವಟಿಕೆ ಕೈಪಿಡಿಯನ್ನು ಡೌನ್‌ಲೋಡ್‌ಮಾಡಿ ಡೂಡಲ್‌ ಮಾಡಿ. ನಿಮ್ಮ ಆಲೋಚನೆಗಳ ಸರಣಿಗಳನ್ನು ಗಮನಿಸ ಬಹುದು, ಮನಸ್ಸಿನೊಂದಿಗೆ ಪ್ರಯೋಗ ನಡೆಸ ಬಹುದು, ಮನಸ್ಸಿನ ಅನಂತ ಸಾಧ್ಯತೆಗಳನ್ನು ಸ್ವಲ್ಪ ಮಟ್ಟಿಗೆ ಅನುಭವಿಸ ಬಹುದು. ನಿಮ್ಮ ಬಾಲ್ಯದ ಕಥೆಗಳನ್ನು ಪುನರ್ನಿರ್ಮಿಸಿ, ಕಲ್ಪನೆಯ ಲೋಕವು ತೆರೆದುಕೊಳ್ಳಲಿ. ಜ್ಞಾನೇಂದ್ರಿಯಗಳನ್ನು ಪರೀಕ್ಷಿಸಿ, ಮೆದುಳು ವಾಸ್ತವತೆಯನ್ನು ಹೇಗೆ ಹೆಣೆಯುತ್ತದೆ ಎಂದು ಅರಿತುಕೊಳ್ಳಿ. ನಿಮ್ಮ ಕನಸುಗಳಲ್ಲಿ ದುಮುಕಿ ವಿಹರಿಸಿ, ಆತ್ಮವನ್ನು ಅವಲೋಕಿಸಿ. ನಾವು ಒಗ್ಗೂಡಿಸಿರುವ ಕಾರ್ಯ ಚಟುವಟಿಕೆಗಳ ಮೂಲಕ ನಿಮ್ಮ ಸುತ್ತಲಿನ ಜಗತ್ತನ್ನು ಆಲೋಕಿಸಿ, ಆಲೋಚಿಸಿ, ಗ್ರಹಿಸಿ. ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮನ್ನು ಟ್ಯಾಗ್‌ಮಾಡಿ, ನಿಮ್ಮ ಅನುಭವಗಳನ್ನು ಅಗತ್ಯವಾಗಿ ಹಂಚಿಕೊಳ್ಳಿ, ಜೊತೆಗೆ ಹ್ಯಾಶ್‌ಟ್ಯಾಗ್‌#ExperimentWithSGB ಮತ್ತು #PSYCHE ಬಳಸಿ ಅನ್ಯರ ಸೃಜನಶೀಲ ಕೃತಿಗಳನ್ನು ಮತ್ತು ಬರಹಗಳನ್ನು ವೀಕ್ಷಿಸಿ. ಆತ್ಮೀಯ ಆತ್ಮೀಯ, ಸೈನ್ಸ್‌ಗ್ಯಾಲರಿ ಬೆಂಗಳೂರು ತಂಡ

3


ವಿಷಯ ವಸ್ತು 06 ನಮ್ಮ ಮೆದುಳಿನ ನಕ್ಷೆಯನ್ನು ತಯಾರಿಸಿ

12 ನಿಮ್ಮ ಮೆಚ್ಚುಗೆಯ ಕಿನ್ನರ ಲೋಕದ ಕಥೆಗಳನ್ನು ಪುನಃ ಕಲ್ಪಿಸಿಕೊಳ್ಳಿ 19 ನಿಮ್ಮ ನೀತಿ ಸೂಜಿಯು ಏನನ್ನು ತೋರುತ್ತದೆ.

24 ಒಂದು ಪ್ರಕರಣದ ಅಧ್ಯಯನ: ಭಾಷೆಯ ಅರ್ಥೈಸುವಿಕೆ


41 ಮನಸ್ಸಿನ ಭಾಗಗಳನ್ನು ಒಗ್ಗೂಡಿಸುವುದು 46 ವಾಸ್ತವತೆಯ ನಿರ್ಮಾಣ 53 ಪ್ರತಿಬಿಂಬಕ ಭಾವನೆಗಳು 56 ಸಂಗೀತ ಮತ್ತು ಮನೋಭಾವ 61 ಮೋಡಗಳಲ್ಲಿ ಇಲ್ಲವೇ ನಿಮ್ಮ ತಲೆಯಲ್ಲಿ


1 ಮಾನವ ದೇಹದ ಅತಿ ಜಟಿಲ ಭಾಗವಾದ ಮೆದುಳಿನ ಅವಿಭಾಜ್ಯ ಅಂಶ, ಮನಸ್ಸು. ಈ ಮೂರು ಪೌಂಡಿನ ಅಂಗವು ನಮ್ಮ ಬುದ್ಧಿ ಕ್ಷಮತೆ, ಸಂವೇದನೆಗಳ ಗ್ರಹಿಕೆ, ದೇಹದ ಚಲನವಲನಗಳು ಮತ್ತು ನಮ್ಮ ನಡವಳಿಕೆಗಳ ನಿಯಂತ್ರಣ ಎಲ್ಲವಕ್ಕೂ ಕಾರಣವಾಗುತ್ತದೆ. ಒಟ್ಟಾರೆ, ನೀವು ಎಂದರೆ ನಿಮ್ಮ ಮೆದುಳು. ನಿಮ್ಮ ವ್ಯಕ್ತಿತ್ವ, ಸ್ವಂತಿಕೆ ಮತ್ತು ನಿಮ್ಮ ಎಲ್ಲ ಶಕ್ತಿ ಕ್ಷಮತೆಗಳಿಗೆ ನಿಮ್ಮ ಮೆದುಳೇ ಮೂಲ ಕಾರಣ. ಮಾನವನ ಸ್ವಭಾವ ಮತ್ತು ಆಚರಣೆಗಳನ್ನು ಅರ್ಥಮಾಡಿಕೊಳ್ಳಲು, ಮೆದುಳಿನ ಕಾರ್ಯ ಚಟುವಟಿಕೆಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಮೆದುಳು ಸದಾ ಸಕ್ರಿಯವಾಗಿರುತ್ತದೆ, ಬದಲಾಗುತ್ತಿರುತ್ತದೆ. ಪ್ರತಿಯೊಂದು ಅನುಭವದೊಂದಿಗೂ ಮೆದುಳು ರೂಪಾಂತರಗೊಳ್ಳುತ್ತದೆ, ಹಳೆಯ ಸಂಪರ್ಕಗಳನ್ನು ಬಲಗೊಳಿಸಲು ಇಲ್ಲವೇ ದುರ್ಬಲಗೊಳಿಸಲು ಅಥವಾ ಹೊಸ ಸಂಪರ್ಕಗಳನ್ನು ಕಲ್ಪಿಸಲು ಹವಣಿಸುತ್ತಿರುತ್ತದೆ. ಈ ವಿಶೇಷವಾದ ಸಂಪರ್ಕಗಳು ಹೇಗೆ ಸೃಷ್ಟಿಯಾಗುತ್ತವೆ ಮತ್ತು ರೂಪಾಂತರಗೊಳ್ಳುತ್ತವೆ ಎಂದು ಅರ್ಥ ಮಾಡಿಕೊಳ್ಳುವುದರಿಂದ ನಮ್ಮ ನಡವಳಿಕೆ, ನಮ್ಮ ಸ್ವಂತ ವ್ಯಕ್ತಿತ್ವ ಮತ್ತು ಭೌತಿಕ ಮೆದುಳಿನ ನಡುವೆ ಇರುವ ಸಂಬಂಧವನ್ನು ಅರ್ಥೈಸುವುದು ಸಾಧ್ಯವಾಗ ಬಹುದು.

6 | PSYCHE | 2022


ನಮ್ಮ ಮೆದುಳಿನ ನಕ್ಷೆಯನ್ನು ತಯಾರಿಸಿ

Photo by Natasha Connell on Unsplash


ಎಡಬದಿ 1. ಸುತ್ತಲೂ ಹೊರಗಿನ ಅಂಚನ್ನು ಕತ್ತರಿಸಿ. 2. ಘನ ರೇಖೆಗಳನ್ನು ಕತ್ತರಿಸಿ (ಬಾಣಗಳು ಸೂಚಿಸುವ ರೇಖೆಯನ್ನು ಸೂಚಿಸಿ). 3. ಫ್ಲಾಪ್ಸ್ ಅಡಿಯಲ್ಲಿ ಟಕ್ ತನಕ ಘನ ರೇಖೆ ಮತ್ತು ಅಂಟು ಅಥವಾ ಟೇಪ್ನಲ್ಲಿ ಡ್ಯಾಶ್ ಮಾಡಿದ ಸಾಲುಗಳನ್ನು ಇರಿಸಿ.

8 | PSYCHE | 2022


ಬಲಭಾಗದ 1. ಹೊರಗಿನ ಅಂಚಿನ ಸುತ್ತಲೂ ಕತ್ತರಿಸಿ. 2. ಘನ ರೇಖೆಗಳ ಮೇಲೆ ಕತ್ತರಿಸಿ (ಬಾಣಗಳು ಸೂಚಿಸುವ ರೇಖೆ). 3. ಡ್ಯಾಶ್ ಮಾಡಿದ ರೇಖೆಗಳು ಘನ ರೇಖೆಯನ್ನು ಮತ್ತು ಅಂಟು ಅಥವಾ ಟೇಪ್ ಅನ್ನು ಸಂಧಿಸುವವರೆಗೆ ಫ್ಲಾಪ್‌ಗಳನ್ನು ಟಕ್ ಮಾಡಿ.

9


ಕಾರ್ಯ ಚಟುವಟಿಕೆ ಮೆದುಳಿನ ಬಗ್ಗೆ ತಿಳಿದುಕೊಳ್ಳಿ. ಈ ಟೋಪಿಯ ಮೇಲೆ ಮೆದುಳಿನ ವಿವಿಧ ಪಾಲೆಗಳ ನಕ್ಷೆಗಳನ್ನು ಒಳಗೊಂಡ ಮೆದುಳಿನ ಚಿತ್ರವು ಮುದ್ರಿತವಾಗಿದೆ. ಇವುಗಳ ಮೂಲಕ, ಮೆದುಳಿನ ಪ್ರತಿಯೊಂದು ಪಾಲೆಯು ಯಾವ ಕ್ರಿಯೆಗೆ ಕಾರಣವಾಗುತ್ತದೆ ಎಂದು ತಿಳಿದುಕೊಳ್ಳಿ. ಈ ಟೋಪಿಯನ್ನು ಕತ್ತರಿಸಿ, ನಿಮ್ಮ ತಲೆಗೆ ಹೊಂದುವಂತೆ ತಯಾರಿಸಿ. ಚಟುವಟಿಕೆಯನ್ನು ಪೂರ್ಣಗೊಳಿಸಿದರೆ, ನೀವು ಈ ಟೋಪಿಯನ್ನು ತೊಡ ಬಹುದು.

ಸಿದ್ಧಗೊಳಿಸುವ ವಿಧಾನ:

10 | PSYCHE | 2022


◆ ಒಂದು ಭಾಗವನ್ನು ತಟ್ಟಿ ನಿಧಾನವಾಗಿ ಒಂದೊಂದೇ ತುಂಡುಗಳನ್ನು ಸಡಿಲಗೊಳಿಸಿಕೊಳ್ಳಿ. ◆ ದೊಡ್ಡ ಟೋಪಿಯನ್ನು ರಚಿಸುವುದಾದರೆ, ಸಡಿಲವಾಗಿ ಎಳೆದು ಸೇರಿಸಿ. ಸ್ವಲ್ಪ ಚಿಕ್ಕ ಟೋಪಿಗೆ ಕಾಗದದ ತುಂಡುಗಳನ್ನು ಒಂದರ ಮೇಲೆ ಇನ್ನೊಂದನ್ನು ಸ್ವಲ್ಪ ತಳ್ಳಿ ಜೋಡಿಸಿ. ಬೇಕಾದ ಗಾತ್ರಕ್ಕೆ ಹೊಂದಿಸಿಕೊಳ್ಳಿ.

◆ ಟೋಪಿಯ ಹೊರ ಭಾಗದಲ್ಲಿ ಟೇಪ್‌ಹಾಕಿ ಭದ್ರ ಪಡಿಸಿ.

◆ ಒಳಭಾಗದಲ್ಲೂ ತುಂಡುಗಳನ್ನೂ ಸೇರಿಸಿ ಟೇಪ್‌ಹಾಕಿ ತೇಪೆ ಹಚ್ಚಿ. ಎರಡೂ ಭಾಗಗಳನ್ನು ಸ್ವಲ್ಪ ಒಂದರ ಮೇಲೊಂದರಂತೆ ತಳ್ಳಿ ಅಂಟಿಸಬಹುದು ಇಲ್ಲವೇ ಸ್ವಲ್ಪ ಎಳೆದು ಬೇಕಾದ ಗಾತ್ರಕ್ಕೆ ಹೊಂದಿಸ ಬಹುದು. ◆ ವಿಕಲ್ಪ: ಇಚ್ಛಿಸಿದರೆ, ಸೆರೆಬೆಲ್ಲಮ್‌ಕೂಡ ಸೆರಿಸ ಬಹುದು. ತುಂಡುಗಳಾಗಿ ಕತ್ತರಿಸಿ, ಟೋಪಿಯ ಹಿಂದೆ ಒಳ ಭಾಗಕ್ಕೆ ಅಂಟಿಸಿ. ಮೆದುಳಿನ ಬಲಭಾಗದ ಅರೆ-ವೃತ್ತದ ಚಿತ್ರವು ಇಲ್ಲಿದೆ. 11


2 ವಿವಿಧ ಸಂಸ್ಕೃತಿಗಳಲ್ಲಿ ಹಾಸುಹೊಕ್ಕಾದ ವಿಚಾರಗಳನ್ನು ಮಾಯಾಲೋಕದ ಕಥೆಗಳು ಮತ್ತು ಪುರಾಣಗಳ ಮೂಲಕ ಹೇಳುವುದು ಸಹಜ. ಸ್ವಿಜ್ಸ್‌ ಮನೋ ವಿಜ್ಞಾನಿ ಕಾರ್ಲ್‌ಜಂಗ್‌ನುಡಿದಿರುವಂತೆ, ಕಿನ್ನರ ಲೋಕದ ಕಥೆಗಳ ಮೂಲಕ ಮನಸ್ಸಿನ ತುಲನಾತ್ಮಕ ಅಧ್ಯಯನವನ್ನು ಸಮರ್ಪಕವಾಗಿ ಮಾಡ ಬಹುದು. ಮಾನವ ಸ್ವಭಾವಗಳ ಒಟ್ಟಾರೆ ಸಾರವನ್ನು ಪಡೆಯಲು ಕಿನ್ನರ ಲೋಕದ ಕಥೆಗಳು ಅವಶ್ಯಕ ಎಂಬುದು ಜಂಗ್‌ಅವರ ವಿಶ್ಲೇಷಣಾತ್ಮಕ ಮನೋವಿಜ್ಞಾನದ ಅಭಿಪ್ರಾಯ. “ನಿಶ್ಚೇತ ಮನಸಿನ ಪ್ರಕ್ರಿಯೆಗಳ ಸಮೂಹದ ಅತಿ ಸರಳ ಮತ್ತು ಶುದ್ಧ ಅಭಿವ್ಯಕ್ತಿಯೇ ಕಿನ್ನರ ಕಥೆಗಳು. ಹೀಗಾಗಿ ನಿಶ್ಚೇತ ಮನಸ್ಸಿನ ವೈಜ್ಞಾನಿಕ ಅನ್ವೇಷಣೆಗೆ ಈ ಕಥೆಗಳು ಮಹತ್ತರವಾದ ವಿಷಯ ವಸ್ತಗಳು. ಮೂಲ ಮಾದರಿಗಳನ್ನು ಅತಿ ಸರಳವಾಗಿ, ನೇರವಾಗಿ, ಸಂಕ್ಷಿಪ್ತವಾಗಿ ತಿಳಿ ಹೇಳುತ್ತವೆ. ಪುರಾಣ ಅಥವಾ ದಂತಕಥೆಗಳಲ್ಲಿ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಮಾನವ ಮನಸ್ಸಿನ ಮೂಲ ಸ್ವರೂಪವನ್ನು ಹೆಣೆಯಲಾಗಿರುತ್ತದೆ. ಆದರೆ ಕಿನ್ನರ ಕಥೆಗಳಲ್ಲಿ, ನಿರ್ದಿಷ್ಟ ಗುರಿಯನ್ನು ಆಧರಿಸಿದ ವಿಷಯವಸ್ತು ಇರುವುದಿಲ್ಲ, ಮನಸ್ಸಿನ ಸ್ವರೂಪವನ್ನು ಸರಳವಾಗಿ ಪ್ರತಿಬಿಂಬಿಸಲಾಗಿರುತ್ತದೆ.

12 | PSYCHE | 2022

ನಿಮ ಕ


ಮ್ಮ ಮೆಚ್ಚುಗೆಯ ಕಿನ್ನರ ಲೋಕದ ಕಥೆಗಳನ್ನು ಪುನಃ ಕಲ್ಪಿಸಿಕೊಳ್ಳಿ

Photo by Héctor J. Rivas on Unsplash


Image under CC0 Public domain 14 | PSYCHE | 2022


ಜಂಗಿಯನ್ ಅನಲಿಸ್‌ಕ್ಯಾಥರೀನ್‌ ಮೋರಿಯು ಅವರ ಮೇರಿ-ಲೂಯೀ ವಾನ್‌ ಫ್ರಾಂಜ್ಸ್‌ಮೂಲಕ ವಿಕಸಿತಗೊಳಿಸಿರುವ ಪ್ರಾಯೋಗಿಕ ಮಾರ್ಗದರ್ಶಿಯನ್ನು ಅನುಸರಿಸಲಾಗಿದೆ.

ಶೀರ್ಷಿಕೆ – ಕಥೆಯ ಬಗ್ಗೆ ಒಂದು ವಾಕ್ಯದ ಸಾರಂಶ. ನಾಟಕದ ವ್ಯಕ್ತಿಗಳು: ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳು, ಕಥೆಗೆ ಹೇಗೆ ಪ್ರಸ್ತುತವಾಗುತ್ತಾರೆ? ಪ್ರತಿಯೊಂದು ಪಾತ್ರವನ್ನೂ ಸಂಪೂರ್ಣವಾಗಿ ತಿಳಿದುಕೊಳ್ಳುವುದರಿಂದ ಅವು ಪ್ರತಿಬಿಂಬಿಸುವ ಮನಸ್ಸಿನ ಸ್ವರೂಪದ ಅರಿವಾಗುತ್ತದೆ. ಮುಖ್ಯ ವಾಕ್ಯಗಳು: ಕೆಲವೊಮ್ಮೆ ಕಥೆಯಲ್ಲಿನ ತುಣುಕುಗಳು ಉಪ ಕಥೆಗಳಂತೆ ತೋರುತ್ತವೆ. ಅಂತಹ ವಾಕ್ಯಗಳನ್ನು ಗಮನಿಸಿ, ಕಥೆಯ ವಿಷಯ ವಸ್ತು ಹೇಗೆ ತೆರೆದುಕೊಳ್ಳುತ್ತದೆ ಎಂದು ತಿಳಿದುಕೊಳ್ಳಿ. ಚಟುವಟಿಕೆ:‌ಪ್ರತಿಯೊಂದು ಪಾತ್ರಕ್ಕೆ ಸಂಬಂಧಿಸಿದಂತೆ, ಯಾರು, ಏಕೆ, ಯಾವಾಗ, ಎಲ್ಲಿ, ಯಾವ ಕಾರ್ಯವನ್ನು ಮಾಡುತ್ತಾರೆ ಎಂಬ ವಿವಿಧ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳುವ ವಿಧಾನ. ಸೋಲು ಮತ್ತು ಗೆಲುವು: ಕಥೆಯ ಪ್ರತಿಯೊಂದು ಪಾತ್ರದಲ್ಲಿನ ವ್ಯಕ್ತಿಯು ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂದು ಬರೆದುಕೊಳ್ಳ ಬೇಕು. ಮಾದರಿ ಸಂರಚನೆಗಳು ಮತ್ತು ಸಂದರ್ಭಗಳು: ಕಥೆಯಲ್ಲಿ ಬರುವ ವಿವಿಧ ಮೂಲ ಮಾದರಿಯ ಆಕೃತಿಗಳನ್ನು ಗುರುತಿಸಬೇಕು. ಈ ವಿವರಣೆಗಳನ್ನು ಗುರುತಿಸುವುದು, ಕಥೆಯು ನಿರೂಪಿಸುತ್ತಿರುವ ಮಾನಸಿಕ ವಿಶ್ಲೇಷಣೆ ಮತ್ತು ಪ್ರತ್ಯೆಕ ಪಾತ್ರದ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಸಹಕಾರಿ. ಅನ್ಯ ಕಥೆಗಳೊಂದಿಗೆ ಸಮಾನತೆ: ಇಲ್ಲಿ, ಈ ಕಥೆಯ ಉದ್ದೇಶ ಮತ್ತು ಬೇರೆ ಕಥೆಗಳ ಉದ್ದೇಶದ ನಡುವೆ ಸಮಾನತೆ ಇದೆಯೇ ಎಂದು ಗಮನಿಸುತ್ತೇವೆ.

15


ನಾವು ನಮ್ಮ ಆಯ್ಕೆಯ ಕಿನ್ನರ ಕಥೆಯನ್ನು ವಿಮರ್ಷಿಸೋಣ! ಕಥೆಯನ್ನು ನಿಧಾನವಾಗಿ ಗಮನವಿಟ್ಟು ಓದಿ ಮೇಲೆ ಸೂಚಿಸಿರುವ ಅಂಶಗಳನ್ನು ಗುರುತಿಸಿ. ನಿಮ್ಮ ಟಿಪ್ಪಣಿಗಳು ಹಾಗು ಅವಲೋಕನಗಳಿಗಾಗಿ ಈ ಜಾಗವನ್ನು ಬಳಿಸಿಕೊಳ್ಳಿ

◆ ಮನೋವಿಶ್ಲೇಷಣೆಯ ಪದ್ಧತಿಯಲ್ಲಿ, ಮೂಲ ಕಿನ್ನರ ಕಥೆಗಳನ್ನು ಬಳಸಿಕೊಂಡು ಕಾಲಕ್ಕೆ ತಕ್ಕಂತಹ ಕಥೆಗಳನ್ನು ಹೆಣೆದು, ಆಲೋಚನೆಗಳ ಮನೋ ವಿಶ್ಲೇಷಣೆ ಮಾಡಲಾಗುತ್ತದೆ. ಜನರು “ಎಲ್ಲ ಕಥೆಗಳೂ ಮುಗಿದವೇ? “ ಎಂದು ಕೇಳುವಷ್ಟು, ಒಂದೇ ಕಥೆಯ ಹಲವು ಭಿನ್ನ ಕುತೂಹಲಕಾರಿ ರೂಪಾಂತರಗಳು ಸೃಷ್ಟಿಯಾಗಿವೆ. ಬಹುಶಃ ನಿಮ್ಮ ದೃಷ್ಟಿಯಿಂದ ನಿಮ್ಮದೇ ಶೈಲಿಯಲ್ಲಿ ಕಥೆಗಳನ್ನು ಹೇಳಿರುವುದುದಿಲ್ಲವೇನೋ. ◆ ನಿಮ್ಮ ಇಚ್ಛೆಯ ಕಿನ್ನರ ಕಥೆಯನ್ನು ನಿಮ್ಮದೇ ಶೈಲಿಯಲ್ಲಿ ಹೇಗೆ ಹೇಳುವಿರಿ? ಶಾಸ್ತ್ರೀಯ ಕಥೆಗಳ ವಿವಿಧ ರೂಪಗಳನ್ನು ರಚಿಸಿ ಅವುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳ ಬಹುದು. ಅನ್ಯ ಪಾತ್ರಗಳ ಆಲೋಚನೆಗಳೇನು, ಖಳ ನಾಯಕ ಏಕೆ ಕೆಟ್ಟವನು? ದೊಡ್ಡ ನಗರದಲ್ಲಿ ಅಥವಾ ಹೊರ ಆವರಣದಲ್ಲಿ ಕಥೆಯು ನಡೆದಿದ್ದರೆ ಹೇಗಿರುತ್ತಿತ್ತು? ಪಾತ್ರಗಳು ಮುಂದೆ ಎಂದೆಂದಿಗೂ ಸುಖವಾಗಿ ಜೀವಿಸಿದ ನಂತರ ಏನಾಗುತ್ತದೆ? 16 | PSYCHE | 2022


ನೀವು ನಿಮ್ಮದೇ ರೀತಿಯಲ್ಲಿ ಆಡಿಯೋ ಕ್ಲಿಪ್‌, ಕಾಮಿಕ್‌ಸ್ಟ್ರಿಪ್‌ಅಥವಾ ಬರವಣಿಗೆಯ ಮೂಲಕ ಕಥೆಯನ್ನು ಹೇಳಬಹುದು. ಕಿನ್ನರ ಕಥೆಗಳ ರೂಪಾಂತರಗಳನ್ನು ಹೆಣೆಯಲು ಮೂಲ ಮಾರ್ಗದರ್ಶಿ ಇಲ್ಲಿದೆ.

ಒಂದು ಕಿನ್ನರ ಕಥೆಯನ್ನು ಪುನಃ ನಿರ್ಮಿಸಲು ಆಯ್ದುಕೊಳ್ಳಿ. ನಿಮ್ಮ ಆಯ್ಕೆಯ ಕಥೆಯನ್ನು ಪುನಃ ಓದಿ, ಅದನ್ನು ಹೇಗೆ ಪುನಃ ರಚಿಸುವಿರಿ ಎಂದು ಆಲೋಚಿಸಿ. ಓದಿಸಿಕೊಂಡು ಹೋಗುವಂತಹ ಕುತೂಹಲಕಾರಿ ಕಥೆಯನ್ನು ಆರಿಸಿಕೊಳ್ಳಿ.

ಹೊಸ ದೃಷ್ಟಿಯಲ್ಲಿ ವೀಕ್ಷಿಸಿ ಕಥೆಯಲ್ಲಿ ಬರುವ ವಿರಳ ಪಾತ್ರದ ದೃಷ್ಟಿಯಿಂದ ಕಿನ್ನರ ಕಥೆಯನ್ನು ಬರೆಯಲು ಪ್ರಯತ್ನ ಮಾಡಿ. ಉದಾಹರಣೆಗೆ, ಅಜ್ಜಿಯ ದೃಷ್ಟಿಯಿಂದ “ಲಿಟಲ್‌ರೆಡ್‌ರೈಡಿಂಗ್‌ ಹೂಡ್‌” ಕಥೆಯನ್ನು ರಚಿಸುವುದು. ವೇದಿಕೆಯನ್ನು ಆಧುನಿಕವಾಗಿರಿಸಿ ಪಾತ್ರಗಳನ್ನು ಮತ್ತು ಕಥಾವಸ್ತುವನ್ನು ಹೊಸ ಆಯಾಮದಲ್ಲಿ ರಚಿಸಿ. ಕಥೆಯು ಕುತೂಹಲಕಾರಿಯಾಗಿ ಓದುಗರನ್ನು ರಂಜಿಸುತ್ತದೆ. ಮುಖ್ಯ ಪಾತ್ರಗಳಿಗೆ ಹೊಸ ರೂಪ ನೀಡಿ ಕಿನ್ನರ ಕಥೆಯ ಮುಖ್ಯ ಪಾತ್ರಗಳನ್ನು ಹೊಸದಾಗಿ ನಿಮ್ಮದೇ ಶೈಲಿಯಲ್ಲಿ ರಚಿಸಿ. ಪಾತ್ರಗಳನ್ನು ವಿಸ್ತರಿಸಿ ಹೆಚ್ಚು ಅರ್ಥವತ್ತಾದ ಪಾತ್ರಗಳನ್ನಾಗಿಸಿ. ಕಥಾ ವಸ್ತುವನ್ನು ಬೇಕಾದಂತೆ ಹೊಂದಿಸಿ ಅಥವಾ ವಿಸ್ತರಿಸಿ ನಿಮ್ಮ ಅಭಿವ್ಯಕ್ತಿಗೆ ಸರಿಹೊಂದುವಂತೆ ಕಥಾ ವಸ್ತುವಿನಲ್ಲಿ ಬದಲಾವಣೆಗಳನ್ನು ನಿಮಗೆ ಬೇಕಾದಂತೆ ಹೊಂದಿಸಿ ಅಥವಾ ವಿಸ್ತರಿಸಿ. ಕಿನ್ನರ ಕಥೆಗಳ ಪುನರುಕ್ತಿಗಳ ಉದಾಹರಣೆಗಳನ್ನು ಓದಿ. ಆಧುನಿಕ ಸಾಹಿತ್ಯದಲ್ಲಿ ಬಹಳಷ್ಟು ಕಿನ್ನರ ಕಥೆಗಳನ್ನು ಹೊಸ ಬಗೆಯಲ್ಲಿ ಹೆಣೆಯಲಾಗಿದೆ. ವಿಭಿನ್ನ ದೃಷ್ಟಿಕೋನ, ಕಥೆಯ ತಾಣಗಳಲ್ಲಿ ಹೊಸತನ, ಮುಂತಾದ ಬದಲಾವಣೆಗಳನ್ನು ಮಾಡಿರುತ್ತಾರೆ. ಈ ಕೆಳಕಂಡ ಉದಾಹರಣೆಗಳನ್ನು ಓದ ಬಹುದು:

17


ನಿಮ್ಮ ನೀತಿ ಸೂಜಿಯ ಏನನ್ನು ತೋರುತ್ತದೆ

Photo by Sebastian Voortman from Pexels


ಯು

3 ಕಥೆ ಇಲ್ಲವೇ ಚಲನಚಿತ್ರವನ್ನು ನಿರ್ಮಿಸುವಾಗ, ಲೇಖಕರು ಓದುಗರ ಆಸಕ್ತಿಯನ್ನು ಮನದಲ್ಲಿಟ್ಟುಕೊಂಡು ಕಥೆಯ ಹಂದರವನ್ನು ಹೆಣೆದು ಪಾತ್ರಗಳನ್ನು ಸೃಷ್ಟಿಸುತ್ತಾರೆ. ಓದುಗರ ಭಾವನೆಗಳಿಗೆ ಅನುಗುಣವಾಗಿ ಮೂಖ್ಯ ಪಾತ್ರವು ನೀತಿಗೆ ಸಂಬಂಧಿಸಿದ ಇಕ್ಕಟ್ಟನ್ನು ಎದುರಿಸುವ ಸನ್ನಿವೇಶವನ್ನು ಸೃಷ್ಟಿಸುವುದು ಒಂದು ವಿಧಾನ. ಚಿಕ್ಕಂದಿನ ವಯಸ್ಸಿನಲ್ಲಿ ನಿಮ್ಮ ಎದುರು ಎರಡು ಆಯ್ಕೆಗಳಿದ್ದು ಎರಡೂ ನೀರಸವಾಗಿ ತೋರಿದ್ದು ನೆನಪಿದೆಯೇ? ಬಹುಶಃ ಸುಳ್ಳು ಹೇಳುವ ಆಯ್ಕೆ ಅಥವಾ ನಿಜವನ್ನು ಹೇಳಿ ಅದರ ಪರಿಣಾಮವನ್ನು ಅನುಭವಿಸ ಬೇಕಾದ ಸಂದರ್ಭ. ಇದನ್ನೇ ಉಭಯ ಸಂಕಟ ಎನ್ನುವುದು: ಒಪ್ಪಿಕೊಳ್ಳುವಂತಹ ಪರಿಹಾರ ಇಲ್ಲವಾದ ಪರಿಸ್ಥಿತಿ. ಸಾಹಿತ್ಯದಲ್ಲಿ, ಮುಖ್ಯ ಪಾತ್ರಗಳು ಎದುರಿಸುವ ಸಂದಿಗ್ಧತೆಯ ಸುತ್ತಲೂ ಕಥೆಯನ್ನು ಹೆಣೆಯಲಾಗಿರುತ್ತದೆ.

19


ಒಂದು ಸೇತುವೆಯ ಮೇಲೆ ನೀವು ನಿಂತಿದ್ದೀರಿ ಅಂದುಕೊಳ್ಳಿ. ಕೆಳಗಡೆ ರೈಲು ಹಳಿಗಳು ಕಾಣುತ್ತಿವೆ. ರೈಲು ಹಳಿಯು ಇಬ್ಬಾಗವಾಗುತ್ತದೆ, ಒಂದು ರೈಲು ಹಳಿಗೆ ಒಬ್ಬ ವ್ಯಕ್ತಿಯನ್ನು ಕಟ್ಟು ಹಾಕಲಾಗಿದೆ ಮತ್ತೊಂದು ರೈಲು ಹಳಿಗೆ ಐದು ಜನರನ್ನು ಕಟ್ಟು ಹಾಕಲಾಗಿದೆ. ಓಡುತ್ತಿರುವ ಟ್ರಾಲಿಯೊಂದು ಐದು ಜನರಿರುವ ಹಳಿಯ ಮೇಲೆ ವೇಗವಾಗಿ ಧಾವಿಸುತ್ತಿದೆ. ಸೇತುವೆಯ ಮೇಲೆ ಒಂದು ಸ್ವಿಚ್‌ನೀಡಲಾಗಿದೆ. ಅದನ್ನು ಒತ್ತಿ ಟ್ರಾಲಿಯ ಹಾದಿಯನ್ನು ಒಬ್ಬ ವ್ಯಕ್ತಿಯಿರುವ ಹಳಿಗೆ ಟ್ರಾಲಿಯು ಚಲಿಸುವಂತೆ ಬದದಲಿಸ ಬಹುದು. ನೀವು ಏನು ಮಾಡುತ್ತೀರಿ? ನಿಮ್ಮ ಟಿಪ್ಪಣಿಗಳು ಹಾಗು ಅವಲೋಕನಗಳಿಗಾಗಿ ಈ ಜಾಗವನ್ನು ಬಳಿಸಿಕೊಳ್ಳಿ

ಈಗ ಇನ್ನೊಂದು ಆಯ್ಕೆಯನ್ನು ಮಾಡಬೇಕು. ನೀವು ಅದೇ ಸೇತುವೆಯ ಮೇಲೆ ರೈಲು ಹಳಿಗಳನ್ನು ನೋಡುತ್ತಿದ್ದೀರಿ. ಸೇತುವೆಯ ಮೇಲೆ ಗೋರಿಲ್ಲಾ ಇದೆ. ಈ ಬಾರಿ ರೈಲು ಹಳಿಗೆ ಐದು ಜನರನ್ನು ಕಟ್ಟು ಹಾಕಲಾಗಿದೆ. ಏಕಾಏಕಿ, ಟ್ರಾಲಿಯೊಂದು ಐದು ಜನರಿರುವ ಹಳಿಯ ಮೇಲೆ ವೇಗವಾಗಿ ಧಾವಿಸುತ್ತದೆ. ಗೋರಿಲ್ಲವನ್ನು ಸೇತುವೆಯಿಂದ ತಳ್ಳಿದರೆ, ಟ್ರಾಲಿಯ ಎದುರು ಜಿಗಿದು ಸಾಯುತ್ತದೆ, ಟ್ರಾಲಿಯು ನಿಲ್ಲುತ್ತದೆ ಆದರೆ ಐದು ಜನರನ್ನೂ ಉಳಿಸ ಬಹುದು ಎಂದು ನೀವು ಬಲ್ಲಿರಿ. ನೀವು ಏನು ಮಾಡುತ್ತೀರಿ?

20 | PSYCHE | 2022


“ಟ್ರಾಲಿ ಸಮಸ್ಯೆ”ಯು, ದಾರ್ಶನಿಕರಾದ ಫಿಲಿಪ್ಪ್‌ಫುಟ್‌ಮತ್ತು ಜುಡಿಥ್‌ಥಾಮ್ಸನ್‌ ಅವರು ಹೆಣೆದಿರುವ ನೀತಿಗೆ ಸಂಬಂಧಿಸಿದ ಶಾಸ್ತ್ರೀಯ ಪ್ರಯೋಗ ಮೊದಲನೇ ಸಂದರ್ಭದಲ್ಲಿ, ಶೇಕಡ 90 ರಷ್ಟು ಜನರು ತಾವು ಸ್ವಿಚ್ಚನ್ನು ಒತ್ತಿ, ಒಬ್ಬ ವ್ಯಕ್ತಿಯನ್ನು ತೊರೆದು ಐದು ಜನರನ್ನು ಉಳಿಸುವುದಾಗಿ ಹೇಳಿದರು. ಅದೇ ಎರಡನೆಯ ಪರಿಸ್ಥಿತಿಯಲ್ಲಿ ಶೇಕಡ 90 ರಷ್ಟು ಜನರು ಗೋರಿಲ್ಲಾವನ್ನು ತಳ್ಳುವುದಿಲ್ಲ ಎಂದು ಉತ್ತರಿಸಿದರು. ಈ ಪ್ರತಿಕ್ರಿಯೆಯು ಪುರುಷರು, ಮಹಿಳೆಯರು ಹಾಗೂ ವಿವಿಧ ಶಿಕ್ಷಣ ಹಂತಗಳ ಜನರಿಗೆ ಸಮಾನವಾಗಿ ಅನ್ವಯವಾಗುತ್ತದೆ. ಇಬ್ಬಂದಿ ಪ್ರಭಾವದ ಸಿದ್ಧಾಂತವನ್ನು ಬಹು ಬಗೆಯಲ್ಲಿ ಅರ್ಥೈಸಲು ಟ್ರಾಲಿ ಸಮಸ್ಯೆಯ ವಿವಿಧ ಪ್ರಕಾರಗಳನ್ನು ಬಳಸಲಾಗಿದೆ. ಹಾನಿ ಮಾಡುವುದಕ್ಕೂ ಹಾನಿಯಾಗಲು ಎಣೆಮಾಡಿಕೊಡುವುದಕ್ಕೂ ವ್ಯತ್ಯಾಸವನ್ನು ಸಹ ಕಂಡುಕೊಳ್ಳ ಬಹುದು. ನಿಮ್ಮದೇ ರೀತಿಯಲ್ಲಿ ಟ್ರಾಲಿ ಸಮಸ್ಯೆಯನ್ನು ಸೃಜಿಸಿ! ನಿಮ್ಮ ಕಥೆಗೆ ಆಧುನಿಕ ಅಂಶಗಳನ್ನು ಸೇರಿಸ ಬಹುದು.(ಉದಾಹರಣೆಗೆ ಟ್ರಾಲಿಯ ಬದಲು ನೀವೇ ಓಡಿಸುತ್ತಿರುವ ಕಾರು, ಅಥವಾ ಡಿಕ್ಕಿ ಹೊಡೆದು ಹಾದು ಹೋಗುವ ಬದಲು, ರಸ್ತೆಯಲ್ಲಿ ಸಾಗುತ್ತಿರುವ ಆಂಬುಲೆಂಸ್‌ವಾಹನವು ಒಬ್ಬ ವ್ಯಕ್ತಿಯನ್ನು ಉಳಿಸುವುದೋ ಅಥವಾ ಐದು ಜನರನ್ನು ಉಳಿಸಬೇಕೋ ಎಂಬ ದ್ವಂದ್ವ ಪರಿಸ್ಥಿತಿ). ಟ್ರಾಲಿ ಸಮಸ್ಯೆಗೆ ಸಮನಾದ ಕೆಲವು ಪರಿಸ್ಥಿಗಳು ಈ ಕೆಳಕಂಡಂತೆ ಇವೆ.

ಫುಟ್‌ಬ್ರಿಡ್ಜ್:‌ ಫ್ರಾಂಕ್‌, ರೈಲು ಹಳಿಯ ಮೇಲೆ ಕಟ್ಟಿರುವ ಮೇಲು ಸೇತುವೆಯ ಮೇಲೆ ನಿಂತಿದ್ದಾನೆ. ವೇಗವಾಗಿ ಓಡಿ ಬರುತ್ತಿರುವ ರೈಲು ನಿಯಂತ್ರಣ ತಪಿದೆ ಎಂದು ಈತ ತಿಳಿದುಕೊಳ್ಳುತ್ತಾನೆ. ಸೇತುವೆಯ ಕೆಳಗೆ ಕಡಿದಾಗಿರುವ ಪ್ರದೇಶದಲ್ಲಿ ರೈಲು ಹಳಿಯ ಮೇಲೆ ಐದು ಜನರಿದ್ದಾರೆ; ಆದರೆ, ರೈಲು ಬರುವಷ್ಟರಲ್ಲಿ ಅವರು ರೈಲು ಹಳಿಯಿಂದ ದುಮುಕಿ ಪಾರಾಗಲಾರರು. ಸಾಗಿ ಬರುತ್ತಿರುವ ರೈಲಿನ ಎದುರು ಭಾರವಾದ ವಸ್ತುವನ್ನು ಎಸೆದು ರೈಲನ್ನು ನಿಲ್ಲಿಸ ಬಹುದು ಎಂದು ಫ್ರಾಂಕ್‌ಗೆ ಗೊತ್ತು. ಅವನು ನಿಂತಿರುವ ಸೇತುವೆಯ ಮೇಲೆಯೇ ದಪ್ಪನೆಯ ವ್ಯಕ್ತಿಯೊಬ್ಬರು ಬ್ಯಾಕ್‌ಪ್ಯಾಕ್‌ಹಾಕಿಕೊಂಡು ನಿಂತಿದ್ದಾರೆ. ಅವರನ್ನು ರೈಲಿನ ಎದುರು ತಳ್ಳಿದ್ದರೆ ರೈಲು ನಿಲ್ಲುತ್ತದೆ, ಐದು ಜನರು ಉಳಿಯಬಹುದು. ಆದರೆ ಫ್ರಾಂಕ್‌ಆ ವ್ಯಕ್ತಿಯನ್ನು ತಳ್ಳುವನೇ? ಅದು ನೀತಿಯ ಪ್ರಕಾರ ಸರಿಯೇ?

21


ಸಂಸಾಧನಗಳ ಕೊರತೆ: ಆಲಿಸ್‌, ಆಸ್ಪತ್ರೆಯ ತುರ್ತು ಪರಿಸ್ಥಿತಿ ಕೊಠಡಿಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು. ಅಪಘಾತಕ್ಕೆ ಈಡಾಗಿರುವ ಆರು ಜನರನ್ನು ಆಸ್ಪತ್ರೆಗೆ ಕರೆತರಲಾಗಿದೆ. ಎಲ್ಲರೂ ಜೀವಾಪಾಯದಲ್ಲಿದ್ದಾರೆ. ಆದರೆ ಅವರಲ್ಲಿ ಒಬ್ಬ ವ್ಯಕ್ತಿಯು ಗಂಭೀರ ಸ್ಥಿತಿಯಲ್ಲಿದ್ದಾನೆ. ಆಲೀಸ್‌ಗಮನ ವಹಿಸಿ ಚಿಕಿತ್ಸೆ ನೀಡಿದರೆ ಕೇವಲ ಆ ವ್ಯಕ್ತಿಯನ್ನು ಉಳಿಸಿಕೊಂಡರೆ ಮಿಕ್ಕ ಐವರು ಸಾಯುತ್ತಾರೆ. ಆದರೆ, ಈ ಐದು ಜನರಿಗೆ ಚಿಕಿತ್ಸೆ ನೀಡಲು ಆಲೀಸ್‌ಮುಂದಾದರೆ, ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯು ಸಾಯುತ್ತಾನೆ. ಹಾಗಾದರೆ,ಅತಿ ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಕಾಪಾಡುವುದು ಇಲ್ಲವೇ ಬಿಡುವುದು ಎಷ್ಟರ ಮಟ್ಟಿಗೆ ಸರಿ?

ಅಂಗ ಅಳವಡಿಕೆ: ಬಾಬ್‌ಅಂಗ ಅಳವಡಿಕೆ ಸರ್ಜನ್.‌ ಐದು ರೋಗಿಗಳು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಪ್ರತಿಯೊಬ್ಬರಿಗೂ ಬೇರೆ ಬೇರೆ ಅಂಗಗಳ ಅವಶ್ಯಕತೆ ಇದೆ. ಒಬ್ಬರಿಗೆ ಕಿಡ್ನಿ, ಮತ್ತೊಬ್ಬರಿಗೆ ಶ್ವಾಸಕೋಶ, ಮೂರನೆಯವರಿಗೆ ಹೃದಯ ಹೀಗೆ. ಒಬ್ಬ ಆರೋಗ್ಯವಂತ ವ್ಯಕ್ತಿಯ ಅಂಗಗಳನ್ನು ತೆಗೆದು ಬೇರೆ ಬೇರೆಯಾಗಿಸಿ ಈ ಐದು ಜನರಿಗೆ ಅಳವಡಿಸಿದರೆ, ಒಬ್ಬರ ಪ್ರಾಣ ತ್ಯಾಗದಿಂದ ಐವರೂ ಬದುಕುತ್ತಾರೆ ಎಂದು ಬಾಬ್ ಗೆ ತಿಳಿದಿದೆ. ಕೊಠಡಿ ಸಂಖ್ಯೆ 306 ರಲ್ಲಿ ಅಂತಹ ಆರೋಗ್ಯಕರ ಮಹಿಳೆಯೊಬ್ಬರು ದೇಹದ ಸಾಮಾನ್ಯ ಪರೀಕ್ಷೆಗಾಗಿ ಬಂದಿದ್ದಾರೆ. ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಅವರ ಅಂಗಾಶ (ಟಿಶ್ಯೂ) ಈ ಐವರ ಟಿಶ್ಯೂಗೆ ಹೊಂದುತ್ತದೆ ಎಂದು ಬಾಬ್‌ಆ ಮಹಿಳೆಯನ್ನು ಪರೀಕ್ಷಿಸಿ ತಿಳಿದಿದ್ದಾನೆ. ಬಾಬ್‌ಈಗ ಏನೂ ಮಾಡದಿದ್ದರೆ ಸಹಜವಾಗಿಯೇ ಆಕೆ ಆರೋಗ್ಯವಾಗಿ ಬದುಕುತ್ತಾರೆ. ಇಲ್ಲದೇ, ಆ ಮಹಿಳೆಯ ಅಂಗಾಂಗಗಳನ್ನು ಸೀಳಿ ತೆಗೆದು ಈ ಐವರು ರೋಗಿಗಳಿಗೆ ಅಳವಡಿಸಿ ಅವರನ್ನು ಉಳಿಸಿಕೊಳ್ಳ ಬಹುದು. ಹೀಗೆ ಮಾಡುವುದು ಬಾಬ್‌ಗೆ ಸರಿಯೇ?

22 | PSYCHE | 2022


ನಿಮ್ಮ ಟಿಪ್ಪಣಿಗಳು ಹಾಗು ಅವಲೋಕನಗಳಿಗಾಗಿ ಈ ಜಾಗವನ್ನು ಬಳಿಸಿಕೊಳ್ಳಿ

23


4 ರೋಗಿಗಳೊಂದಿಗೆ ವ್ಯವಹರಿಸಿ, ಮನೋವೈಜ್ಞಾನಿಕ ಸಂಶೋಧನೆಯನ್ನು ಮಾಡುವಾಗ ನೈತಿಕ ಬಾಧ್ಯತೆಗಳು ಸದಾ ಉದ್ಭವಿಸುತ್ತವೆ. ಪ್ರಾಯೋಗಿಕ ಅಭ್ಯಾಸಗಳಲ್ಲಿ, ಇಂದಿನ ನೈತಿಕ ಮಾನಕೀಕರಣವನ್ನು ಉಲ್ಲಂಘಿಸುವ ಪ್ರಯೋಗಗಳನ್ನು ಇತಿಹಾಸದಲ್ಲಿ ಕಾಣಬಹುದು. ಉದಾಹರಣೆಗೆ, ಮಿಗ್ರಾಂ ನ ಕುಖ್ಯಾತ ವಿಧೇಯತೆ ಪ್ರಯೋಗ obedience experiment . ಈ ಪ್ರಯೋಗದಲ್ಲಿ, ಪ್ರಯೋಗಕ್ಕೆ ಒಳಗಾದ ವ್ಯಕ್ತಿಗಳು, ಬೇರೆ ವ್ಯಕ್ತಿಗಳಿಗೆ ನೋವಾಗುವಂತಹ, ಪ್ರಾಣಾಂತಕ, ಎಲೆಕ್ಟ್ರಿಕ್‌ಶಾಕ್‌ ನೀಡುತ್ತಿದ್ದಾರೆಂದು ನಂಬಿಸಲಾಗುಗಿತ್ತು. ಇಂತಹ ವಿರೋಧಾಭಾಸಕರ ಮನೋವೈಜ್ಞಾನಿಕ ಪ್ರಯೋಗಗಳು, ನೀತಿ ಮಾರ್ಗದರ್ಶಿಗಳನ್ನು ರೂಪಿಸುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಿವೆ, ಮನೋವಿಜ್ಞಾನಿಗಳು ಈ ನಿಯಮಗಳನ್ನು ಇಂದು ಪಾಲಿಸ ಬೇಕಾಗಿದೆ. ಅಮೇರಿಕಾದ ಮನೋವೈಜ್ಞಾನಿಕ ಸಂಘವು ಸ್ಥಾಪಿಸಿರುವ ನೈತಿಕ ಸಂಹಿತೆಗಳು, ಮನೋವೈಜ್ಞಾನಿಕ ಸಂಶೋಧನಾ ಪ್ರಯೋಗಗಳಲ್ಲಿ ಭಾಗವಹಿಸುವ ಸ್ವೈಚ್ಛಿಕ ವ್ಯಕ್ತಿಗಳ ಸುರಕ್ಷತೆ ಮತ್ತು ಹಿತಾಸಕ್ತಿಯನ್ನು ಸಂರಕ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ. ನೀತಿ ಮಾರ್ಗದರ್ಶಿಗಳ ಬಗ್ಗೆ ಇನ್ನೂ ಹಲವಾರು ವಾದವಿವಾದಗಳು ಇದ್ದರೂ, ಮಾನವರ ಮೇಲೆ ಸಂಶೋಧನೆಗಳನ್ನು ನಡೆಸಬೇಕಾದರೆ, ಕೆಲವು ಬಹು ಮುಖ್ಯ ಅಂಶಗಳನ್ನು ಪಾಲಿಸಲೇ ಬೇಕು. 24 | PSYCHE | 2022


ಒಂದು ಪ್ರಕರಣದ ಅಧ್ಯಯನ: ಭಾಷೆಯ ಅರ್ಥೈಸುವಿಕೆ

Photo by Suzy Hazelwood on Pexels


ವ್ಯಕ್ತಿಗಳು ತಮ್ಮ ಸ್ವ ಇಚ್ಛೆಯಿಂದ ಭಾಗವಹಿಸಬೇಕು. ಸ್ವ ಇಚ್ಛೆಯಿಂದ ಭಾಗವಹಿಸುವ ವ್ಯಕ್ತಿಗಳ ಮೇಲೆಯೇ ನೈತಿಕವಾಗಿ ಸಂಶೋಧನೆಯನ್ನು ಮಾಡ ಬಹುದು. ಇಂತಹ ಸ್ವ ಇಚ್ಛೆಯಿಂದ ಭಾಗವಹಿಸುವ ವ್ಯಕ್ತಿಗಳಿಗೆ ಯಾವುದೇ ವತ್ತಡ, ಬೆದರಿಕೆ ಅಥವಾ ಆಮಿಷಗಳನ್ನು ಒಡ್ಡ ಬಾರದು. ಅದರಲ್ಲೂ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾರಾಗೃಹಗಳಲ್ಲಿ, ಸ್ವ ಇಚ್ಛೆಯಿಂದ ಮುಂಬರುವ ವಿದ್ಯಾರ್ಥಿಗಳು ಮತ್ತು ಅಪರಾಧಿಗಳ ಮೇಲೆ ನಡೆಸುವ ಸಂಶೋಧನೆಗಳಲ್ಲಿ ಈ ಅಂಶವು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಸಂಶೋಧಕರು ಮೊದಲೇ ಮಾಹಿತಿ ನೀಡಿ ಸ್ವೀಕೃತಿಯನ್ನು ಪಡೆದಿರಬೇಕು. ಎಲ್ಲ ಪ್ರಕ್ರಿಯೆಗಳು ಹಾಗೂ ಸಂಭವಿಸ ಬಹುದಾದ ಅಪಾಯಗಳ ಬಗ್ಗೆ ಭಾಗವಹಿಸುವವರಿಗೆ ಮೊದಲೇ ಮಾಹಿತಿ ನೀಡಿ, ಅವರ ಸ್ವೀಕೃತಿಯನ್ನು ಪಡೆಯುವುದು ಕಾರ್ಯ ಪದ್ಧತಿ. ಸ್ವೀಕೃತಿಯನ್ನು ಬರಹ ರೂಪದಲ್ಲಿ ದಾಖಲಿಸ ಬೇಕು. ಮೊದಲೇ ಮಾಹಿತಿ ನೀಡಿ ಸ್ವೀಕೃತಿಯನ್ನು ಪಡೆಯುವುದರಿಂದ ಸಹಭಾಗಿಗಳು ಅವರ ಮೇಲೆ ನಡೆಸುವ ಪ್ರಯೋಗಗಳ ಬಗ್ಗೆ ಸಾಕಷ್ಟು ವಿಷಯವನ್ನು ತಿಳಿದುಕೊಂಡು ಪ್ರಯೋಗಗಳಲ್ಲಿ ಭಾಗವಹಿಸ ಬೇಕೇ ಇಲ್ಲವೇ ಎಂಬುದನ್ನು ನಿರ್ಧರಿಸ ಬಹುದು. ಸಂಶೋಧಕರು ಭಾಗವಹಿಸುವ ವ್ಯಕ್ತಿಗಳ ಗೋಪ್ಯವನ್ನು ಕಾಪಾಡ ಬೇಕು. ಗೋಪ್ಯವನ್ನು ಕಾಪಾಡುವುದು ಮನೋವೈಜ್ಞಾನಿಕ ಸಂಶೋಧನೆಯ ಆವಶ್ಯಕ ಅಂಶವಾಗಿದೆ. ಅಧ್ಯಯನ ಸಮಯದಲ್ಲಿ, ಭಾಗವಹಿಸುವ ವ್ಯಕ್ತಿಗಳಿಗೆ, ತಮ್ಮ ಸ್ವಂತ ಅಭಿಪ್ರಾಯಗಳು ಮತ್ತು ವಿಷಯಗಳನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ ಎಂಬ ಆಶ್ವಾಸನೆಯನ್ನು ನೀಡುವು ಅವಶ್ಯಕ.

ಮನೋವೈಜ್ಞಾನಿಕ ಸಂಶೋಧನೆಯ ನೀತಿ ಹಾಗೂ ವಿಜ್ಙಾನಿಗಳ ಮತ್ತು ಭಾಗವಹಿಸಿದವರ ಕೋರಿಕೆಯ ನಡುವೆ ವಿವಾದವನ್ನು ಹುಟ್ಟಿಸಿದ, ಅತಿಯಾದ ಚರ್ಚೆಗೆ ಈಡಾಗಿರುವ ಒಂದು ಮುಖ್ಯವಾದ ಪ್ರಕರಣವನ್ನು ನೋಡೋಣ. ಮಾನವ ಸಂಪರ್ಕವೇ ಇಲ್ಲದೇ, ಸಾಮಾಜಿಕ ಪ್ರತ್ಯೇಕತೆಯಲ್ಲಿ ಬೆಳೆದಂತಹ ಮಕ್ಕಳ ಪ್ರಕರಣಗಳು ಬಹಳಷ್ಟಿವೆ. ಜೀನಿ ವಿಲೆ ಎಂಬ ಪುಟ್ಟ ಹುಡುಗಿಯ ಪ್ರಕರಣವು ಸಾರ್ವಜನಿಕ ಮತ್ತು ವೈಜ್ಞಾನಿಕ ಗಮನವನ್ನು ಸೆಳೆದಂತೆ ಬೇರೆ ಪ್ರಕರಣಗಳು ಗಮನ ಸೆಳೆದಿಲ್ಲವೇನೋ. ಈ ಹುಡುಗಿಯು ತನ್ನ ಇಡೀ ಬಾಲ್ಯವನ್ನು ಮುಚ್ಚಿದ ಕೊಠಡಿಯಲ್ಲಿಯೇ ಪ್ರತ್ಯೇಕತೆಯಲ್ಲಿ ದಶಕಕ್ಕೂ ಹೆಚ್ಚು ಕಾಲ ಉಪದ್ರವವನ್ನು ಅನುಭವಿಸುತ್ತಲೇ ಕಳೆದಳು.

ಈ ಪ್ರಕರಣವು (ವಿನ್ನಿ, “ಜೀನಿ ವಿಲೆ, ದಿ ಫೆಡರಲ್‌ಚೈಲ್ಟ್”)‌ಜೀನಿಯ ಜೀವನವನ್ನು , ಅವಳಿಗೆ ನೀಡಿದ ಚಿಕಿತ್ಸೆ, ಅವಳ ಮೇಲೆ ಎರಗಿದ ಉಪದ್ರವದ ಪ್ರಭಾವದಿಂದಾಗಿ ಅವಳ ಭಾಷಾ ವಿಕಸನದಲ್ಲಿ ಆದ ಕುಂದುಕೊರತೆಗಳನ್ನು ವಿಮರ್ಶಿಸುತ್ತದೆ.ಅವಳ ಜೀವನದ ನೈತಿಕ ಸಮಸ್ಯೆಗಳನ್ನೂ ವಿವರಿಸುತ್ತದೆ. 26 | PSYCHE | 2022


Although she lived with her father, mother, and brother, her father and brother would only bark or growl at her and her mother was only permitted very brief interactions. Genie’s father was intolerant of noise, so no TV or radio was played in the house. If Genie made any noise, she was physically beaten.

CASE FILE there’s an ethical dilemma in this kind of research. If you want to do rigorous science, then Genie’s interests are going to come second some of the time. If you only care about helping Genie, then you wouldn’t do a lot of the scientific research. So, what are you going to do?

27


28 | PSYCHE | 2022


ಜೀನಿ ವಿಲೆ, (ಏಪ್ರಿಲ್ 1957 ರಲ್ಲಿ ಜನನ) ಬಹಳವಾಗಿ ತಿರಸ್ಕೃತ ಮತ್ತು ಕಿರುಕುಳಕ್ಕೆ ಈಡಾಗಿದ್ದ ಮಗು. ಇವಳ 13 ನೇ ವರ್ಷದಲ್ಲಿ, ಇವಳನ್ನು ಹುಡುಕಿ ಆಡಳಿತವು ತನ್ನ ಅಭಿರಕ್ಷಣೆಗೆ ತೆಗೆದುಕೊಂಡಿತು. ಅಲ್ಲಿಯ ವರೆಗೂ ಆಕೆಯ ಜೀವನವು ದುರಂತಮಯವಾಗಿತ್ತು. ಅತ್ಯಂತ ಹೀನಕರ ಸಾಮಾಜಿಕ ಪ್ರತ್ಯೇಕತೆ ಮತ್ತು ಕೊರತೆಗಳಲ್ಲಿಯೇ ಜೀವನವನ್ನು ಕಳೆದಿದ್ದಂತಹ ಜೀನಿಯು ಮನೋ ಸಾಮಾಜಿಕ, ಭಾವನಾತ್ಮಕ ಮತ್ತು ಪ್ರಜ್ಞಾವಸ್ಥೆಯ ವಿಕಸನಗಳನ್ನು ಕುರಿತಂತಹ ಅಧ್ಯಯನಕ್ಕೆ ಮನೋವಿಜ್ಞಾನಿಗಳು, ಭಾಷಾತಜ್ಞರು ಮತ್ತು ಇತರೆ ಸಂಶೋಧಕರಿಗೆ ಅವಕಾಶವಾಗಿಯೂ ತೋರಿದಳು. ಅದರಲ್ಲೂ, ಭಾಷೆಯನ್ನು ಅರಿಯುವುದರ ಮಹತ್ವಪೂರ್ಣ ವಯಸ್ಸಿನ ಹಂತವನ್ನು ಮೀರಿದ ಜೀನಿ ತನ್ನ ಮೊದಲ ಭಾಷೆಯನ್ನು ಕಲಿಯಲು ಸಾಧ್ಯವೇ ಎಂಬುದರ ಅಧ್ಯಯನಕ್ಕೆ ಅವಕಾಶ ಸೃಷ್ಟಿಸಿದ್ದಳು.

ಮುಖ್ಯ ಅಂಶಗಳು: ಜೀನಿ ವಿಲೆ ◆ ಜೀನಿ ವಿಲೆಯನ್ನು 1970 ರಲ್ಲಿ, ಆಡಳಿತವು ಹುಡುಕುವವರೆಗೂ ತನ್ನ 13 ನೇ ವರ್ಷದ ವರೆಗೂ ಬಹಳವಾಗಿ ತಿರಸ್ಕೃತವಾಗಿದ್ದು ಹಿಂಸೆ-ಅತ್ಯಾಚಾರಕ್ಕೆ ಈಡಾಗಿದ್ದಳು. ◆ ಫೆಡೆರಲ್‌ಚಯಲ್ಡ್‌ಎಂದೇ ಪ್ರಚಲಿತವಾಗಿದ್ದ ಜೀನಿ ಸಂಶೋಧನೆಗೆ ಮುಖ್ಯವಾದ ಪ್ರಕರಣವಾದಳು. ಭಾಷೆಯನ್ನು ಅರಿಯುವುದರ ಮಹತ್ವಪೂರ್ಣ ವಯಸ್ಸಿನ ಹಂತವನ್ನು ಮೀರಿದ ಜೀನಿ ತನ್ನ ಮೊದಲ ಭಾಷೆಯನ್ನು ಕಲಿಯಲು ಸಾಧ್ಯವೇ ಎಂಬುದು ಅಧ್ಯಯನದ ಪ್ರಶ್ನೆ ಹಾಗೂ ಆಸಕ್ತಿಯಾಗಿತ್ತು. ◆ ಜೀನಿಯ ಪ್ರಕರಣವು ನೈತಿಕ ದ್ವಂದ್ವಕ್ಕೆ ಕಾರಣವಾಗಿತ್ತು, ಅವಳ ಆರೋಗ್ಯ ಮತ್ತು ಕ್ಷೇಮದ ರಕ್ಷಣೆ ಹಾಗೂ ಅವಳ ಬೆಳವಣಿಗೆಯ ಸಂಶೋಧನೆ ಇವುಗಳಲ್ಲಿನ ಪ್ರಾಶಸ್ತ್ಯ ಮುಖ್ಯವಾಗಿತ್ತು ಬಾಲ್ಯ ಜೀವನ ಮತ್ತು ಅನ್ವೇಷಣೆ ಜೀನಿ ವಿಲೆಯ ಪ್ರಕರಣವು ನವಂಬರ್‌4, 1970 ರಂದು ಬೆಳಕಿಗೆ ಬಂತು. ಇವಳ ಅರೆ ಅಂಧ ತಾಯಿಯು ಸಾಮಾಜಿಕ ಸೇವೆಗಳಿಗಾಗಿ ಅರ್ಜಿ ಸಲ್ಲಿಸಲು ಹೋದಾಗ ಸಮಾಜ ಸೇವಕರಿಗೆ ಜೀನಿ ದೊರಕಿದಳು. ಜೀನಿಯನ್ನು ಸುಮಾರು 20 ತಿಂಗಳ ಮಗುವಿನ ವಯಸ್ಸಿನಿಂದಲೇ ಕೋಣೆಯಲ್ಲಿ ಕೂಡು ಹಾಕಲಾಗಿತ್ತು. ಅವಳನ್ನು ಹುಡುಕಿದಾಗ ಅವಳಿಗೆ 13 ವರ್ಷ, 9 ತಿಂಗಳು ವಯಸ್ಸಾಗಿತ್ತು. ಅವಳು ಬಹಳಷ್ಟು ಕಾಲ ನಗ್ನವಾಗಿದ್ದಳು. ಕಕ್ಕಸಿನ ಕುರ್ಚಿಕೆ ಕಟ್ಟುಹಾಕಿ ಕೈ ಕಾಲುಗಳನ್ನು ವಿರಳವಾಗಿ ಬಳಸುವ ಅವಕಾಶ ಒದಗಿಸಲಾಗಿತ್ತು. ಅವಳನ್ನು ಯಾವುದೇ ತರಹದ ಉದ್ದೀಪನಕ್ಕೂ ಒಳಗಾಗದಂತೆ ಮಾಡಲಾಗಿತ್ತು. ಕಿಟಕಿಗಳನ್ನು ಪರದೆಯಿಂದ ಮುಚ್ಚಲಾಗಿತ್ತು. ಸಿರಿಯಲ್‌ಮತ್ತು ಮಕ್ಕಳ ಆಹಾರವನ್ನು ಮಾತ್ರ ನೀಡಲಾಗುತ್ತಿತ್ತು. ಯಾರೂ ಇವಳೊಂದಿಗೆ ಮಾತನಾಡುತ್ತಿರಲಿಲ್ಲ. ಇವಳು ತನ್ನ ತಾಯಿ, ತಂದೆ ಮತ್ತು ಸಹೋದರನೊಂದಿಗೆ ಇದ್ದರೂ, ಇವಳ ತಂದೆ ಮತ್ತು ಸಹೋದರ ಯಾವಾಗಲೂ ಇವಳ ಮೇಲೆ ಕಿರುಚಾಡುತ್ತಿದ್ದರು. ತಾಯಿಗೆ ಇವಳನ್ನು ನೋಡಲು ಬಹಳ ಕಡಿಮೆ ಅವಕಾಶ ಒದಗಿಸಲಾಗಿತ್ತು. ಜೀನಿಯ ತಂದೆಯು ಶಬ್ದವನ್ನು ಸಹಿಸುತ್ತಿರಲಿಲ್ಲವಾದ್ದರಿಂದ ದೂರದರ್ಶನ ಅಥವಾ ರೇಡಿಯೋವನ್ನು ಮನೆಯಲಿ ಹಾಕುತ್ತಿರಲಿಲ್ಲ. ಜೀನಿ ಯಾವುದೇ ಬಗೆಯಲ್ಲಿ ಶಬ್ದ ಮಾಡಿದರೂ ಹೊಡೆಯುತ್ತದ್ದರು. Image from UCLA library under fair usage on wikipedia

29


ಜೀನಿಯನ್ನು ಹುಡುಕಿದ ನಂತರ ಅವಳನ್ನು ಲಾಸ್‌ಏಂಜಲ್ಸ್‌ನ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವಳು ಏನೇನೂ ಬೆಳದಿರಲಿಲ್ಲ. ಬಹಳ ದುರ್ಬಲಳಾಗಿದ್ದು ಆರು-ಏಳು ವರ್ಷದ ಹುಡುಗಿಯಂತೆ ಕಾಣುತ್ತಿದ್ದಳು. ನೇರವಾಗಿ ನಿಲ್ಲಲು ಅವಳಿಗೆ ಆಗುತ್ತಿರಲಿಲ್ಲ, ಗೂನು ಬೆನ್ನು ಮಾಡಿ ನಡೆಯುತ್ತಿದ್ದಳು. ಅವಳಿಗೆ ಅಗಿಯುವುದು ಕಷ್ಟವಾಗಿತ್ತು. ಆಹಾರವನ್ನು ನುಂಗಲು ಕಷ್ಟ ಪಡುತ್ತಿದ್ದಳು, ಹಲವು ಬಾರಿ ಉಗಿಯುತ್ತಿದ್ದಳು. ಅವಳು ಮೂಕಳಾಗಿದ್ದಳು. ಮೊದಲು, ಕೇವಲ ತನ್ನ ಹೆಸರು ಮತ್ತು ‘ಸಾರಿ’ ಎಂಬ ಪದವನ್ನು ಮಾತ್ರ ಗುರುತಿಸುತ್ತಿದ್ದಳು. ಆಸ್ಪತ್ರೆಗೆ ಸೇರಿಸಿದ ಸ್ವಲ್ಪ ಸಮಯದಲ್ಲಿ ಅವಳನ್ನು ಪರೀಕ್ಷಿಸಿದಾಗ, ಅವಳು ಕೇವಲ ಒಂದು ವರ್ಷದ ಮಗುವಿನ ಸಾಮಾಜಿಕ ವಿಕಸನ ಮತ್ತು ಮಾನಸಿಕ ಕ್ಷಮತೆಯನ್ನು ಹೊಂದಿದ್ದಾಳೆ ಎಂಬುದು ತಿಳಿದು ಬಂತು. ಜೀನಿ ಸಹಜ ವಯಸ್ಸಿನಲ್ಲಿ ನಡೆದಿರಲಿಲ್ಲ, ಹೀಗಾಗಿ ಇವಳ ತಂದೆಯು ಇವಳಿಗೆ ಬೆಳವಣಿಗೆಯ ದೋಶವಿದೆ ಎಂದು ನಂಬಿದ್ದನು. ಹೀಗಾದರೂ, ಸಂಶೋಧಕರು ನಡೆಸಿದ ಸಂಶೊಧನೆಯಲ್ಲಿ ಈ ರೀತಿಯ ಬಾಲ್ಯದ ಇತಿಹಾಸವೇನೂ ಕಂಡು ಬರಲಿಲ್ಲ. ಮೆದುಳಿನ ಹಾನಿ, ಮಾನಸಿಕ ವಿಕಲತಿ ಅಥವಾ ಆಟಿಸಮ್‌ಗೆ ಜೀನಿ ಬಲಿಯಾಗಿರಲಿಲ್ಲ. ಆದ್ದರಿಂದ ಪ್ರತ್ಯೇಕತೆ ಮತ್ತು ಕೊರತೆಗಳ ಪರಿಣಾಮದಿಂದಲೇ, ಜೀನಿಯು ಬೆಳವಣಿಗೆಯ ವಿಳಂಬ ಮತ್ತು ತೊಂದರೆಗಳಿಗೆ ಗುರಿಯಾಗಿದ್ದಳೆಂದು ತಿಳಿದು ಬಂತು. ಜೀನಿಯ ಪೋಷಕರನ್ನು ಅತ್ಯಾಚಾರದ ಅಪರಾಧವನ್ನು ಹೇರಲಾಯಿತು. ಆದರೆ 70 ವರ್ಷದ ಜೀನಿಯ ತಂದೆಯು ನ್ಯಾಯಾಲಯಕ್ಕೆ ಹಾಜರಾಗ ಬೇಕಿದ್ದ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದ. “ಪ್ರಪಂಚವು ಎಂದೂ ಅರ್ಥ ಮಾಡಿಕೊಳ್ಳುವುದಿಲ್ಲ” ಎಂಬ ಚೀಟಿಯನ್ನು ಬರೆದಿಟ್ಟಿದ್ದ.

ಸಂಶೋಧನೆಗೆ ತವಕ ಜೀನಿಯ ಪ್ರಕರಣವು ಮಾಧ್ಯಮದ ಗಮನ ಸೆಳೆಯಿತು. ಸಂಶೋಧಕ ಸಮುದಾಯಕ್ಕೂ ಆಸಕ್ತಿಯ ವಿಷಯವಾಯಿತು. ಇಂತಹ ಅತ್ಯಧಿಕ ಹಾನಿಗೆ ಈಡಾಗಿರುವ ಜೀನಿ ಮಾನಸಿಕ ಬೆಳವಣಿಗೆಯನ್ನು ಹೊಂದಲು ಸಾಧ್ಯವೇ ಎಂಬುದನ್ನು ಅನ್ವೇಷಿಸುವ ವಿರಳ ಅವಕಾಶವನ್ನು ನೀಡಿತು. ಪ್ರಯೋಗವನ್ನು ಜನರ ಮೇಲೆ ನೈತಿಕ ಆಧಾರದ ಮೇಲೆ ಸಂಶೋಧಕರು ಇಂತಹ ಹಾನಿಗೆ ಯಾರನ್ನೂ ಗೊತ್ತಿದ್ದೂ ತಳ್ಳುವ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಜೀನಿಯ ದುಃಖಕರ ಪ್ರಕರಣವು ಸಂಶೋಧನೆಗೆ ಪಕ್ವವಾಗಿತ್ತು. ಜೀನಿ ಮಗುವಿನ ನಿಜ ನಾಮವಲ್ಲ. ಅವಳ ಗೋಪ್ಯತೆಯನ್ನು ಕಾಪಾಡಲು ನೀಡಲಾಗಿರುವ ಹೆಸರು.ಜೀನಿ ವಿಲೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಯು, ಸಂಶೋಧನೆಗೆ ಅನುದಾನವನ್ನು ನೀಡಿ, ಜೀನಿಯ ಪುನರ್ವಸತಿ ಮತ್ತು ಅಧ್ಯಯನಕ್ಕೆಂದೇ ಒಂದು ತಂಡವನ್ನು ಒಗ್ಗೂಡಿಸಿತು. ಶೌಚಾಲಯವನ್ನು ಬಳಸುವುದು, ತಾನೇ ಉಡುಪನ್ನು ಧರಿಸುವುದು ಮುಂತಾದ ಸಾಮಾಜಿಕ ಕುಶಲತೆಗಳನ್ನು ಜೀನಿ ಬಲು ಬೇಗ ಕಲಿತಳು. ತನ್ನ ಸುತ್ತಲಿನ ಪರಿಸರದಿಂದ ಪ್ರೇರಿತಳಾಗಿ ಪ್ರಕೃತಿಯನ್ನು ಆಳವಾಗಿ ಗಮನಿಸುತ್ತಿದ್ದಳು. ಆಸ್ಪತ್ರೆಯ ಹೊರ ಆವರಣಕ್ಕೆ ಹೋಗಲು ಬಯಸುತ್ತಿದ್ದಳು. ಭಾಷೆಯ ಅಗತ್ಯವಿಲ್ಲದ ಸಂಪರ್ಕವನ್ನು ಸಾಧಿಸಿದ್ದಳು, ಆದರೆ ಭಾಷೆಯನ್ನು ಕಲಿಯುವ ನಿಟ್ಟಿನಲ್ಲಿ ಬೇಗನೆ ಬೆಳವಣಿಗೆ ಕಾಣಲಿಲ್ಲ. ಪರಿಣಾಮವಾಗಿ, ಮನೋವೈಜ್ಞಾನಿ ಡೇವಿಡ್‌ರಿಗ್ಲರ್ ಜೀನಿಯ ಭಾಷಾ ಬಳಕೆಯ ಸಂಶೋಧನೆಯ ಮೇಲೆ ಹಚ್ಚು ವತ್ತು ನೀಡಿದರು. 30 | PSYCHE | 2022


ಭಾಷಾ ಬಳಕೆ ಜೀನಿಯು ಸಿಕ್ಕಿದಾಗಿನಿಂದಲೂ ಪರಿಣತ ಸಮುದಾಯದಲ್ಲಿ ಜೀನಿಯ ಭಾಷಾ ಅರ್ಜನೆಯನ್ನು ಕುರಿತಂತೆ, ವಾದವಿವಾದಗಳು ಇದ್ದವು. ಮಸ್ಸಚುಸೆಟ್ಟ್ಸ್‌ಇಂಸ್ಟಿಟ್ಯೂಟ್‌ ಆಫ್‌ಟೆಕ್ನಾಲಜಿ ಸಂಸ್ಥೆಯ ಭಾಷಾತಜ್ಞ ನೋಮ್‌ ಚೋಮ್ಸ್ಕಿಯವರು, ಮಾನವರಿಗೆ ಭಾಷೆಯನ್ನು ಕಲಿಯುವ ಕ್ಷಮತೆಯು ಹುಟ್ಟಿನಿಂದಲೇ ಬಂದಿರುತ್ತದೆ ಎಂದು ವಾದಿಸಿದರು. ಭಾಷಾರ್ಜನೆಗೆ ಭಾಷೆಯನ್ನು ಕಲಿಯ ಬೇಕಾಗಿಲ್ಲ, ಭಾಷಾ ಜ್ಞಾನವು ಮಾನವರಿಗೆ ಅನುವಂಶಿಕವಾಗಿಯೇ ದೊರಕಿರುತ್ತದೆ ಎಂದು ಅವರು ನಂಬಿದ್ದರು. ನರ ಮನೋ ವಿಜ್ಞಾನಿಗಳಾದ ಎರಿಕ್‌ಲೆನ್ನೆಬರ್ಗ್‌ ಚೋಮ್ಸ್ಕಿ ಅವರ ವಾದಕ್ಕೆ ಅಡ್ಡಿಯನ್ನು ವ್ಯಕ್ತ ಪಡಿಸಿದರು. ಮಾನವರು ಭಾಷೆಯ ಕ್ಷಮತೆಯನ್ನು ಹುಟ್ಟಿದಾಗಿನಿಂದಲೇ ಪಡೆದಿರುತ್ತಾರೆ, ಆದರೆ ಹರಯದ ವಯಸ್ಸಿನೊಳಗೆ ಭಾಷೆಯನ್ನು ಅರ್ಜಿಸದಿದ್ದರೆ, ದಿಗೂ ಭಾಷೆಯನ್ನು ಕಲಿಯಲು ಸಾಧಯವಿಲ್ಲ ಎಂದು ಲೆನ್ನಬರ್ಗ್‌ವಾದಿಸಿದರು. ಲೆನ್ನಬರ್ಗ್‌ ಪ್ರಸ್ತುತ ಪಡಿಸಿದ ಸಿದ್ಧಾಂತವನ್ನು “ಕ್ರಿಟಿಕಲ್‌ಪೀರಿಯಡ್‌ಹೈಪೋಥೆಸಿಸ್”‌ಎಂದು ಕರೆಯಲಾಗಿದೆ. ಆದರೂ ಈ ತರ್ಕ ಸಿದ್ಧಾಂತವನ್ನು ಪರೀಕ್ಷಿಸಲು ಜೀನಿಯು ಬರುವವರೆಗೂ ಯಾವುದೇ ಬಗೆ ಇರಲಿಲ್ಲ.

ಜೀನಿಯು ಸಿಕ್ಕಿದ ಮೊದಲ ಏಳು ತಿಂಗಳುಗಳಲ್ಲಿ, ಹಲವಾರು ಪದಗಳನ್ನು ಕಲಿತಳು. ಒಂದೊಂದೇ ಪದಗಳನ್ನು ಉಚ್ಚರಿಸಿ ಮಾತಾಡಲೂ ಜೀನಿ ಕಲಿತಳು. ಜುಲೈ 1971 ರ ವೇಳೆಗೆ, ಜೀನಿ ಎರಡು ಪದಗಳನ್ನು ಸೇರಿಸುವುದನ್ನು ಮತ್ತು ನವಂಬರ್‌ಹೊತ್ತಿಗೆ ಮೂರು ಪದಗಳನ್ನು ಜೋಡಿಸುವುದನ್ನು ಕಲಿತಳು.ಪ್ರಗತಿಯನ್ನು ಸಾಧಿಸುತ್ತಿದ್ದರೂ ವ್ಯಾಕರಣದ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು ಅವಳಿಗೆ ಕಷ್ಟಕರವಾಗಿತ್ತು, ಎಂದೂ ಪ್ರಶ್ನೆಗಳನ್ನು ಕೇಳಲು ಕಲಿಯಲಿಲ್ಲ. ಎರಡು ವಾಕ್ಯಾಂಶಗಳನ್ನು ಆಡುವುದನ್ನು ಕಲಿತ ನಂತರ ಸಾಮಾನ್ಯವಾಗಿ ಮಕ್ಕಳ ಭಾಷಾ ಜ್ಞಾನದಲ್ಲಿ ಅಪರಿಮಿತ ಪ್ರವಾಹ ಕಂಡು ಬರುತ್ತದೆ, ಕಲವೇ ವಾರಗಳಲ್ಲಿ ಮಾತಾಡುವುದನ್ನು ಬಲು ಬೇಗ ಕಲಿತು ಬಿಡುತ್ತಾರೆ. ಜೀನಿ ಇಂತಹ ಭಾಷಾ ಪ್ರವಾಹವನ್ನೇನು ಕಾಣಲಿಲ್ಲ. ನಾಲ್ಕು ವರ್ಷಗಳು ಸತತವಾಗಿ ಸಂಶೊಧನೆ ನಡೆಸಿದ ಬಳಿಕವೂ ಎರಡು ಅಥವಾ ಮೂರು ಪದಗಳ ವಾಕ್ಯಾಂಶಗಳನ್ನು ಮಾತ್ರ ಮಾತಾಡುತ್ತಿದ್ದಳು. ಕ್ರಿಟಿಕಲ್‌ಅವಧಿಯ ನಂತರವೂ ವ್ಯಕ್ತಿಯು ಯಾವುದೇ ಭಾಷೆಯನ್ನು ಕಲಿಯ ಬಹುದು ಎಂದು ಜೀನಿ ನಿರೂಪಿಸಿದ್ದಳು. ಆದರೂ, ವ್ಯಾಕರಣದ ಅಭಾವವು ಮಾನವ ಭಾಷೆಯ ಕಲಿಕೆಯಲ್ಲಿ ತೊಡಕಾಗಿತ್ತು ಎಂಬುದು ಚೌಸ್ಕಿಯವರ ನಂಬಿಕೆ. ಮೊದಲ ಭಾಷೆಯನ್ನು ಪೂರ್ಣವಾಗಿ ಅರ್ಜಿಸಲು ನಿರ್ಣಾಯಕ ಅವಧಿಯು ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಸೂಚಿಸುತ್ತದೆ. Image under fair usage from wikipedia 31


ವಾದಗಳು ಮತ್ತು ನೈತಿಕತೆ ಜೀನಿಯ ಚಿಕಿತ್ಸೆಯ ಅವಧಿಯಲ್ಲಿ, ಅವಳ ತಂಡದ ಸದಸ್ಯರಲ್ಲಿಯೇ ಹಲವು ಭಿನ್ನಾಭಿಪ್ರಾಯಗಳಿದ್ದವು. ಅವಳು ದೊರಕಿದ ಕೆಲವೇ ದಿನಗಳಲ್ಲಿ, ಅವಳು ತನ್ನ ಶಿಕ್ಷಕಿ ಜೀನ್‌ಬಟ್ಲರ್‌, ಅವರೊಂದಿಗೆ ಮೊದಲ ಆಶ್ರಯಧಾಮಕ್ಕೆ ತೆರಳಿದಳು. ಜೀನಿಯನ್ನು ಅನೇಕ ಪರೀಕ್ಷೆಗೆ ಗುರಿ ಮಾಡಲಾಗಿದೆ ಎಂದು ಬಟ್ಲರ್‌ಅಭಿಪ್ರಯ ಪಟ್ಟಿದ್ದರು, ಜೀನಿಯ ಚಿಕಿತ್ಸೆಯಲ್ಲಿ ಬದಲಾಣೆಯನ್ನು ತರಲು ಯತ್ನಿಸಿದರು. ತನ್ನ ಮನೆಗೆ ಭಾಷಾತಜ್ಞ ಸುಸನ್‌ಕರ್ಟಿಸ್ಸ್‌ಅಥವಾ ಮನೋವಿಜ್ಞಾನಿ ಜೇಮ್ಸ್‌ಕೆಂಟ್‌ ಅವರನ್ನು ತನ್ನ ಮನೆಗೆ ಸೇರಿಸುತ್ತಿರಲಿಲ್ಲ. ತಂಡದ ಬೇರೆ ಸದಸ್ಯರು, ಬಟ್ಲರ್‌ತನ್ನ ಕಾರ್ಯದಿಂದ ಖ್ಯಾತಿ ಹೊಂದಲು ಬಯಸಿದ್ದಾರೆ, ಬೇರೆಯವರಿಗೆ ಅವಕಾಶ ನೀಡುತ್ತಿಲ್ಲ ಎಂದು ಭಾವಿಸಿದರು. ಒಂದು ತಿಂಗಳ ನಂತರ ಜೀನಿಯ ಶಾಶ್ವತ ಸಾಕು ಪೋಷಕರಾಗಲು ಬಟ್ಲರ್‌ಸಲ್ಲಿಸಿದ ಅರ್ಜಿಯನ್ನು ನಿರಾಕರಿಸಲಾಯಿತು.

ಮನೋ ವಿಜ್ಞಾನಿ ಡೆವಿಡ್‌ರಿಗ್ಲರ್‌ಮತ್ತು ಅವರ ಪತ್ನಿ ಮರಿಲಿನ್‌ಮುಂದೆ ಬಂದು ಮುಂದಿನ ನಾಲ್ಕು ವರ್ಷಗಳ ಕಾಲ ಜೀನಿಯನ್ನು ನೋಡಿಕೊಂಡರು. ತಾವೂ ಅವಳ ಮೇಲೆ ಅಧ್ಯಯನ ನಡೆಸಿ, ಬೇರೆಯವರೂ ಸಂಶೋಧನೆ ನಡೆಸಲು ಅನುವು ಮಾಡಿಕೊಟ್ಟರು. ಎನ್.ಐ.ಎಂ.ಎಚ್‌ಸಂಸ್ಥೆಯು ವಿವರಣೆ ಸಂಕಲನದಲ್ಲಿ ಸಮಸ್ಯೆಯು ಎದುರಾಗಿ, ಈ ಪರಿಯೋಜನೆಯ ಅನುದಾನವನ್ನು ನಿಲ್ಲಿಸಿದ ನಂತರ ಜೀನಿ ರಿಗ್ಲರ್‌ಅವರ ಮನೆಯನ್ನು ತೊರೆಯ ಬೇಕಾಯಿತು. ಪರೀಕ್ಷೆಗಳಿಗೆ ಸಂಶೋಧನೆಗೆ ಜೀನಿಯನ್ನು ಗುರಿ ಮಾಡಿದ್ದ ಆ ನಾಲ್ಕೂ ವರ್ಷಗಳಲ್ಲಿ, ಅವಳನ್ನು ಸಂಶೋಧನೆಯ ವಸ್ತುವಾಗಿ ಮತ್ತು ಪುನರ್ವಸತಿ ರೋಗಿಯಾಗಿ ಏಕಕಾಲಕ್ಕೆ ನೋಡ ಬಹುದೇ ಎಂಬುದರ ಬಗ್ಗೆ ಚರ್ಚೆ ನಡೆದಿತ್ತು. ಪರಿಸ್ಥಿತಿಯ ನೈತಿಕತೆಯು ಮಂಕಾಗಿತ್ತು 1975 ರಲ್ಲಿ, ಜೀನಿಯ ತಾಯಿಯು ತನ್ನ ಮೇಲಿದ್ದ ಮಗುವಿನ ಅತ್ಯಾಚಾರದ ಎಲ್ಲ ಆರೋಪಗಳಿಂದ ಮುಕ್ತಳಾಗಿ ತನ್ನ ವಶಕ್ಕೆ ಜೀನಿಯನ್ನು ಪಡೆದಳು. ಅವಳಿಗೆ ಜೀನಿಯ ಆರೈಕೆಯನ್ನು ಮಾಡಲು ಸಾಧ್ಯವಾಗದ ಕಾರಣ, ಒಂದರಿಂದ ಮತ್ತೊಂದು ಆಶ್ರಯತಾಣಗಳಿಗೆ ಜೀನಿಯನ್ನು ವರ್ಗಾಯಿಸಲಾಯಿತು. ಆ ಆಶ್ರಯ ಧಾಮಗಳಲ್ಲಿಯೂ ಅತ್ಯಾಚಾರಕ್ಕೆ ಒಳ ಪಟ್ಟಳು. ಕೂಡಲೆ, ಮಾತಾಡುವುದನ್ನು ನಿಲ್ಲಿಸಿ ಪೂರ್ಣವಾಗಿ ಮೌನವಾದಳು ಏತನ್ಮಧ್ಯೆ, ಜೀನಿಯ ತಾಯಿಯು ಜೀನಿಯನ್ನು ನೋಡಿಕೊಳ್ಳುತ್ತಿದ್ದ ತಂಡದ ಮೇಲೆ ಕಾನೂನು ಮೊಕದ್ದಮೆ ನಡಸಿದಳು. ಜೀನಿಯ ಸಂಶೋಧಕ ತಂಡ ಹಾಗೂ ಮಕ್ಕಳ ಆಸ್ಪತ್ರೆಯು ಜೀನಿಯ ಒಳಿತಿಗಿಂತಲೂ ಅವಳನ್ನು ಪರೀಕ್ಷೆಗಳಿಗೆ ಗುರಿ ಮಾಡುತ್ತಿವೆ, ಜೀನಿಯನ್ನು ತೀವ್ರ ಬಳಲಿಕೆಗೆ ಕಾರಣವಾಗಿವೆ ಎಂದು ಆರೋಪಿಸಿದಳು. ಈ ಪ್ರಕರಣವನ್ನು ತೀರ್ಮಾನಿಸಲಾಯಿತು, ಆದರೂ ವಾದ ವಿವಾದಗಳು ಮುಂದುವರೆದಿವೆ. ಸಂಶೋಧಕರು ಜೀನಿಯನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರಿಂದ ಅವಳಿಗೆ ಬೇಕಾದಂತೆ ಹೆಚ್ಚು ಸಹಕಾರ ನೀಡಲಿಲ್ಲ ಎಂದು ಕೆಲವರು ನಂಬುತ್ತಾರೆ. ಸಂಶೋಧಕರೇನೋ ತಮ್ಮ ಶಕ್ತಿಗೆ ಮೀರಿ ಜೀನಿಗೆ ಚಿಕಿತ್ಸೆ ನೀಡಿದುದಾಗಿ ಹೇಳುತ್ತಾರೆ. ಇತಿಹಾಸಕಾರರು ಮತ್ತು ಮನೋವಿಜ್ಞಾನಿಗಳೂ ಆದ ಹಾರ್ಲನ್‌ಲೇನ್‌ಸೂಚಿಸುವಂತೆ, “ಇಂತಹ ಸಂಶೋಧನೆಗಳಲ್ಲಿ ನೈತಿಕ ದ್ವಂದ್ವವು ಇರುತ್ತದೆ. ವಿಜ್ಞಾನದ ಹೆಚ್ಚಿನ ಅಧ್ಯಯನ ಮಾಡಲು ಬಯಸಿದರೆ, ಜೀನಿಯ ಹಿತಾಸಕ್ತಿಗೆ ಕೊರತೆ ಬರುತ್ತದೆ. ಜೀನಿಯನ್ನು ಆರೈಕೆ ಮಾಡಿ ಸಹಾಯ ಮಾಡಲು ಯತ್ನಿಸಿದರೆ, ಹೆಚ್ಚು ಸಂಶೋಧನೆ ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಏನು ಮಾಡುವಿರಿ?” ಎಂದು ಪ್ರಶ್ನಿಸುತ್ತಾರೆ.

32 | PSYCHE | 2022


33


34 | PSYCHE | 2022


ಇಂದಿನ ಜೀನಿ. ಜೀನಿಯು ಬದುಕಿದ್ದು, ಕ್ಯಾಲಿಫೋರ್ನಿಯಾ ರಾಜ್ಯದ ವಯಸ್ಕರ ಆಶ್ರಮಧಾಮದಲ್ಲಿ ಆಶ್ರಯ ಪಡೆದಿದ್ದಾರೆ. ಜೀನಿಯ ಮೇಲೆ ಸಂಶೋಧನೆ ನಡೆಸಿದ ಭಾಷಾತಜ್ಞರಾದ ಸುಸನ್‌ಕರ್ಟಿಸಸ್‌, ಜೀನಿಯ ಜೊತೆ ಮಾತಾಡಲು ಹಲವು ಬಾರಿ ಪ್ರಯತ್ನಿಸಿದರೂ ಸಹ ಅವರಿಗೆ ಪ್ರತಿ ಬಾರಿಯೂ ಸುಳ್ಳು ಹೇಳಲಾಗಿದೆ. ಆದರೂ ಅವರು ಹೇಳುವಂತೆ, ಆಡಳಿತ ವರ್ಗವನ್ನು ಕೇಳಿದಾಗಲೆಲ್ಲ ಜೀನಿಯು ಯೋಗಕ್ಷೇಮವಾಗಿ ಇರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನುತ್ತಾರೆ. ಪತ್ರ ಕರ್ತ ರಸ್ಸ್‌ರೇಮರ್‌ಜೀನಿಯ 27 ನೇ ಹುಟ್ಟು ಹಬ್ಬದಲ್ಲಿ ನೋಡಿದ್ದಾರೆ, ಜೀನಿಯ ಸ್ಥಿತಿಯು ಚೆನ್ನಗಿರುವುದಾಗಿ ಹೇಳಿಲ್ಲ. ಹಾಗೆಯೇ ಮನೋರೋಗ ತಜ್ಞರಾದ ಜೇ ಶುರ್ಲೆ, ಜೀನಿಯ 27 ನೇ ಮತ್ತು 29 ನೇ ಹುಟ್ಟು ಹಬ್ಬದಲ್ಲಿ ಆಕೆಯು ಖಿನ್ನಳಾಗಿದ್ದು ತನ್ನಷ್ಟಕ್ಕೆ ತಾನೇ ಇದ್ದಳು ಎಂದು ಹೇಳಿದ್ದಾರೆ.

ಈ ಪ್ರಕರಣದ ಅಧ್ಯಯನದಲ್ಲಿ ನಿಮ್ಮ ಅಭಿಪ್ರಾಯಗಳು ನಿಮ್ಮ ಆಲೋಚನೆಗಳನ್ನು ಒಗ್ಗೂಡಿಸಲು ಕೆಲವು ಮಾರ್ಗದರ್ಶಿ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ: ◆ ಸಂಶೋಧನೆಯ ಗುರಿಗಳು ಮತ್ತು ಜೀನಿಯ ಚಿಕಿತ್ಸೆ ಮತ್ತು ಆರೈಕೆಯ ಅವಶ್ಯಕತೆಗಳ ನಡುವೆ ಸಹಜವಾದ ದ್ವಂದ್ವ ಇತ್ತೇ? ◆ ಜೀನಿಯ ದೃಢತೆ ಮತ್ತು ಒಳಿತನ್ನು ಕಾಪಾಡಿಕೊಂಡು, ವಿಜ್ಞಾನದ ಕಾರ್ಯವನ್ನೂ ಮುಂದುವರಿಸಲು ಬೇರೆ ರೀತಿಯ ಸಾಧ್ಯತೆಗಳಿದ್ದವೆ? ◆ ನೀವು ಪ್ರಶ್ನಿಸುವುದಾದರೆ, ಜೀನಿಯನ್ನು ಯಾವ ಪ್ರಶ್ನೆ ಕೇಳಲು ಬಯಸುತ್ತೀರಿ? ◆ ಇಂಗ್ಲೀಷ ಭಾಷೆ ಬಾರದಿರುವ ಜನರೊಂದಿಗೆ, ಅವರ ಭಾಷೆಯನ್ನು ಅರಿಯದ ನೀವು ಸಂಭಾಷಣೆ ನಡೆಸುವ ಪ್ರಯತ್ನ ಮಾಡಿರುವಿರೇ? ಸಂಪರ್ಕವನ್ನು ಹೇಗೆ ಸ್ಥಾಪಿಸುತ್ತೀರ ? ಅನ್ಯ ಭಾಷೆಗಳಲ್ಲಿನ ಪದ ರಚನೆಗಳನ್ನು ಪತ್ತೆ ಮಾಡಲು ನಿಮಗೆ ಸಾಧ್ಯವೇ? ಈ ಪ್ರಯತ್ನದಲ್ಲಿ ಬಹಳ ಫಲಕಾರಿ ಅಂಶ ಯಾವುದಾಗಿತ್ತು? ನಿರಾಶೆಗೊಳಿಸುವ ಅಂಶ ಯಾವುದಾಗಿತ್ತು? ◆ ನೀವು ನಿಮ್ಮ ಗೆಳೆಯರೊಂದಿಗೆ ಹೊಸ ಭಾಷೆಯನ್ನು ಸೃಷ್ಟಿಸುವ ಅಥವಾ ಹೊಸ ಗುಪ್ತ ಬಗೆಯ ಸಂಪರ್ಕವನ್ನು ಸಾಧಿಸಲು ಪ್ರಯತ್ನಿಸಿದ್ದೀರೆ? ಪದಗಳನ್ನು ಬಳಸಿದಿರಾ ಇಲ್ಲಾ ಸಂಕೇತಗಳ ಮೂಲಕ ಸಂಪರ್ಕ ಸ್ಥಾಪಿಸಲು ಯತ್ನಿಸಿದಿರಾ, ಇಲ್ಲವೇ ಎರಡೂ ಬಗೆಯಲ್ಲಿ ಸಂಪರ್ಕ ಸ್ಥಾಪಿಸಲು ಯತ್ನಿಸಿದಿರಾ? ವಾಕ್ಯವನ್ನು ರಚಿಸಲು ಬೇರೆ ಬೇರೆ ಪದಗಳನ್ನು ಮತ್ತು ಸಂಕೇತಗಳನ್ನು ಜೋಡಿಸಿದಿರೇನು? ನಿಮ್ಮ ಗುಂಪಿಗೆ ಸೇರದ ಜನರು ಈ ನಿಮ್ಮ ಭಾಷೆಯನ್ನು ತಳಿಯಲು ಸಾಧ್ಯವಾಯಿತೇ? ◆ ನೀವು ಯಾವುದಾದರೋ ವಿದೇಶಿ ಭಾಷೆಯನ್ನು ಕಲಿತಿದ್ದೀರಾ? ತರಗತಿಯಲ್ಲಿ ಕಲಿಯುವುದಕ್ಕೂ ಬೇರೆಯವರೊಂದಿಗೆ ಪೋನಿನಲ್ಲೋ, ಬೀದಿಯಲ್ಲೋ ಮಾತನಾಡುವುದಕ್ಕೂ ಏನು ವ್ಯತ್ಯಾಸವಿದೆ?

35


ಕೆಂಪು ಮತ್ತು ನೀಲಿ

ಟೆಂಪ್ಲೇಟ್

◆ ◆ ◆ ◆

ದಪ್ಪನೆಯ ಸ್ಟಾಕ್‌ಕಾಗದ ಟೇಪು (ಅಂಟಿಸಲು) ಕತ್ತರಿ ಕೆಂಪು ಮತ್ತು ನೀಲಿ ಪಾರದರ್ಶಕ ಹಾಳೆಗಳು.

ಏನು ಮಾಡಬೇಕು

◆ ದಪ್ಪನೆಯ ಸ್ಟಾಕ್‌ಕಾಗದದವನ್ನು ಕಿಟಕಿಯಂತೆ ಕತ್ತರಿಸಿ, ನೋಡಲು ಅನುಕೂಲವಾಗುವ ಹೊರಗಿನ ಚೌಕಟ್ಟನ್ನು ತಯಾರಿಸಿಕೊಳ್ಳಿ. ◆ ಕೆಂಪು ಹಾಗೂ ನೀಲಿ ಪ್ಲಾಸ್ಟಿಕ್‌ಕಾಗದವನ್ನು ಆ ಕಿಟಕಿಗೆ ಹೊಂದಿಸುವಂತೆ ಸ್ವಲ್ಪ ದೊಡ್ಡದಾಗಿ ಕತ್ತರಿಸಿಕೊಳ್ಳಿ. ◆ ಟೇಪ್‌ಬಳಸಿ ಕೆಂಪು ಕಾಗದ ಹಾಗೂ ನೀಲಿ ಕಾಗದವನ್ನು ಬೇರೆ ಬೇರೆಯಾಗಿ ಅಂಟಿಸಿ, ಕೆಂಪು ಪ್ಲಾಟಿಕಿನ ಕಿಟಕಿ ಚೌಕಟ್ಟಿನ ಹಾಗೂ ನೀಲಿ ಪ್ಲಾಟಿಕಿನ ಕಿಟಕಿ ಚೌಕಟ್ಟಿನ ಎರಡು ಲೆಂಸ್ ಗಳನ್ನು ತಯಾರಿಸಿಕೊಳ್ಳಿ. ◆ ಮುಂದಿನ ಪುಟದಲ್ಲಿ ಕೊಟ್ಟಿರುವ ಅನಾಗ್ಲಿಫ್‌ ಗಳನ್ನು ವಿಶ್ಲೇಷಿಸಲು ಈ ಲೆಂಸ್‌ಗಳನ್ನು ಬಳಸಿ. 36 | PSYCHE | 2022


ಟೆಂಪ್ಲೇಟ್

37


ಈಗ ನೀವು ಮಾಡಿದ 3D ಗ್ಲಾಸ್ ಬಳಸಿ ಈ ಅನಾಗ್ಲಿಫ್‌ಗಳನ್ನು ನೋಡಿ!

NASA/JPL. Sol 133.

38 | PSYCHE | 2022

NASA/JPL-CalTech/MSSS/Processed by Kevin M. Gill


Image by Reimund Bertrams from Pixabay

Image by Reimund Bertrams from Pixabay 39


ಮನಸ್ಸಿನ ಭಾಗಗಳನ್ನು ಒಗ್ಗೂಡಿಸುವುದು

Photo by Ann H on Pexels


5 ಪ್ರಕರಣಗಳ ಅಧ್ಯಯನವು ಕೆಲವು ಬಾರಿ ಸೀಮಿತವಾಗಿರುತ್ತದೆ, ಏಕೆಂದರೆ ಅವುಗಳನ್ನು ನಕಲು ಮಾಡಲಾಗುವುದಿಲ್ಲ, ಹಾಗಾಗಿ ಸಾಮಾನ್ಯ ಪರಿಸ್ಥಿತಿಗಳಿಗೆ ಅವುಗಳನ್ನು ಅನ್ವಯಿಸುವುದು ಸಾಧ್ಯವಿಲ್ಲ. ಆದರೂ, ಏನಾಗ ಬಹುದು ಎಂಬುದನ್ನು ತೋರುವುದರಲ್ಲಿ ಹಾಗೂ ಎಲ್ಲ ಸಂದರ್ಭಗಳಿಗೂ ಅನ್ವಯಿಸುವಂತಹ ಹೆಚ್ಚು ವಿಸ್ತೃತ ಪ್ರಶ್ನೆಗಳನ್ನು ರೂಪಿಸುವುದರಲ್ಲಿ ಸಹಕಾರಿಯಾಗುತ್ತವೆ. ಮನೋವೈಜ್ಞಾನಿಕ ಸಂಶೋಧನೆಯ ಮತ್ತೊಂದು ಬಗೆ ಎಂದರೆ ಸಹಜ ಗಮನಿಸುವಿಕೆ, ಕಾಡಿನಲ್ಲಿ ಚಿಂಪಾಂಜಿಗಳನ್ನು ಗಮನಿಸುವಂತೆ, ಸಂಶೋಧಕರು ನೈಸರ್ಗಿಕ ಪರಿಸರದಲ್ಲಿ ನಡವಳಿಕೆಯನ್ನು ಸಹಜವಾಗಿ ಗಮನಿಸುತ್ತಾರೆ. ಪ್ರತ್ಯೇಕ ಪ್ರಕರಣಗಳಲ್ಲಿ, ಸಹಜವಾಗಿ ಗಮನಿಸಿ ನಡವಳಿಕೆಗಳನ್ನು ವಿವರಿಸ ಬಹುದು ಆದರೆ ಏಕೆ ಹಾಗೆ ಇದೆ ಎಂದು ವಿಶ್ಲೇಷಿಸಲಾಗುವುದಿಲ್ಲ ಮನೋವಿಜ್ಞಾನಿಗಳು ಸ್ವಭಾವವನ್ನು ಕುರಿತಾಗಿ ಸಮೀಕ್ಷೆಗಳು ಇಲ್ಲವೇ ಸಂದರ್ಶನಗಳ ಮೂಲಕ ವಿವರಣೆಗಳನ್ನು ಒಟ್ಟುಗೂಡಿಸ ಬಹುದು. ಪ್ರಜ್ಞಾ ಪೂರ್ವಕವಾಗಿರುವ ನಡತೆ ಮತ್ತು ನಂಬಿಕೆಗಳನ್ನು ಗುರುತಿಸಲು, ಸಮೀಕ್ಷೆಗಳು ಬಹಳ ಸಹಕಾರಿ, ಆದರೆ ಪ್ರಶ್ನೆಗಳನ್ನು ರೂಪಿಸುವುದು ಕಷ್ಟಕರ, ಪ್ರಶ್ನೆಗಳಲ್ಲಿ ಪ್ರಯೋಗಿಸುವ ಪದಗಳಿಗೆ ಅನುಗುಣವಾಗಿ ಉತ್ತರವು ದೊರಕ ಬಹುದು. ಉದಾಹರಣೆಗೆ, “ಸೀಮಿತ” ಅಥಾವ “ಅನುಮತಿ ಇಲ್ಲ” ಎಂಬ ವಾಕ್ಯಾಂಶಗಳಿಗಿಂತಲೂ, ‘ನಿಷೇಧ’, ‘ನಿಯಂತ್ರಣ’ ಎಂಬ ಪದಗಳು ಬೇರೆಯೇ ಪ್ರಭಾವವನ್ನು ಉಂಟು ಮಾಡುತ್ತವೆ. ಸಮೀಕ್ಷೆ, ಪ್ರಕರಣ-ಅಧ್ಯಯನ ಇಲ್ಲವೇ ಸಹಜಗಮನಿಸುವಿಕೆಯ ಮೂಲಕ ನಡವಳಿಕೆಯನ್ನು ವಿವರಿಸಿದ ಬಳಿಕ, ಅವುಗಳ ಅರ್ಥವನ್ನು ಹುಡುಕ ಬಹುದು. ಪ್ರಯೋಗಗಳನ್ನು ನಡೆಸಿ ನಡವಳಿಕೆಗಳ ಕಾರಣಪರಿಣಾಮಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳ ಬೇಕಾಗುತ್ತದೆ.

41


ಸಂಶೋಧಕರು ಪ್ರಯೋಗಗಳಲ್ಲಿನ ವಿವಿಧ ಪ್ರಭಾವಗಳನ್ನು ಬೇರ್ಪಡಿಸಲು, ಒಂದು ಬಗೆಯ ಉದ್ದೀಪನವನ್ನು ಸ್ಥಿರವಾಗಿ ಇರಿಸಿಕೊಂಡು, ಬೇರೆಯವುಗಳನ್ನು ಬದಲಿಸ ಬಹುದು. ಅಂದರೆ, ಕೆಲವು ಪ್ರಯೋಗಗಳನ್ನು ಮಾಡಲು ಕನಿಷ್ಟ ಎರಡು ಗುಂಪುಗಳ ಅವಶ್ಯಕತೆ ಇರುತ್ತದೆ: ಪ್ರಯೋಗಕ್ಕೆ ಒಳಗಾಗುವ ಗುಂಪು(ಸ್ವತಂತ್ರ ಅಂಶವು ಬದಲಾಗುತ್ತದೆ) ಮತ್ತು ನಿಯಂತ್ರಕ ಗುಂಪು( ಎಲ್ಲ ಅಂಶಗಳನ್ನೂ ಸ್ಥಿರವಾಗಿರಿಸಲಾಗಿದೆ) ಸಮೀಕ್ಷೆಗಳು ಅನಿಶ್ಚಿತ ರೀತಿಯ ನಮೂನೆಗಳನ್ನು ಬಳಸುವಂತೆಯೇ, ಪ್ರಾಯೋಗಿಕ ಸಂಶೋಧಕರು, ಪ್ರಯೋಗದಲ್ಲಿ ಭಾಗವಹಿಸುವವರನ್ನು ಒಂದೊಂದು ಗುಂಪಿಗೆ ನೇಮಕ ಮಾಡಿ, ಗೊಂದಲಗಳನ್ನು ನಿವಾರಿಸಿಕೊಂಡು, ಸ್ಥಿರ ಅಂಶಗಳನ್ನು ಮತ್ತು ಅದರ ಹೊರಗಿನ ಕಾರಣಗಳನ್ನು ಬಳಸಿಕೊಂಡು ಪರಿಣಾಮಗಳನ್ನು ಗಮನಿಸುತ್ತಾರೆ. ಕೆಲವೊಮ್ಮೆ, ಎರಡೂ ಗುಂಪುಗಳಿಗೆ ಅಥವಾ ಒಂದು ಗುಂಪಿಗೆ ಪರೀಕ್ಷೆಯ ಮಾಹಿತಿ ಇರುವುದಿಲ್ಲ. ಉದಾಹರಣೆಗೆ, ಸಂಶೋಧಕರು ಜನರ ಮೇಲೆ ಕೆಲವು ಪದಾರ್ಥಗಳ ಪರಿಣಾಮವು ಹೇಗಿರುತ್ತದೆ ಎಂದು ಪರೀಕ್ಷಿಸಲು, ಅಂತಹುದೇ ರೀತಿಯಲ್ಲಿ ತೋರುವ ಆದರೆ ಯಾವ ಪ್ರಭಾವನ್ನೂ ಉಂಟು ಮಾಡದ ವಸ್ತುಗಳನ್ನು ಇನ್ನೊಂದು ಗುಂಪಿನ ಮೇಲೆ ಬಳಸ ಬಹುದು. ಕೆಲವೊಮ್ಮೆ, ಸ್ವಯಂ ಸಂಶೋಧಕರೂ ಸಹ, ಯಾವ ಗುಂಪನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ, ಯಾವ ಗುಂಪನ್ನು ನಿಯಂತ್ರಿತವಾಗಿ ಬಳಸಲಾಗಿದೆ ಎಂದು ತಿಳಿಯಲು ಅಸಾಧ್ಯ. ಹೀಗಾಗಿ ತಮ್ಮ ನಡವಳಿಕೆಯಿಂದ ಪರಿಣಾಮದ ಮೇಲೆ ಯಾವ ರೀತಿಯಲ್ಲೂ ಪ್ರಭಾವವು ಉಂಟಾಗದಂತೆ ನಡೆದು ಕೊಳ್ಳುತ್ತಾರೆ. ಇದನ್ನು ಡಬ್ಬಲ್‌ಬ್ಲೈಂಡ್‌ಪದ್ಧತಿ ಎಂದು ಕರೆಯುತ್ತಾರೆ. ಈಗ, ಈ ಎಲ್ಲಾ ಆಲೋಚನೆಗಳನ್ನು ನಮ್ಮ ಪ್ರಯೋಗದಲ್ಲಿ ಅಭ್ಯಾಸ ಮಾಡೋಣ.

ಕಾರ್ಯ ಚಟುವಟಿಕೆ ಪ್ರೇರಣೆ ನೀಡುವಂತಹ ಕೆಲವು ಪ್ರಯೋಗಗಳು ಇಲ್ಲಿವೆ. ಈ ಪ್ರಯೋಗಗಳನ್ನು ಮಾಡಿ, ನಿಮ್ಮ ವೀಕ್ಷಣೆಗಳನ್ನು ನಮೂದಿಸಿ, ನಂತರ ಅಭಿಪ್ರಾಯವನ್ನು ಪ್ರಕಟಿಸಿ. ದೃಶ್ಯ ಸಾಕ್ಷಿ ಪರೀಕ್ಷಣೆ ಸಮಾಜದಲ್ಲಿ, ನೆನಪು ಮತ್ತು ಅಭಿಪ್ರಾಯಗಳ ಬಗ್ಗೆ ಅಧ್ಯಯನ ಮಾಡಲು, ಮನೋವಿಜ್ಞಾನವು ಹೆಚ್ಚು ಲಾಭಕಾರಿ. ಈ.ಎಫ್‌ಲಾಫ್ಟಸ್‌ಮತ್ತು ಜೆ.ಸಿ ಪಾಮರ್‌ ಅವರುಗಳು ನಿರೂಪಿಸಿದ ಪ್ರಖ್ಯಾತ ಪ್ರಯೋಗವು ನೆನಪು ಎಷ್ಟು ಕೆಡಕು ಮಾಡಬಹುದು ಎಂಬುದನ್ನು ತೋರಿಸಿದೆ:

J C Palmer

42 | PSYCHE | 2022

E F Loftus


1. ಕೆಲವು ಜನರಿಗೆ, ಡಿಕ್ಕೆ ಹೊಡೆಯುತ್ತಿರುವ ಎರಡು ಕಾರುಗಳ ಚಲನಚಿತ್ರವನ್ನು ತೋರಿಸಿ. (ಉದಾಹರಣೆ) 2. ಕಾರುಗಳು ಡಿಕ್ಕಿ ಹೊಡೆದಾಗ, ಎಷ್ಟು ವೇಗದಲ್ಲಿ ಚಲಿಸುತ್ತಿದ್ದವು ಎಂದು ಕೇಳಿ. ಆದರೆ ಬೇರೆ ಬೇರೆ ಪದಗಳನ್ನು ಬಳಸಿ ಪ್ರಶ್ನೆಗಳನ್ನು ರೂಪಿಸಿ

◆ ಒಬ್ಬರನ್ನು , ಕಾರುಗಳು ಒಂದಕ್ಕೊಂದು ಅಪ್ಪಳಿಸಿದಾಗ ಅವು ಎಷ್ಟು ವೇಗದಲ್ಲಿ ಚಲಿಸುತ್ತಿದ್ದವು ◆ ಇನ್ನೊಬ್ಬರನ್ನು , ಕಾರುಗಳು ಒಂದಕ್ಕೊಂದು ಗುದ್ದಿದಾಗ ಅವು ಎಷ್ಟು ವೇಗದಲ್ಲಿ ಚಲಿಸುತ್ತಿದ್ದವು ◆ ಮತ್ತೊಬ್ಬರನ್ನು , ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಅವು ಎಷ್ಟು ವೇಗದಲ್ಲಿ ಚಲಿಸುತ್ತಿದ್ದವು ನಿಮ್ಮ ವೀಕ್ಷಣೆಗಳು ಮತ್ತು ಆಲೋಚನೆಗಳನ್ನು ಟಿಪ್ಪಣಿ ಮಾಡಿ

ಜಜ್ಜುವುದು

ಅಪ್ಪಳಿಸುವುದು

ಡಿಕ್ಕಿ ಹೊಡೆಯುವುದು

ಆಯ್ದ ಅವಗಾಹನೆ ಚಟುವಟಿಕೆ 1. ಈ ವೀಡಿಯೋವನ್ನು ವೀಕ್ಷಿಸಿ, ಎಷ್ಟು ಕೈ ಬದಲಾದವು ಎಂದು ನಮೂದಿಸಿ. 2. ಜನರು ಚಂಡನ್ನು ಒಬ್ಬರಿಂದ ಒಬ್ಬರಿಗೆ ತಲುಪಿಸುವುದರ ಜೊತೆಗೆ ಬೇರೆ ಏನನ್ನಾದರೋ ಗಮನಿಸಿದಿರಾ?

ಕಾಣದ ಗೋರಿಲ್ಲ ಚಟುವಟಿಕೆಯು, ಆಯ್ದ ಅವಗಾಹನೆ ಚಟುವಟಿಕೆ ಎಂದೂ ಹೆಸರಾಗಿದೆ, ಮನೋವಿಜ್ಞಾನಿಗಳಾದ ಡೇನಿಯಲ್‌ಸೈಮನ್ಸ್‌ಮತ್ತು ಕ್ರಿಸ್ಟೋಫರ್‌ಛಾಬ್ರಿಸ್‌ ಈ ಗ್ರಹಿಕೆ ಪರೀಕ್ಷಣೆಯನ್ನು ಸೃಜಿಸಿದ್ದಾರೆ. ಈ ವೀಡಿಯೋವನ್ನು ನಿಮ್ಮಲ್ಲಿ ಹಲವರು ವೀಕ್ಷಿಸಿರ ಬಹುದು, ಈ ಪರೀಕ್ಷೆಯ ಹೊಸ ಬಗೆಯನ್ನು ಸೈಮನ್ಸ್‌ಮತ್ತು ಛಾಬ್ರಿಸ್‌ವಿನ್ಯಾಸಗೊಳಿಸಿದ್ದಾರೆ, “ಮಂಕಿ ಬ್ಯುಸಿನೆಸ್‌ಇಲ್ಲ್ಯೂಜ್ಸನ್”‌ ಎಂಬುದು ಇನ್ನೊಂದು ಕುತೂಹಲಕಾರಿ ವೀಡಿಯೋ ಚಟುವಟಿಕೆ. 43


ಸ್ಟ್ರೂಪ್ ಎಫೆಕ್ಟ್ ಗಮನಿಸದೇ ಇರುವ ಪರಿಸ್ಥಿತಿಗಳು , ಯಾವುದೇ ಚಟುವಟಿಕೆಯನ್ನು ನಡೆಸುವಾಗ ಅವಶ್ಯಕ ಪ್ರತಿಕ್ರಿಯೆ ಸಮಯದಲ್ಲಿ ಬದಲಾವಣೆಗೆ ಕಾರಣವಾಗ ಬಹುದು ಎಂಬುದನ್ನು ಈ ಪ್ರಯೋಗದ ಮೂಲಕ ತಿಳಿಯ ಬಹುದು ◆ ಪದಗಳಿರುವ ಮೂರು ಹಾಳೆಗಳ ಅಚ್ಚನ್ನು ತಯಾರಿಸಿಕೊಳ್ಳಿ. (ಸಾಲುಗಳಾಗಿರ ಬಹುದು). ◆ ಸಮಯವನ್ನು ಗಮನಿಸುತ್ತಾ ನಿಮ್ಮ ಸ್ನೇಹಿತರು / ಪರಿವಾರದ ಸದಸ್ಯರಿಗೆ ಪ್ರತಿಯೊಂದು ಹಾಳೆಯ ಮೇಲಿರುವ ಪದಗಳನ್ನು ಜೋರಾಗಿ ಓದಲು ಹೇಳಿ. ◆ ಒಂದೊಂದು ಹಾಳೆಯನ್ನು ಓದಲು ಎಷ್ಟು ಸಮಯ ಬೇಕಾಯಿತು ಎಂದು ನಮೂದಿಸಿ ಕೊಳ್ಳಿ. ನಿಮಗೆ ದೊರಕುವ ಪರಿಣಾಮಗಳಲ್ಲಿನ ವ್ಯತ್ಯಾಸಕ್ಕೆ ಕಾರಣವೇನೆಂದು ಅನಿಸುತ್ತದೆ?

ನಿಮ್ಮ ಟಿಪ್ಪಣಿಗಳು ಹಾಗು ಅವಲೋಕನಗಳಿಗಾಗಿ ಈ ಜಾಗವನ್ನು ಬಳಿಸಿಕೊಳ್ಳಿ

44 | PSYCHE | 2022


ಸ್ಟ್ರೂಪ್ ಎಫೆಕ್ಟ್ 1

Control

2

Compatible

3

Incompatible

ನಾಯಿ

ಕೆಂಪು

ಕೆಂಪು

ಕುರ್ಚಿ

ಹಳದಿ

ಹಳದಿ

ದೋಣಿ

ಹಸಿರು

ಹಸಿರು

ಕಿಟಕಿ

ನೀಲಿ

ನೀಲಿ

ಬ್ಲಾಕ್

ಕೆಂಪು

ಕೆಂಪು

ಚೀಲ

ನೀಲಿ

ನೀಲಿ

ಚಕ್ರ

ಹಳದಿ

ಹಳದಿ

ತಟ್ಟೆ

ಹಸಿರು

ಹಸಿರು

ಬಾಟಲಿ

ನೀಲಿ

ನೀಲಿ

ಬೇಲಿ

ಕೆಂಪು

ಕೆಂಪು

45


6 ಶತಕಕ್ಕೂ ಹೆಚ್ಚು ಕಾಲದಿಂದಲೂ, ಮನೋವಿಜ್ಞಾನಿಗಳು ಗ್ರಹಣ ಶಕ್ತಿ ವ್ಯವಸ್ಥೆಗಳನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಿದ್ದಾರೆ. ಹೆಚ್ಚಿನ ಅಧ್ಯಯನವು ದೃಷ್ಟಿ ಮತ್ತು ಶ್ರವಣಕ್ಕೆ ಮೀಸಲಾಗಿವೆ. ಆಸ್ವಾದ, ರುಚಿ, ಚಲನೆ, ಸಮತೋಲನ, ಸ್ಪರ್ಷ ಮತ್ತು ನೋವಿನ ಅನುಭವಗಳನ್ನೂ ಸಂಶೋಧಿಸಿದ್ದಾರೆ. ಇವೆಲ್ಲವನ್ನೂ ಅಧ್ಯಯನ ಮಾಡಲು, ಗ್ರಹಣ ಶಕ್ತಿಯನ್ನು ಅಭ್ಯಸಿಸುವ ವಿಜ್ಞಾನಿಗಳು, ಪರೀಕ್ಷೆಗಳನ್ನು ನಡೆಸಿ, ಮೆದುಳಿಗೆ ಹಾನಿಯಾಗಿರುವ ರೋಗಿಗಳನ್ನು ಪರೀಕ್ಷಿಸಿ, ಮೆದುಳು ತನ್ನ ಸುತ್ತಲಿನ ಸಂವೇದನಾತ್ಮಕ ಪರಿಸರವನ್ನು ಹೇಗೆ ಗ್ರಹಿಸುತ್ತದೆ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ಮಾನವ ಗ್ರಹಣಶಕ್ತಿಯ ಅಧ್ಯಯನ ಮಾಡಲು, ಗ್ರಹಿಕೆಯ ಭ್ರಾಂತಿಯನ್ನು ಉಂಟು ಮಾಡುವುದು ಫಲಕಾರಿ ಪದ್ಧತಿಯಾಗಿದೆ. ಅದರಲ್ಲೂ ದೃಶ್ಯಾತ್ಮಕ ಗ್ರಹಿಗೆಯು ಅತಿ ಮುಖ್ಯವಾಗುತ್ತದೆ. ಹಲವು ದೃಶ್ಯಾತ್ಮಕ ಭ್ರಮೆಗಳು ವಿನೋದಕರವಾಗಿರುತ್ತದೆ. ಗ್ರಹಿಕೆಯ ವ್ಯವಸ್ಥೆಗಳ ಬಗೆಗಿನ ಜ್ಞಾನವನ್ನು ಆಧರಿಸಿ ವಿಜ್ಞಾನಿಗಳು ಇಂತಹ ದೃಶ್ಯಗಳನ್ನು ಸೃಷ್ಟಿಸುತ್ತಾರೆ. ಒಮ್ಮೆ ಒಂದು ಬಗೆಯ ಭ್ರಮಾತ್ಮಕ ದೃಶ್ಯವನ್ನು ಸೃಷ್ಟಿಸಿದರೆ, ಅದರ ಬಗ್ಗೆ ಜನರು ಹೇಗೆ ಆಲೋಚಿಸುತ್ತಾರೆ, ಈ ದೃಶ್ಯ ಭ್ರಮೆಯನ್ನು ಅರ್ಥೈಸಲು ಮೆದುಳಿನ ಯಾವ ಭಾಗವು ಸಕ್ರಿಯಗೊಳ್ಳುತ್ತದೆ, ಈ ದೃಶ್ಯದ ಪ್ರಭಾವವನ್ನು ಹೆಚ್ಚಿಸಲು ಯಾವ ಅಂಶವನ್ನು ಏರಿಸಬೇಕು, ಯಾವ ಅಂಶವನ್ನು ಕುಗ್ಗಿಸಬೇಕು ಎಂಬುದರ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಾರೆ.

46 | PSYCHE | 2022


ವಾಸ್ತವತೆಯ ನಿರ್ಮಾಣ

Created by Fiestoforo


ವಿಜ್ಞಾನಿಗಳು ಅಷ್ಟೇ ಅಲ್ಲದೇ, ದೃಶ್ಯ ಮೂಲದ ಕಲಾವಿದರು ಸಹ ಈ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೆ. ಹಲವು ವರ್ಷಗಳಿಂದಲೂ ಭ್ರಮೆಯನ್ನು ಉಂಟು ಮಾಡುವ ತಂತ್ರಗಳನ್ನು ಬಳಿಸಿಕೊಂಡು, ಚಪ್ಪಟ್ಟೆಯ ಕ್ಯಾನ್ವಾಸ್‌ಗಳ ಮೇಲೆಯೇ ಕಲಾಕೃತಿಗಳಲ್ಲಿ ಆಳ, ಚಲನೆ, ಬೆಳಕು ಮತ್ತು ನೆರಳು, ಗಾತ್ರದ ವ್ಯತ್ಯಾಸ ಇವೆಲ್ಲವನ್ನೂ ಪ್ರದರ್ಶಿಸುವಂತಹ ಹಲವು ಕಲಾತ್ಮಕ ಪ್ರದರ್ಶಿಕೆಗಳನ್ನು ಸೃಷ್ಟಿಸಿದ್ದಾರೆ. ಮುಂದಿನ ಕಾರ್ಯ ಚಟುವಟಿಕೆಯಲ್ಲಿ ಭ್ರಮೆಯನ್ನು ಸೃಷ್ಟಿಸುವ ಕಲಾಕೃತಿಯನ್ನು ತಯಾರಿಸೋಣ ಉಪಕರಣಗಳು ಮತ್ತು ಸಾಮಗ್ರಿಗಳು

◆ ಶುಭ್ರವಾದ ಖಾಲಿ ಸೋಡಾ ಕ್ಯಾನ್‌ ◆ 8.5-ಅಂಗುಲ / 5- ಅಂಗುಲ (22-ಸೆ.ಮಿ / 12.5- ಸೆ.ಮಿ) ಮೈಲಾರ್‌ಕನ್ನಡಿಯಂತಹ, 0.002 ಅಂಗುಲ ದಪ್ಪ (0.05 ಮಿ.ಮಿ) ◆ ಟೇಪು // ಮೈಲಾರ್‌ಬದಲಿಗೆ ಅಲ್ಯೂಮಿನಿಯಮ್‌ಹಾಳೆ ಬಳಸ ಬಹುದು (ಅದು ಸಹ ಒಳ್ಳೆಯ ಪ್ರತಿಬಿಂಬಕ) ◆ ವಿರೂಪಗೊಳಿಸಿದ (“ಬದಲಾದ”) ಆಕೃತಿಗಳು—ಪಿ.ಡಿ.ಎಫ್‌ಪ್ರಿಂಟ್‌ಮಾಡಲು ಇಲ್ಲಿ ಕ್ಲಿಕ್‌ಮಾಡಿ ◆ “ಇಲ್ಲಿ ಕ್ಯಾನ್‌ಇಡಿ” ಪುಟ— ಪಿ.ಡಿ.ಎಫ್‌ಪ್ರಿಂಟ್‌ಮಾಡಲು ಇಲ್ಲಿ ಕ್ಲಿಕ್‌ ಮಾಡಿ ◆ ವಿಕೃತ ಗ್ರಿಡ್‌ಚಿತ್ರ — ಪಿ.ಡಿ.ಎಫ್‌ಪ್ರಿಂಟ್‌ಮಾಡಲು ಇಲ್ಲಿ ಕ್ಲಿಕ್‌ಮಾಡಿ ◆ ಒಂದು ಬಟ್ಟಲಿನಲ್ಲಿ ಒಣಗಿದ ಸಣ್ಣ ಹುರುಳಿ ಬೀಜಗಳು ◆ ಪೆಂಸಿಲ್ 48 | PSYCHE | 2022


ಜೋಡಣೆ ◆ ಸೋಡಾ ಕ್ಯಾನ್‌ನ ಸುತ್ತಲೂ ಮೈಲಾರ್‌(ಅಥವಾ ಅಲ್ಯೂಮಿನಿಯಮ್‌) ಸುತ್ತಿ ಕೊಳವೆಯಂತಹ ಕನ್ನಡಿಯನ್ನು ತಯಾರಿಸಿಕೊಳ್ಳಿ. ಯಾವುದೇ ಮುದುರು ಅಥವಾ ನೆರಿಗೆ ಕಾಣದಂತೆ ಸ್ವಲ್ಪ ಸಡಿವಾಗಿ ಸುತ್ತಿ. ◆ ಹೊರ ಪದರವನ್ನು ಮೃದುವಾಗಿರಿಸಿಕೊಂಡು, ಟೇಪಿನ ಮೂಲಕ ಸರಿಯಾಗಿ ಹೊಂದಿಸಿ ಅಂಟಿಸಿ. ಮಾಡಿ ನೋಡಿ ನೀವು ಅಚ್ಚು ಹಾಕಿಸಿರುವ(ಪ್ರಿಂಟ್) ವಿಕೃತವಾಗಿ ಕಾಣುತ್ತಿರುವ ಚಿತ್ರನ್ನು ನೋಡಿ. ಅವು ಏನು ಎಂದು ಹೇಳುವಿರಾ? ಈಗ ಮೈಲಾರ್ನಿಂದ ಸುತ್ತಿರುವ ಕ್ಯಾನ್‌ಅನ್ನು ವಿಕೃತ ಚಿತ್ರದ ಪಕ್ಕದಲ್ಲಿರುವ ವೃತ್ತದಲ್ಲಿರಿಸಿ. ಬಾಗಿದ ಕನ್ನಡಿಯಲ್ಲಿ ಆ ಆಕೃತಿಯ ಪ್ರತಿಬಿಂಬವನ್ನು ಗಮನಿಸಿ. ಈಗ ಹೇಗೆ ಕಾಣುತ್ತಿದೆ? ಪುಟದ ಮೇಲೆ ಅಚ್ಚಾಗಿರುವ ಚಿತ್ರವನ್ನು ಹೇಗೆ ಪ್ರತಿಬಿಂಬಿಸುತ್ತದೆ? ಪ್ರತಿಬಿಂಬಿತ ರೂಪದಲ್ಲಿ ಬದಲಾವಣೆಯನ್ನು ತರುವಂತಹ ಕನ್ನಡಿಯನ್ನು ಅನಾಮಾರ್ಫಿಕ್‌ ಕನ್ನಡಿಯನ್ನುತ್ತಾರೆ. “ಇಲ್ಲಿ ಕ್ಯಾನ್‌ಇಡಿ” ಪುಟದ ಪ್ರತಿಯನ್ನು ತೆಗೆದುಕೊಳ್ಳಿ, ಮೈಲಾರ್‌ಸುತ್ತಿದ ಕ್ಯಾನ್‌ಅನ್ನು ನಿಗದಿತ ವೃತ್ತದ ಮೇಲೆ ಇರಿಸಿ. ಕ್ಯಾನಿನ ಕೆಳಗೆ ಇರುವ ರೇಖೆಯು ಕ್ಯಾನಿನ ಎರಡೂ ಭಾಗದಲ್ಲಿಯೂ ವಿಸ್ತರಿಸುವಂತೆ ಕಲ್ಪಿಸಿಕೊಳ್ಳಿ. ಕೊಳವೆಯ ವ್ಯಾಸ (ಡಯಾಮೀಟರ್)‌ಆಗಿರುತ್ತದೆ (ಕೆಳಗಿನ ಚಿತ್ರವನ್ನು ನೋಡಿ)

ಹುರಳಿ ಕಾಳನ್ನು ತೆಗೆದುಕೊಂಡು, ಈ ನೇರ ರೇಖೆಯ ವ್ಯಾಸವನ್ನು ಹೊಂದಿಸಿ ಕ್ಯಾನಿನಲ್ಲಿ ಪ್ರತಿಬಿಂಬವನ್ನು ನೋಡ ಬಹುದು. ಹೀಗೆ ಮಾಡಲು, ಒಂದು ಹುರುಳಿ ಕಾಳನ್ನು ಕ್ಯಾನಿನ ಮುಂದೆ ಇಟ್ಟು ಅದರ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಿ. ಹಾಗೆಯೇ ಕನ್ನಡಿಯಲ್ಲಿ ಗಮನಿಸುತ್ತಾ ಹುರುಳಿಕಾಳನ್ನು ಕಾಲ್ಪನಿಕ ವ್ಯಾಸದ ರೇಖೆಯ ಮೇಲಿರಿಸಿ. ಕನ್ನಡಿಯನ್ನು ನೋಡುತ್ತಾ, ಒಂದೊಂದೇ ಕಾಳನ್ನು ವ್ಯಾಸದ ಉದ್ದಕ್ಕೂ ಇರಿಸುತ್ತಾ ಬನ್ನಿ. ಪೂರ್ಣ ವ್ಯಾಸ ರೇಖೆಯು ಕನ್ನಡಯಲ್ಲಿ ಕಾಣುತ್ತಿದೆ. 49


ಕನ್ನಡಿಯಲ್ಲಿ ಹುರುಳಿಕಾಳುಗಳು ವ್ಯಾಸದ ರೇಖೆಯ ಉದ್ದಕ್ಕೂ ನೇರವಾಗಿ ಇರುವುದನ್ನು ಖಚಿತ ಪಡಿಸಿಕೊಳ್ಳಿ. ಈಗ ನಿಜವಾಗಿಯೂ ಹುರುಳಿಕಾಳುಗಳು ಕಾಗದದ ಮೇಲೆ ಯಾವ ರೀತಿಯಲ್ಲಿ ಜೋಡಿಸಲ್ಪಟ್ಟಿವೆ ಎಂದು ನೋಡಿ.(ಕೆಳಗಿನ ಚಿತ್ರವನ್ನು ನೋಡಿ). ಈ ಚಿತ್ರವನ್ನು ಹೇಗೆ ವರ್ಣಿಸುವಿರಿ?

ಈಗ ನೀವು ಅಚ್ಚು ಹಾಕಿರುವ ಅನಾಮಾರ್ಫಿಕ್‌ಗ್ರಿಡ್‌ಅನ್ನು ಒಮ್ಮೆ ನೋಡಿ: ಇಲ್ಲಿನ ಕೆಲವು ರೇಖೆಗಳು ಹುರುಳಿ ಕಾಳಿನ ರೇಖೆಯಂತೆ ತೋರುತ್ತವೆ. ಕನ್ನಡಿಯನ್ನು ವೃತ್ತದಲ್ಲಿರಿಸಿದಾಗ ಗ್ರಿಡ್‌ನ ಪ್ರತಿಬಿಂಬವು ಹೇಗೆ ಕಾಣುತ್ತದೆ ಎಂದುಕೊಳ್ಳುತ್ತೀರ? ಈ ವಕ್ರ ರೇಖೆಗಳು ಹೇಗೆ ಕಾಣುತ್ತವೆ ಎಂದು ನೋಡಿ. ಕ್ಯಾನ್‌ಅನ್ನು ತೆಗೆದು ಬಿಡಿ. ವೃತ್ತದಲ್ಲಿರುವ ಚೌಕಗಳ ಗ್ರಿಡ್ಡಿನ ಮೇಲೆ ಸರಳ ಚಿತ್ರವೊಂದನ್ನು ನಿರ್ಮಿಸಿ. ನಿಮ್ಮ ಹೆಸರಿನ ಮೊದಲ ಅಕ್ಷರ ಅಥವಾ ಯಾವುದಾದರೂ ಸರಳ ಚಿತ್ರವಾದೀತು. ಪೆಂಸಿಲ್‌ಬಳಸಿ ನಿಮ್ಮ ಚಿತ್ರವನ್ನು ತುಂಬಿ. ಈಗ ನಿಮ್ಮ ಚಿತ್ರವನ್ನು ಅನಾಮಾಫಿಕ್‌ ಕಲೆಯಾಗಿ ಬದಲಾಯಿಸ ಬಹುದು. ವೃತ್ತದಲ್ಲಿ ತುಂಬಿರುವ ಚೌಕವನ್ನು ಅದಕ್ಕೆ ಸಮನಾದ ಬಾಗಿರುವ ಗ್ರಿಡ್‌ ಮೇಲಿನ ಚೌಕಕ್ಕೆ ಕಾಪಿ ಮಾಡಿ. ಕೆಳಗೆ ಉದಾಹರಣೆಯಲ್ಲಿ ‘L’ಅಕ್ಷರವಿದೆ.

50 | PSYCHE | 2022


ಒಮ್ಮೆಗೆ ಒಂದು ಚೌಕವನ್ನು ಕಾಪಿ ಮಾಡಿ. ನಿಮ್ಮ ಮೂಲ ಚಿತ್ರ ಮತ್ತು ವೃತ್ತದೊಳಗಿನ ಚೌಕಗಳ ನಡುವೆ ಎಷ್ಟು ಖಾಲಿ ಚೌಕಗಳು ಇವೆ ಎಂದು ಎಣಿಸಿ.(ಕನ್ನಡಿಯ ಹೊರ ಪದರ ಅಥವಾ ಪ್ರತಿಬಿಂಬದ ಮೂಲವನ್ನು ಸೂಚಿಸುತ್ತದೆ). ಈಗ ವೃತ್ತದ ಹೊರಗೆ ಅಷ್ಟೇ ಚೌಕಗಳ ಅಂತರವನ್ನು ಕಾಪಾಡಿಕೊಂಡು ನಿಮ್ಮ ಚಿತ್ರವನ್ನು ರಚಿಸಿ.(ಕೆಳಗಿನ ಚಿತ್ರ ನೋಡಿ)

ಚೌಕಗಳನ್ನು ಎಣಿಸಿಕೊಂಡು, ಬಾಗಿದ ಗ್ರಿಡ್‌ಮೇಲೆ ನಿಮ್ಮ ಚಿತ್ರದ ಪ್ರತಿಬಿಂಬಿತ ಚಿತ್ರ ರೂಪವನ್ನು ಪೂರ್ಣಗೊಳಿಸಿ. ಚಿತ್ರವು ಪೂರ್ಣವಾದ ನಂತರ, ನಿಮ್ಮ ಚಿತ್ರವನ್ನು ಕನ್ನಡಿಯ ಮುಂದೆ ಇಟ್ಟು ನೋಡಿ. (ಕೆಳಗಿನ ಚಿತ್ರವನ್ನು ನೋಡಿ)

“Soda Can Mirror” by Exploratorium Teacher Institute is licensed under CC BY-NC-SA 4.0

51


ಪ್ರತಿಬಿಂಬಕ ಭಾವನೆಗಳು

Neurones, SEM. Anne Weston, Francis Crick Institute. Attribution-NonCommercial 4.0 International (CC BY-NC 4.0)


7 ನಮ್ಮ ಮೆದುಳಿನಲ್ಲಿ ನಿರ್ಮಿತವಾದ ವಾಸ್ತವತೆ ಹಾಗೂ ದೃಶ್ಯ ಗ್ರಹಿಕೆಯ ನಡುವೆ ವ್ಯತ್ಯಾಸ ಉಂಟಾದಾಗ ದೃಶ್ಯ ಭ್ರಮೆಗಳು ಭಾಸವಾಗುತ್ತವೆ. ಪ್ರತಿ ಬಾರಿಯೂ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಪ್ರತಿಬಿಂಬವನ್ನು ನೋಡಿದಾಗ ಏನಾಗುತ್ತದೆ? ನಿಮ್ಮನ್ನು ಯಾರು ನೋಡುತ್ತಿದ್ದಾರೆ ಎಂಬ ಕಲ್ಪನೆ ನಿಮಗಿರುತ್ತದೆ. ತನ್ನ ತನದ ಅರಿವು ತಪ್ಪಾಗಿರುವುದಿಲ್ಲ. ಈ ಅಂಶವನ್ನು ನಾವು ಸಾಧಾರಣವಾಗಿ ಗಮನಿಸುವುದಿಲ್ಲ, ಅದು ಮಾನವನ ಸಹಜ ಗುಣ. ಆದರೂ ಆತ್ಮದ ಅರಿವು ಮನಸ್ಸಿನ ಅತಿ ದೊಡ್ಡ ನಿಗೂಢತೆ. ಈ ವಿಸ್ಮಯ ಹೇಗೆ ಉದ್ಭವಿಸಿತು, ಏತಕ್ಕಾಗಿ ? ನಮ್ಮ ಮೆದುಳಿನಲ್ಲಿರುವ ಕೋಶಗಳಲ್ಲಿ ಮಿರರ್‌ ನ್ಯೂರಾನ್‌ಗಳ (ಪ್ರತಿಬಿಂಬಕ ನರಕೋಶಗಳು) ಹಂದರವು ಇರುವುದರಿಂದ ನಮ್ಮ ತನದ ಅರಿವು ನಮಗಾಗುತ್ತದೆ. 1992 ರಲ್ಲಿ ಗಿಯಾಕೋಮೋ ರಿಜ್ಸೊಲಟ್ಟಿ ಯವರ ಮುಂದಾಳತ್ವದಲ್ಲಿ ಇಟಾಲಿಯ ಸಂಶೋಧಕರು ಮಿರರ್‌ನ್ಯೂರಾನ್‌ಗಳ ಇರುವಿಕೆಯನ್ನು ಪತ್ತೆ ಮಾಡಿದರು. ಮ್ಯಾಕ್ಯೂ ಕೋತಿಯ ಮೆದುಳಿನ ಅಧ್ಯಯನ ಮಾಡುವಾಗ ಮಿರರ್‌ ನ್ಯೂರಾನ್‌ಗಳ ಇರುವಿಕೆಯು ತಿಳಿದು ಬಂತು.ಒಂದು ಕೆಲಸವನ್ನು ಹೇಗೆ ಮಾಡುವುದು ಎಂದು ಗಮನಿಸುವಾಗ ಯಾವ ನ್ಯೂರಾನ್‌ಗಳು ಸಕ್ರಿಯ ಗೊಂಡವೋ ಅದೇ ಗುಂಪಿನ ನ್ಯೂರಾನ್ ಗಳು ಪುನಃ ಅದೇ ಕೆಲಸವನ್ನು ತಾನೇ ನಿರ್ವಹಿದಾಗ ಕೂಡ ಸಕ್ರಿಯ ಗೊಂಡವು. ಅಂದರೆ ಬೇರೆಯವರು ಮಾಡುವ ಕೆಲಸವನ್ನು ಗಮನಿಸುವ ಕ್ರೆಯಯು ಆಂತರಿಕ ಉದ್ದೀಪನವಾಗಿ ಕಂಡು ಬಂತು. ಆದ್ದರಿಂದ ಈ ಹೆಸರು : ಮಿರರ್‌ನ್ಯೂರಾನ್‌ಬೆಳಕಿಗೆ ಬಂದಿದೆ.(ಪೆಲ್ಲೆಗ್ರಿನೊ,1992)

53


ಮಿರರ್‌ನ್ಯೂರಾನ್‌ಗಳ ಪ್ರವರ್ತಕರು ಮತ್ತು ಪರಿಣತರಲ್ಲಿ ಒಬ್ಬರಾದ ನರ ವಿಜ್ಞಾನಿ ವಿ.ಎಸ್.‌ರಾಮಚಂದ್ರನ್‌, ಮಾನವನ ವಿಕಸನಕ್ಕೆ ಈ ನರಕೋಶಗಳು ಕೀಲಿ ಕೈ ಎನ್ನುತ್ತಾರೆ. ಸ್ವ-ಅರಿವು, ಭಾಷೆ ಮತ್ತು ಅನುಭೂತಿ ಇಂತಹ ಉನ್ನತ ಮಾನವ ಕ್ರಿಯೆಗಳು ಸಹ ಮಿರರ್‌ನ್ಯೂರಾನ್‌ಗಳಿಗೆ ಸಂಬಂಧಿಸಿವೆ ಎಂದು ರಾಮಚಂದ್ರನ್‌ಅವರು ವಿವರಿಸುತ್ತಾರೆ: “ನಾನು ಏನನ್ನಾದರೂ ಎಟುಕಿಸಿ ಮುಟ್ಟಲು ಹವಣಿಸಿದರೆ, ನ್ಯೂರಾನ್‌ಒಂದು ಸಚೇತನಗೊಳ್ಳುತ್ತದೆ. ಜೋ ಏನಾದರೋ ಅದೇ ಪದಾರ್ಥವನ್ನು ಎಟುಕಿಸಿ ಮುಟ್ಟಲು ಪ್ರಯತ್ನಿಸಿದರೂ, ನಮ್ಮಲ್ಲಿ ಅದೇ ನ್ಯೂರಾನ್‌ಸಕ್ರಿಯಗೊಳ್ಳುತ್ತದೆ. ಇದು ವಿಶೇಷತೆ, ಏಕೆಂದರೆ ಬೇರೆಯವರ ಅನುಭವವನ್ನು ತನ್ನ ಅನುಭವದಂತೆ ಭಾವಿಸಿ ಅವರ ಪರಿಸ್ಥಿತಿಯಲ್ಲಿ ನಮ್ಮನ್ನು ಕಲ್ಪಿಸಿಕೊಂಡು ಅವರ ದೃಷ್ಟಿಯಲ್ಲಿಯೇ ನೋಡಿ ಗ್ರಹಿಸುವ ಅನುಭೂತಿಯು ವಿಸ್ಮಯಕಾರಿ.” ಅನ್ಯ ವ್ಯಕ್ತಿಯ ಪರಿಸ್ಥಿತಿ, ಭಾವನೆ ಮತ್ತು ಉದ್ದೇಶ್ಯಗಳನ್ನು ಗುರುತಿಸಿ, ಅರಿಯುವ ಕ್ಷಮತೆಯೇ “ಎಂಪಥಿ” , ಅನುಭೂತಿಯು. ನರ ವಿಜ್ಞಾನದ ಇತ್ತೀಚಿನ ಬೆಳವಣಿಗೆಯು ಮೆದುಳಿನಲ್ಲಿ ಮಿರರ್‌ನ್ಯೂರಾನ್‌ಗಳ ವ್ಯವಸ್ಥೆಯ ಬಗ್ಗೆ ಅಧ್ಯಯನವನ್ನು ಕೇಂದ್ರೀಕರಿಸಿದ್ದು, ಬಹುಶಃ ಅನುಭೂತಿಗೆ ಇವೇ ಕಾರಣ ಎಂದು ವಿವರಿಸುತ್ತಾರೆ. ಈ ಕಾರ್ಯ ಚಟುವಟಿಕೆಯಲ್ಲಿ, ಅನುಭೂತಿಯ ಭಾವನೆಗಳು ಮತ್ತು ನಡೆವಳಿಕೆಗಳ ಬಗ್ಗೆ ತಿಳಿಯೋಣ. ಸಾಮಗ್ರಿಗಳು

(ವೀಡಿಯೊಗಳನ್ನು ನೋಡಲು ಚಿತ್ರಗಳ ಮೇಲೆ ಕ್ಲಿಕ್ ಮಾಡಿ) 54 | PSYCHE | 2022


ವಿಧಾನ 1. ಮೂರು ಜನರ ಗುಂಪನ್ನು ಸೇರಿಸಿಕೊಳ್ಳಿ. ಇಬ್ಬರಿದ್ದರೆ ಒಬ್ಬರು ವೀಕ್ಷಕರಾಗಿ ಇನ್ನೊಬ್ಬರು ಅವರನ್ನು ಗಮನಿಸುವ ಪ್ರಾಥಮಿಕ ಪ್ರೇಕ್ಷಕರಾಗಿ ವರ್ತಿಸಬೇಕಾಗುತ್ತದೆ (ಕೆಳಗೆ ಹೇಳಿರುವಂತೆ). 2. ಪ್ರತಿಯೊಂದು ಗುಂಪಿನ ಒಬ್ಬ ಸದಸ್ಯರು ವೀಡಿಯೋವನ್ನು ಪೂರ್ಣವಾಗಿ ವೀಕ್ಷಿಸುವಂತಹ ಸ್ಥಳದಲ್ಲಿ ಕುಳಿತುಕೊಳ್ಳುತ್ತಾರೆ. ಇವರು ವೀಕ್ಷಕರು. ಗುಂಪಿನ ಉಳಿದ ಸದಸ್ಯರಲ್ಲಿ ಒಬ್ಬರು ಪ್ರಥಮ ಪ್ರೇಕ್ಷಕರಾಗಿ, ಮತ್ತೊಬ್ಬರು ದ್ವಿತೀಯ ಪ್ರೇಕ್ಷಕರಾಗಿ ವರ್ತಿಸುತ್ತಾರೆ. 3. ಪ್ರಥಮ ಪ್ರೇಕ್ಷಕರಿಗೆ ವೀಕ್ಷಕರ ಮುಖವು ಕಾಣುತ್ತದೆ, ಆದರೆ ವೀಡಿಯೋ ಕಾಣುವುದಿಲ್ಲ. ಇವರು ವೀಕ್ಷಕರ ಮುಖದಲ್ಲಿ ಮೂಡುವ ಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಭಾವನೆಗಳ ಬದಲಾವಣೆಯನ್ನು ಗುರುತು ಮಾಡಿಕೊಳ್ಳುತ್ತಾರೆ. 4. ದ್ವಿತೀಯ ಪ್ರೇಕ್ಷಕರಿಗೆ, ಪ್ರಥಮ ಪ್ರೇಕ್ಷಕರ ಮುಖವು ಕಾಣುತ್ತದೆ, ಆದರೆ ವೀಕ್ಷಕರ ಮುಖ ಮತ್ತು ವೀಡಿಯೋ ಕಾಣುವುದಿಲ್ಲ. ಇವರು ಪ್ರಥಮ ಪ್ರೇಕ್ಷಕರ ಮುಖದಲ್ಲಿ ಮೂಡುವ ಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಭಾವನೆಗಳ ಬದಲಾವಣೆಯನ್ನು ಗುರುತು ಮಾಡಿಕೊಳ್ಳುತ್ತಾರೆ.

ಪರಿಣಾಮಗಳನ್ನು ಪರೀಕ್ಷಿಸಿ 1. ಭಾವನೆಗಳ ಸರಣಿಯಲ್ಲಿ ಯಾವ ಬದಲಾವಣೆಗಳು ಕಾಣುತ್ತಿವೆ? 2. ಯಾವುದೇ ಒಂದು ವೀಡಿಯೋ ನೋಡಿದಾಗ ಮೂಡಿದ ಭಾವನೆಗಳಲ್ಲಿ ಸಾಮ್ಯತೆಯು ಕಾಣುತ್ತದೆಯೇ?

ಈಗ “ಮಿರರ್‌ನ್ಯೂರಾನ್ಸ್‌ಎಂಗೇಜ್ಮೆಂಟ್‌ವೀಡಿಯೋ” ವೀಕ್ಷಿಸಿ. ಈ ಮಾಹಿತಿಯಯಿಂದ, ಪರಿಣಾಮಗಳ ಬಗ್ಗೆ ನಿಮ್ಮ ಅಭಿಪ್ರಾಯದಲ್ಲಿ ಯಾವ ಬದಲಾಣೆ ಆಗಿದೆ?

55


8 ಪ್ರತಿಬಿಂಬಕ ನ್ಯೂರಾನ್‌ವ್ಯವಸ್ಥೆಯು, ಸಂಗೀತವನ್ನು ಆಲಿಸುವ ಜನರಲ್ಲಿ ಗ್ರಹಿಕೆ ಮತ್ತು ಸ್ವಭಾವಕ್ಕೆ ತಕ್ಕಂತಹ ಭಾವನೆಗಳ ಉದ್ದೀಪನಗಳಿಗೆ ಅನುಗುಣವಾದ ಪ್ರತಿ-ಭಾವನೆಯನ್ನು ಉಂಟುಮಾಡುತ್ತದೆ.(ಗ್ರಿಡ್ಲೇ ಆಂಡ್‌ಹಾಫ್ಫ್‌, 2006). ಸಂಗೀತವು ಪ್ರಜ್ಞಾ ವಿಕಸನ, ಭಾವನೆಗಳ ನಿಯಂತ್ರಣ ಮತ್ತು ಸಾಮಾಜಿಕ ಸಂಪರ್ಕ ಸಾಧನೆಯಲ್ಲಿ ಪಾತ್ರ ವಹಿಸುತ್ತದೆ ಎಂಬುದಕ್ಕೆ ಸಾಕ್ಷಿ ಪುರಾವೆಗಳು ಹೆಚ್ಚುತಿವೆ.(ಟ್ರೆವಾರ್ತನ್‌, 1999; ಜಸ್ಲಿನ್‌ಆಂಡ್‌ ಸಲೊಬೋಡ, 2001) ಒಂಟಿಯಾಗಿ ಆಲಿಸುತ್ತಿದ್ದರೂ ಸರಿ, ಇಲ್ಲವೇ ಸಮೂಹ ಪ್ರೇಕ್ಷಕರಾಗಿದ್ದರೂ ಸರಿ, ಸಂಗೀತವು ನಮ್ಮ ಮನಸ್ಸು, ಭಾವನೆ ಮತ್ತು ದೈಹಿಕ ಚಲನೆಗಳ ಒಗ್ಗೂಡಿದ ಅನುಭವವಾಗಿರುತ್ತದೆ. ಯಾವುದೇ ರಾಗಕ್ಕೆ ತಕ್ಕಂತೆ ತಲೆದೂಗಿ ಹೆಜ್ಜೆ ಹಾಕುತ್ತೇವೆ. ಈ ಅನುಭವವು, ಬೇರೆ ಬೇರೆ ರಚನೆಗಳನ್ನು ಗುರುತಿಸಿ ಅಚ್ಚರಿಗೊಳ್ಳುವಂತೆ ಪ್ರೇರೇಪಿಸುತ್ತದೆ. ಚಲನಚಿತ್ರ, ಸಂಗೀತ ಮತ್ತು ಮನೋಭಾವವನ್ನು ಬೆಸೆಯುವಂತಹ ಈ ಕಾರ್ಯಚಟುವಟಿಕೆಯ ಮೂಲಕ, ಶಬ್ದ ಮತ್ತು ಸಂವಹನಗಳು ಹೊಂದಿರುವ ಸಂಬಂಧವನ್ನು ಗುರುತಿಸ ಬಹುದು.

56 | PSYCHE | 2022


ಸಂಗೀತ ಮತ್ತು ಮನೋಭಾವ

Photo by Moose Photos


ಹೇರ್‌ಲವ್‌, ಮ್ಯಾಥ್ಯೂ ಏ ಚೆರ್ರಿ ನಿರ್ಮಿಸಿರುವ, ಆಸ್ಕರ್‌ಪ್ರಶಸ್ತಿ ವಿಜೇತ ಸಂಚಾಲಿತ ಲಘು ಚಲನಚಿತ್ರ. ಆಫ್ರಿಕನ್‌ಅಮೇರಿಕನ್‌ತಂದೆಯು ಮೊದಲ ಬಾರಿಗೆ ತನ್ನ ಮಗಳ ಕೂದಲನ್ನು ಬಾಚುವುದನ್ನು ಕಲಿಯುತ್ತಿರುವ ಹೃದಯ ಸ್ಪರ್ಷಿ ಕಥೆಯನ್ನು ಹೊಂದಿರುವ ಚಲನಚಿತ್ರ.

ವೀಡಿಯೋ ವೀಕ್ಷಿಸಿ, ಸಂಗೀತದ ಮನೋವೃತ್ತಿಯನ್ನು ವಿವರಿಸುವ ಮೂರು ಪದಗಳನ್ನು ಬರೆಯಿರಿ.

ಯಾವುದೇ ಪರಿಸ್ಥಿತಿಯ ಮನೋಭಾವದ ಮೇಲೆ ಸಂಗೀತವು ಮಹತ್ವವಾದ ಪ್ರಭಾವವನ್ನು ಬೀರುತ್ತದೆ. ಚಲನಚಿತ್ರ ಅಥವಾ ದೂರದರ್ಶನ ದೃಶ್ಯಗಳಲ್ಲಿ, ಸಂಗೀತದ ಶೈಲಿಯನ್ನು ಬದಲಿಸಿದರೆ, ಆ ದೃಶ್ಯದ ಭಾವನೆ ಅಥವಾ ಮನೋಸ್ಥಿತಿಯನ್ನು ಬದಲಿಸ ಬಹುದು. ಉದಾಹರಣೆಗೆ, ಭಯವಾಗುವ ಚಲನಚಿತ್ರದ ಸಂಗೀತವನ್ನು ಹೇರ್‌ಲವ್‌ಚಲನಚಿತ್ರಕ್ಕೆ ಅಳವಡಿಸಿದರೆ, ಅದು ಬೇರೆಯೇ ಧ್ವನಿ ಛಾಯೆಯನ್ನು ಹೊಂದುತ್ತದೆ. ನಾವೇ ಪ್ರಯತ್ನಿಸೋಣ: ಪ್ರಕ್ರಿಯೆ ◆ ಒಂದು ಟ್ಯಾಬ್‌ತೆರೆದು ಹೇರ್‌ಲವ್‌ಚಲನಚಿತ್ರವನ್ನು ಚಾಲನೆಗೊಳಿಸಿ ನಿಲ್ಲಿಸಿ. ನಂತರ ಚಲನಚಿತ್ರದ ಧ್ವನಿಯನ್ನು ಶೂನ್ಯಗೊಳಿಸಿ. ◆ ಇನ್ನೊಂದು ಟ್ಯಾಬ್‌ನಲಿ, ದಿ ಅಲ್ಟಿಮೇಟ್‌ಮೂವಿ ಸ್ಕೋರ್‌ಪ್ಲೇ-ಲಿಸ್ಟ್‌ ನೊಂದಿಗೆ ತೆರೆದಿಡಿ. ◆ ಒಂದು ಸಂಗೀತದ ತುಣುಕನ್ನು ಕೇಳಲು ಆರಿಸಿ, ನುಡಿಸಿ. ನಿಶಬ್ದಗೊಳಿಸಿದ ಹೇರ್‌ಲವ್‌ ಚಲನಚಿತ್ರವನ್ನು ಚಾಲನೆಗೊಳಿಸಿ ಹೊಸ ಸಂಗೀತ ಗಾಯನದೊಂದಿಗೆ ವೀಕ್ಷಿಸಿ. ಈಗ ಅದೇ ದೃಶ್ಯವು ಬದಲಾದಂತೆ ಕಾಣುವುದೇ? 58 | PSYCHE | 2022


ನಿರ್ದೇಶನಗಳು: “ದಿ ಅಲ್ಟಿಮೇಟ್‌ಮೂವಿ ಸ್ಕೋರ್‌ಪ್ಲೇ-ಲಿಸ್ಟ್‌” ಬಳಸಿಕೊಂಡು ಮೂರು ಚಲನಚಿತ್ರಗಳ ಧ್ವನಿಮುದ್ರಿಕೆಗಳನ್ನು ಗುರಿತಿಸಿ, ಹೇರ್‌ಲವ್‌ವೀಡಿಯೋದ ಧ್ವನಿಯ ಬದಲಿಗೆ ಮೇಲೆ ಹೇಳಿರುವ ಚಟುವಟಿಕೆ ತಂತ್ರವನ್ನು ಅಳವಡಿಸಿ ವೀಡಿಯೋವನ್ನು ವೀಕ್ಷಿಸಿ. ಪ್ರತೀ ಬಾರಿಯೂ ಕಥೆಯ ಹೊಸ ವಾತಾವರಣವನ್ನು 2-3 ವಾಕ್ಯಗಳಲ್ಲಿ ಅಂಕಿತಗೊಳಿಸಿ

THE ULTIMATE MOVIE SCORE PLAYLIST

1

ಬಳಸಿದ ಧ್ವನಿ

2

ಬಳಸಿದ ಧ್ವನಿ

3

ಬಳಸಿದ ಧ್ವನಿ

59


ಮೋಡಗಳಲ್ಲಿ ಇಲ್ಲವೇ ನಿಮ್ಮ ತಲೆಯಲ್ಲಿ

Photo by Anni Roenkae


9 ನಿಮ್ಮ ಕನಸುಗಳಲ್ಲಿ ನೀವು ಸಂಗೀತವನ್ನು ಆಲಿಸಿಲ್ಲವೇ, ಹಾಗಾದರೆ ನೀವು ಬಹು ಸಂಖ್ಯೆಯ ಜನರಲ್ಲಿ ಬರುತ್ತೀರಿ. 2017 ರ, ಸಂಗೀತ, ಮನಸ್ಸು ಮತ್ತು ಮೆದುಳಿಗೆ ಸಂಬಂಧಿಸಿದ ಮನೋಸಂಗೀತಶಾಸ್ತ್ರದ ಸಂಶೋಧನಾ ಪ್ರಕಟಣೆಗಳ ಪ್ರಕಾರ, ಆನ್‌ಲೈನ್‌ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಭಾಗಿಯಾದ ಸುಮಾರು 2000 ಜನರಲ್ಲಿ ಅರ್ಧಕ್ಕಿಂತ ಕಡಿಮೆ ಸಂಖ್ಯೆಯಲ್ಲಿ, ಜನರು ತಾವು ಸಂಗೀತದ ಕನಸನ್ನು ಕಂಡದನ್ನು ದೃಢಪಡಿಸಿದ್ದಾರೆ. ಆ ಎಲ್ಲರಲ್ಲೂ ಶೇಕಡ 6 ರಷ್ಟು ಜನರು ಸಂಗೀತಗಳಿದ್ದ ಕನಸುಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ತಮ್ಮ ದೈನಂದಿನ ಬದುಕಿನಲ್ಲಿ ಹಾಡುಗಾರಿಕೆ, ಸಂಗೀತ ವಾದನಗಳನ್ನು ನುಡಿಸುವುದು ಇಲ್ಲವೇ ಸಂಗೀತವನ್ನು ಸಕ್ರಿಯವಾಗಿ ಕೇಳುವ ಹವ್ಯಾಸವನ್ನು(ಸಂಗೀತವನ್ನು ಮನಸ್ಸಿಟ್ಟು ಸೂಕ್ಷವಾಗಿ ಆಲಿಸುವವರು), ಹೊಂದಿರುವವರಿಗೆ ಸಂಗೀತದ ಕನಸುಗಳು ಬೀಳುವುದು ಸಹಜ. ಸಂಶೋಧಕರ ಪ್ರಕಾರ, ವ್ಯಕ್ತಿಯ ದೈನಂದಿನ ಬದುಕಿನ ಎಚ್ಚರವಾಗಿರುವ ಸಮನದಲ್ಲಿ ಉದ್ಭವಿಸುವ ಚಿಂತನೆಗಳು ಮತ್ತು ವ್ಯಾಕುಲತೆಗಳು ಕನಸಿಸಲ್ಲಿಯೂ ಬರುತ್ತವೆ ಎಂದು ವಿವರಣೆಗಳು ದೃಢ ಪಡಿಸುತ್ತವೆ.

61


ನಾವು ಕನಸು ಕಾಣುವಾಗ, ನಮ್ಮ ಮನಸ್ಸಿನಲ್ಲಿ ಮೂಡಿದ ಕಥೆಗಳು, ಒಂದು ಚಲನಚಿತ್ರಕ್ಕಿಂತಲೂ ಚೆನ್ನಾಗಿ ಹೆಣೆದಿರ ಬಹುದು. ಕನಸುಗಳು ಇನ್ನೂ ಹಸಿಯಾಗಿರುವಾಗಲೇ ಅವುಗಳನ್ನು ಸೆರೆಹಿಡಿಯಲು, ನಾವು ಸ್ವಪ್ನ ಪತ್ರಿಕೆಯನ್ನು ತಯಾರಿಸಿದ್ದೇವೆ. ಸ್ವಪ್ನ ಪತ್ರಿಕೆಯನ್ನು ಬಳಸುವಾಗ ಕೆಳಕಂಡ ಕೆಲವು ಅಂಶಗಳನ್ನು ಮನದಲ್ಲಿಡಬೇಕು: ◆ ಮೊದಲು ಮಾಡಬೇಕಾದುದ್ದೇನು. ಸಾಮಾನ್ಯವಾಗಿ ನಮ್ಮ ಕನಸುಗಳನ್ನು ಇನ್ನೊಬ್ಬರಿಗೆ ವಿವರಿಸುವಾಗ ಅವು ಗೋಜಲಾಗುವುದು ಸಹಜ. ಸ್ವಪ್ನ ಪತ್ರಿಕೆ ಹಾಗೂ ಒಂದು ಲೇಖನಿಯನ್ನು ಸದಾ ನಿಮ್ಮ ಹತ್ತಿರ ಇಟ್ಟುಕೊಳ್ಳಿ. ಹೀಗೆ, ನೀವು ಎದ್ದ ತಕ್ಷಣವೇ ಮಧ್ಯ ರಾತ್ರಿಯಲ್ಲಾಗಲೀ, ಮಾರನೆಯ ಬೆಳಗ್ಗೆಯಾಗಲೀ, ನೀವು ನೆನಪಿಸಿಕೊಳ್ಳುವುದನ್ನು ಬರೆದುಕೊಳ್ಳ ಬಹುದು. ◆ ವರ್ತಮಾನಕಾಲದಲ್ಲಿ ಬರೆಯಿರಿ. ನಿಜ ಜೀವನದಲ್ಲಿ ಮತ್ತೊಮ್ಮೆ ನಡೆಯುತ್ತಿರುವಂತೆ ವರ್ತಮಾನಕಾಲದಲ್ಲಿ ನಿಮ್ಮ ಕನಸುಗಳನ್ನು ವಿವರಿಸಿದರೆ, ಎಲ್ಲ ಘಟನೆಗಳನ್ನೂ ವಿಶದವಾಗಿ ನೆನಪಿಸಿಕೊಂಡು ಹೆಚ್ಚು ವಿವರಣೆಗಳನ್ನು ಒದಗಿಸ ಬಹುದು. ◆ ಕಥೆಯ ಹಂದರವಷ್ಟನ್ನೇ ಅಲ್ಲದೇ, ಭಾವನೆಗಳನ್ನು ಸಹ ಸೆರೆ ಹಿಡಿಯಿರಿ. ಆ ಸಂದರ್ಭದಲ್ಲಿ ನಿಮ್ಮ ಭಾವನೆಯನ್ನು ಸಹ ಬರೆದಿಡುವ ಅಭ್ಯಾಸ ಮಾಡಿ. ಈ ಕನಸು ಬಿದ್ದಾಗ ನಿಮ್ಮ ಮನಸ್ಸು ವ್ಯಾಕುಲವಾಗಿತ್ತೇ? ನೀವು ನೋಡಿರುವ ಸ್ಥಳದಲ್ಲಿ ಕನಸಿನ ಈ ಘಟನೆಯು ಸಂಭವಿಸಿತೇ? ನಿಮ್ಮ ಕನಸಿನಲ್ಲಿ ಮೋಹಕವಾಗಿರುವ ಅಥವಾ ಗಾಬರಿಯಾಗುವ ಸಂಗತಿಗಳು ಇದ್ದವೇ?

ನಿಮ್ಮ ಕನಸುಗಳನ್ನು ಒಂದು ಕ್ಷಣ ಜ್ಞಾಪಿಸಿಕೊಳ್ಳಿ. ಅವುಗಳ ನಡುವೆ ಏನಾದರೂ ಸಮಾನತೆಯನ್ನು ಗಮಸಿರುವಿರಾ?

62 | PSYCHE | 2022


ದಿನ 1

ದಿನ 2

ದಿನ 3

63

Photo by Dapo Abideen on Pexels


ದಿನ 4

ದಿನ 5

ದಿನ 6

64 | PSYCHE | 2022


ದಿನ 7

ದಿನ 8

ದಿನ 9

65


ಕೆಲವು ಅಪ್ರಸ್ತುತ ಸಂಗತಿಗಳನ್ನು ನಮ್ಮ ದೈನಂದಿನ ಜೀವನ ಇಲ್ಲವೇ ಬಹು ಹಳೆಯ ನೆನಪುಗಳಿಗೆ ಹೊಂದಿಸ ಬಹುದು. ಸ್ವಪ್ನ ಮನೋವಿಜ್ಞಾನಿಗಳು ಸೂಚಿಸಿರುವ 9 ಪ್ರಕಾರದ ಅಪ್ರಸ್ತುತ ಸಂಗತಿಗಳು ಈ ಕೆಳಕಂಡಂತೆ ಇವೆ. ನೀವು ಇವುಗಳಲ್ಲಿ ಯಾವುದನ್ನಾದರೂ ನಿಮ್ಮ ಕನಸುಗಳಲ್ಲಿ ಗಮನಿಸಿದ್ದರೆ, ನಿಮ್ಮ ನಿಶ್ಚೇಷ್ಟ ಮನಸ್ಸು ಏನನ್ನು ಹೇಳಲು ಇಚ್ಛಿಸುತ್ತಿದೆ?

1. ಯಾರೋ ಓಡಿ ಹಿಂಬಾಲಿಸುತ್ತಿರುವ ಅನುಭವ 2. ಬೀಳುವುದು 3. ಬೀಳುವುದು 4. ಹುಸಿಯಾದ ಎಚ್ಚರಿಕೆ 5. ಹಲ್ಲು ಬೀಳುವುದು 6. ನಗ್ನವಾಗಿರುವುದು

◆ ಮುಂದಿನ ಪುಟಗಳು ಕೆಲವು ಸಾಮಾನ್ಯ ಕನಸುಗಳ ದೃಶ್ಯ ನಿರೂಪಣೆಗಳಾಗಿವೆ. ◆ ನಿಮ್ಮ ಫೋನ್ ಕ್ಯಾಮರಾವನ್ನು ಬಳಸಿಕೊಂಡು ಟ್ರೋಪ್ ಕಾರ್ಡ್‌ಗಳಲ್ಲಿರುವ QR ಕೋಡನ್ನು ಸ್ಕ್ಯಾನ್ ಮಾಡಿ. ◆ ಇನ್ಸ್ಟಾಗ್ರಾಮ್ಗೆ ಹೋಗಲು ಲಿಂಕ್ ಅನ್ನು ಕ್ಲಿಕ್ ಮಾಡಿ. ◆ ಏ.ಆರ್ ಅನುಭವಕ್ಕಾಗಿ, ಇನ್ಸ್ಟಾಗ್ರಾಮ್ ಕ್ಯಾಮರಾ ಮೂಲಕ ಕಾರ್ಡ್‌ಗಳನ್ನು ವೀಕ್ಷಿಸಿ. ◆ ಕಾರ್ಡನಲ್ಲಿರುವ ಖಾಲಿ ಜಾಗವನ್ನು ನಿಮ್ಮ ಆಲೋಚನೆಗಳಿಗಾಗಿ ಬಳಸಿಕೊಳ್ಳಿ

66 | PSYCHE | 2022


67


68 | PSYCHE | 2022


69


ಪದಕೋಶ

70 | PSYCHE | 2022


ಅಮಿಗ್ಡಲ - ಭಯ ಮತ್ತು ಕ್ರೋಧದಂತಹ ಭಾವನಾತ್ಮಕ ಪ್ರತಿಕ್ರಿಯೆಗಳ ಸ್ಮರಣೆಯನ್ನು ಕ್ರಿಯಾನ್ವಯಗೊಳಿಸುವ ಮೆದುಳಿನ ಭಾಗ ಅಟನೋಮಿಕ್‌ನರ್ವಸ್‌ಸಿಸ್ಟಮ್-‌ಪೆರಿಫೆರಲ್ ನರ ವ್ಯವಸ್ಥೆಯ ಭಾಗ; ಹೃದಯದ ಬಡಿತ, ಉಸಿರಾಟ, ಬೆವರುವುದು ಇತ್ಯಾದಿಗಳ ನಿಯಂತ್ರಣಕ್ಕೆ ಸಹಕಾರಿ; ಸ್ವನಿಯಂತ್ರಿತ ನರಮಂಡಳ ಬ್ರೇನ್‌ಸ್ಟೆಮ್ -‌ಮೆದುಳನ್ನು ಬೆನ್ನು ಮೂಳೆಗೆ ಬೆಸೆಯುವ ಮುಖ್ಯ ನರ ಮಂಡಲದ ಒಂದು ಭಾಗ. ಬೆನ್ನು ಮೂಳೆ ಗೆ ಕಳುಹಿಸುವ ಮತ್ತು ಅಲ್ಲಿಂದ ಮಾಹಿತಿಯನ್ನು ಪಡೆದು ಪೆರಿಫರಲ್ ನರಗಳಿಗೆ ಕಳುಹಿಸುವ ಪಥಗಳನ್ನು ಹೊಂದಿರುತ್ತದೆ. ‌ ಫ್ರೊಂಟೋ-ಪರೈಟಲ್‌ ಕಾರ್ಟೆಕ್ಸ್ – ಮುಂದಿನ ಹಾಗೂ ಕಪಾಲಭಿತ್ತಿಯ ಹೊರಭಾಗದ ಲೋಬ್ ಗಳನ್ನು ಹೊಂದಿರುವ ಮೆದುಳಿನ ಭಾಗ, ಆವರಣದ ಗಮನವನ್ನು ನಿಯಂತ್ರಿಸಲು ಸಹಕಾರಿ. ‌ ಹೋಮೆ ಸ್ಟಾಸಿಸ್ – ಬದಲಾಗುವ ಪರಿಸ್ಥಿಗಳಿಗೆ ಅನುಗುಣವಾಗಿ ಸ್ವನಿಯಂತ್ರಣ ಪ್ರಕ್ರಿಯೆಗಳ ವ್ಯವಸ್ಥೆಯ ಮೂಲಕ ದೃಢವಾಗಿರಲು ಸಹಕಾರಿ ಹೈಪೋಥಾಲಮಸ್ - ಹಸಿವು, ಬಾಯಾರಿಕೆ, ಹಾರ್ಮೋನ್‌ನಿಯಂತ್ರಣ, ಆಂತರಿಕ ದೇಹ ಪ್ರಕ್ರಿಯೆಗಳ ನಿಯಂತ್ರಣ, ಲೈಂಗಿಕ ಕ್ರಿಯೆಗಳು ಮತ್ತು ಡೈಯೂರ್ನಲ್‌ಲಯವನ್ನು ನಿಯಂತ್ರಿಸುತ್ತದೆ; ಥಾಲಮಸ್‌ನ ಕೆಳಗಿದೆ. ಲಿಂಬಿಕ್‌ವ್ಯವಸ್ಥೆ - ವಾಸನೆ, ಬಹುಕಾಲದ ಸ್ಮರಣೆ, ಮತ್ತು ಭಾವನೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮೆದುಳಿನ ಭಾಗ; ಅಮಿಗ್ಡಲ ಮತ್ತು ಹಿಪ್ಪೊಕ್ಯಾಂಪಸ್‌ಸೇರಿದಂತೆ ಹಲವು ಸಂರಚನೆಗಳನ್ನು ಒಳಗೊಂಡಿದೆ; ಇದನ್ನು ಭಾವನಾತ್ಮಕ ಮಂಡಳ ಎಂದೂ ಕರೆಯುತ್ತಾರೆ. ಮಿರರ್‌ನ್ಯೂರಾನ್‌ಗಳು - ಒಬ್ಬ ವ್ಯಕ್ತಿಯ ಕ್ರಿಯೆಯನ್ನು ಗಮನಿಸಿ ಅದೇ ರೀತಿಯ ಕ್ರಿಯೆಯನ್ನು ಪ್ರಚೋಧಿಸುವ ನ್ಯೂರಾನ್‌ಗಳು, ಇದರಿಂದಾಗಿ ಪ್ರತಿಬಿಂಬಕ ಚಟುವಟಿಕೆಗಳನ್ನು ಪ್ರೇರೆಪಿಸುತ್ತವೆ. ಒಸ್ಸಿಪೀಟಲ್‌ಲೋಬ್ - ದೃಶ್ಯ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಸೆರೆಬ್ರಲ್‌ಕಾರ್ಟೆಕ್ಸ್‌ನ ಭಾಗ ಪೇರಿಯಟಲ್‌ಲೋಬ್ - ಸಂವೇದಾತ್ಮಕ ಮತ್ತು ಗ್ರಹಿಕೆಗೆ ಸಂಬಂಧಿಸಿದ ಸೆರೆಬ್ರಲ್‌ಕಾರ್ಟೆಕ್ಸ್‌ನ ಭಾಗ ಪ್ರೀಫ್ರಂಟಲ್‌ಕಾರ್ಟೆಕ್ಸ್(ಪಿ.ಎಫ್.ಸಿ) - ಮಾರ್ಗೋಪಾಯಗಳು ಮತ್ತು ಚಿಂತನೆಗಳನ್ನು ನಿಯಂತ್ರಿಸುವ ಕಾರ್ಟೆಕ್ಸ್‌ನ ಮುಂದಿನ ಭಾಗ ಟೆಂಪರಲ್‌ಲೋಬ್‌– ಶ್ರವಣ, ಸ್ಮರಣೆ, ಭಾವನೆ ಮತ್ತು ಭಾಷಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಸೆರೆಬ್ರಲ್‌ಕಾರ್ಟೆಕ್ಸ್‌ನ ಭಾಗ

71


ಸಂದರ್ಭ ಸಾಹಿತ್ಯ 1. “ಎಲೆನ್‌ಮ್ಯಾಕ್‌ಹೆನ್ರೀಸ್‌ಬೇಸ್ಮೆಂಟ್‌ವರ್ಕ್‌ಶಾಪಾ.” ಮಾರ್ಚ್‌5, 2022 ರಂದು ಪಠಿಸಲಾಗಿದೆ https://ellenjmchenry.com/store/wp-content/ uploads/2016/04/Brain-Hat-2.0-download.pdf 2. ಫ್ರಾಥಿಂಗ್‌ಹಾಮ್‌, ಮಿಯ ಬೆಲ್ಲೆ.”9 ಕಾಮನ ಡ್ರೀಮ್ಸ್‌ಆಂಡ್‌ವ್ಹಾಟ್‌ದೇ ಸಪೋಸೆಡ್ಲಿ ಮೀನ್.”‌9 ಕಾಮನ ಡ್ರೀಮ್ಸ್‌ಆಂಡ್‌ವ್ಹಾಟ್‌ದೇ ಸಪೋಸೆಡ್ಲಿ ಮೀನ್ – ಸಿಂಪಲ್‌ಸೈಕಾಲಜಿ. ಮಾರ್ಚ್‌5, 2022 ರಂದು ಪಠಿಸಲಾಗಿದೆ . https:// www.simplypsychology.org/understanding-your-dreams.html 3. ಮಾರ್ಟನ್‌, ರಾಬರ್ಟ್.”ಮ್ಯೂಸಿಕ್‌ಸಿಂಕ್ರನೈಜ್ಸಸ್‌ದಿ ಬ್ರೇನ್ಸ್‌ಆಫ್‌ ಪರ್ಫಾರ್ಮರ್ಸ್‌ಆಂಡ್‌ಧೇರ್‌ಆಡಿಯಂಸ್.”‌ಸೈಂಟಿಫಿಕ್‌ಅಮೇರಿಕನ್.‌ ಸೈಂಟಿಫಿಕ್‌ಅಮೇರಿಕನ್. ಜೂನ್‌2, 2020.https://www.scientificamerican.com/ article/music-synchronizes-the-brains-of-performers-and-their-audience/. 4. ವಿನ್ನೇ, ಸಿಂಥಿಯ.”ಜೀನಿವಿಲೆ, ದಿ ಫೆಡರಲ್‌ಚೈಲ್ಡ್.”‌ಥಾಟ್‌ಕೊ. ಥಾಟ್‌ಕೊ., ಜೂನ್‌30, 2019. https://www.thoughtco.com/genie-wiley-4689015. 5. ಮೊಲನಾರ್-ಜ್ಸಾಕ್ಸ್‌, ಇಸ್ಟವನ್‌ಆಂಡ್‌ಕೇಟಿ ಒವೆರಿ.”ಮ್ಯೂಸಿಕ್‌ಆಂಡ್‌ ಮಿರರ್‌ಜ್ಯೂರಾನ್ಸ್:‌ಫ್ರಂ ಮೋಶನ್‌ಟು ಈ ಮೋಶನ್.” ಸೋಶ್ಯಲ್‌ ಕಾಗ್ನಿಟಿವ್‌ಆಂಡ್‌ಅಫೆಕ್ಟಿವ್‌ನ್ಯೂರೋಸೈನ್ಸ್.‌ಆಕ್ಸಫರ್ಡ್‌ ಯೂನಿವರ್ಸಿಟಿ ಪ್ರೆಸ್‌, ಡಿಸಂಬರ್‌2006. https://www.ncbi.nlm.nih.gov/ pmc/articles/PMC2555420/#:~:text=With%20its%20ability%20to%20 link,Gridley%20and%20Hoff%2C%202006 ). 6. ಮ್ಯಾಟ್ವೀಜ್ಸಕ್‌, ಜಸ್ಟಿನ.”ದಿ ಪವರ್‌ಆಫ್‌ತ್ರೀ ಇನ್‌ಫೇರಿ ಟೇಲ್ಸ್:ವರ್ಲ್ಡ್‌ಆಫ್‌ಬೆಟರ್‌ಲರ್ನಿಂಗ್.”‌ವರ್ಲ್ಡ್‌ಆಫ್‌ಬೆಟರ್‌ಲರ್ನಿಂಗ್ | ಕೇಂಬ್ರಿಡ್ಜ್‌ಯೂನಿವರ್ಸಿಟಿ ಪ್ರೆಸ್‌, ಜನವರಿ 28, 2022.. https://www. cambridge.org/elt/blog/2020/02/25/power-of-three-fairy-tales/. 7. ಟೆಡ್ ಟಾಕ್‌ಡೈರೆಕ್ಟರ್.”ದಿ ನ್ಯೂರಾನ್ಸ್‌ದಟ್‌ಶೇಪ್ಡ್‌ಸಿವಿಲೈಜ್ಸೇಶನ್‌| ವಿಎಸ್‌ರಾಮಚಂದ್ರನ್.”‌ಯೂಟ್ಯೂಬ್.‌ಯೂಟ್ಯೂಬ್, ಜನವರಿ 4, 2010. https://www.youtube.com/watch?v=t0pwKzTRG5E. 8. “ಯಿವಿಂದ್‌ಕ್ವಲ್ನೇಸ್‌, ಆಂಡ್‌“ಯಿವಿಂದ್‌ಕ್ವಲ್ನೇಸ್‌1.”ಮಾರಲ್‌ ಡೈಲಮಾಸ್.”‌ಸ್ಪ್ರಿಂಗರ್‌ಲಿಂಕ್.ಪಲ್ಗ್ರೇವ್‌ಪಿವೋಟ್‌, ಚಾಮ್‌, ಜನವರಿ 1, 1970. https://link.springer.com/chapter/10.1007/978-3-03015191-1_2#:~:text=Moral%20dilemmas%20are%20situations%20 in,concern%2C%20regardless%20of%20the%20decision. 9. “ಮಾರಲ್‌ರೀಜ್ಸನಿಂಗ್.”‌ಅಮೇರಿಕನ್‌ಸೈಕಲಾಜಿಕಲ್‌ಅಸೋಸಿಯೇಶನ್. ಅಮೇರಿಕನ್‌ಸೈಕಲಾಜಿಕಲ್‌ಅಸೋಸಿಯೇಶನ್.ಆಕ್ಸೆಸ್ಡ್‌ಮಾರ್ಚ್‌7, 2022.. https://www.apa.org/pubs/highlights/peeps/issue-110 72 | PSYCHE | 2022


10. ”ಮಾರಲ್‌ಡೈಲಮಾ”:ವುಡ್‌ಯು ಕಿಲ್‌ಒನ್‌ಪರ್ಸನ್‌ಟು ಸೇವ್‌ಫೈವ್?”‌ಸೈನ್ಸ್‌ ಡೈಲಿ. ಸೈನ್ಸ್‌ಡೈಲಿ.ಡಿಸಂಬರ್‌2, 2011. https://www.sciencedaily.com/ releases/2011/12/111201105443.htm. 11. ಟರ್ನೀ, ಆಡ್ರನ್ನೀ ಎಲ್‌, ಆಂಡ್‌ಚಾರ್ಲ್ಸ್‌ಏ ನೆಲ್ಸನ್.‌“ಬ್ರೇನ್‌ ಡೆವೆಲಪ್ಮೆಂಟ್‌ಆಂಡ್‌ದಿ ರೋಲ್‌ಆಫ್‌ಎಕ್ಸ್ಪೀರಿಯಂಸ್‌ಇನ್‌ದಿ ಅರ್ಲಿ ಇಯರ್ಸ್.” ಜ್ಸೀರೋ ಟು ತ್ರೀ. ಯೂ ಎಸ್‌ನ್ಯಾಶನಲ್‌ಲೈಬ್ರರಿ ಆಫ್‌ ಮೆಡಿಸಿನ್‌, ನವಂಬರ್‌1, 2009. https://www.ncbi.nlm.nih.gov/pmc/articles/ PMC3722610/. 12. ಚೆರ್ರಿ, ಕೇಂದ್ರ. “3 ಕೀ ಎಥಿಕಲ್‌ಕಂಸಿಡರೇಶನ್ಸ್‌ಇನ್‌ಸೈಕಾಲಾಜಿಕಲ್‌ ರಿಸರ್ಚ್.”‌ವೆರಿವೆಲ್‌ಮೈಂಡ್.‌ವೆರಿವೆಲ್‌ಮೈಂಡ್.‌ಸೆಪ್ಟೆಂಬರ್‌26, 2020. https://www.verywellmind.com/conducting-ethical-research-inpsychology-2795184. 13. “ಬ್ರೇನ್‌ಅನಾಟಮಿ ಆಂಡ್‌ಹೌ ದಿ ಬ್ರೇನ್‌ವರ್ಕ್ಸ್”.‌ಜ್ಹಾನ್ಸ್‌ಹಾಪ್‌ಕಿನ್ಸ್‌ ಮೆಡಿಸಿನ್.‌ಏಕ್ಸಿಸ್ಡ್‌ಮಾರ್ಚ್‌12, 2022. https://www.hopkinsmedicine. org/health/conditions-and-diseases/anatomy-of-the-brain. 14. ಚೆರ್ರಿ, ಕೇಂದ್ರ “ವ್ಹಾಟ್‌ಎಥಿಕಲ್‌ಗೈಡ್‌ಲೈನ್ಸ್‌ಡು ಸೈಕಾಲಾಜಿಸ್ಟ್ಸ್ ಫಾಲೋ.”‌ವೆರಿವೆಲ್‌ಮೈಂಡ್.‌ವೆರಿವೆಲ್‌ಮೈಂಡ್.‌ಮಾರ್ಚ್‌4, 2020. https://www. verywellmind.com/apa-ethical-code-guidelines-4687465. 15. “ಕ್ರಿಯೇಟಿವ್‌ರೈಟಿಂಗ್‌ಆಂಡ್‌ಯುವರ್‌ಬ್ರೇನ್‌– ಸೈಕಾಲಜಿ ಟುಡೆ.”‌ ಏಕ್ಸಿಸ್ಡ್‌ಮಾರ್ಚ್ 12, 2022. https://www.psychologytoday.com/us/blog/ trouble-in-mind/201304/creative-writing-and-your-brain. 16. ಡೆಲೆನಿವ್‌, ಸೋಫಿಯಾ.”ದಿ “ಮಿ” ಇಲ್ಯೂಜ್ಸನ್‌: ಹೌ ಯುವರ್‌ಬ್ರೇನ್‌ ಕಾಂಜ್ಯೂರ್ಸ್‌ಅಪ್‌ಉವರ್‌ಸೆಂಸ್‌ಆಫ್‌ಸೆಲ್ಫ್.”‌ನ್ಯೂ ಸೈನ್ಟಿಸ್ಟ್.‌ ನ್ಯೂ ಸೈನ್ಟಿಸ್ಟ್.‌ನವಂಬರ್‌ 7, 2018. https://www.newscientist.com/ article/mg23931940-100-the-me-illusion-how-your-brain-conjures-up-yoursense-of-self/. 17. “ಮಿರರ್‌ನ್ಯೂರಾನ್ಸ್:‌ದಿ ಕೀ ಟು ಸೆಲ್ಫ್‌-ಕಾಂಶಿಯಸ್‌ಆಂಡ್‌ ಎಂಪಥಿ.” ಫೇನ. ಏಕ್ಸಿಸ್ಡ್‌ಮಾರ್ಚ್‌12, 2022. https://www.faena. com/aleph/mirror-neurons-the-key-to-self-consciousness-andempathy#:~:text=Ramachandram%2C%20one%20of%20the%20 leading,be%20related%20to%20mirror%20neurons. 18. ರಾಮಚಂದ್ರನ್‌, ವಿಲಿಯನೂರ್‌ಎಸ್.”ಹೇ, ಇಜ್ಸ್‌ಧಟ್‌ಮಿ ಓವರ್‌ಧೇರ್?”‌ ಸೈನ್ಟಿಫಿಕ್‌ಅಮೇರಿಕನ್. ಸೈನ್ಟಿಫಿಕ್‌ಅಮೇರಿಕನ್, ಮೇ 1, 2010. https:// www.scientificamerican.com/article/hey-is-that-me-over-there/. 19. “ರಿರೈಟಿಂಗ್‌ಫೇಯ್ರಿ ಟೇಲ್ಸ್:‌ನ್ಯೂ ಚ್ಯಾಲೆಂಜ್‌ಇನ್‌ಕ್ರಿಯೇಟಿವಿಟಿ ಇನ್‌…-ಯೂವಿ.” ವೀಕ್ಷಣೆ ಮಾರ್ಚ್‌12, 2022. https://www.uv.es/extravio/ pdf6/malafantis_ntoulia. 20. ಟ್ರಾಟ್ಟರ್‌, ಕ್ರಿಸ್ಟೀನ್‌ಜೆ.”ಹೋಮ್.”‌ಎನ್.ವೈ.ಯೂ ಸ್ಕೂಲ್‌ಆಫ್‌ ಪ್ರೊಫೆಶನಲ್‌ಸ್ಟಡೀಸ್‌ಇಂಗ್ಲಿಷ್‌ಲ್ಯಾಂಗ್ವೇಜ್‌ಇಂಸ್ಟಿಟ್ಯೂಟ್‌ ಈ.ಎಲ್.ಐ, ಆಗಸ್ಟ್‌25,2020. https://wp.nyu.edu/sps-eli/2020/08/25/ crossword-puzzles-a-great-way-to-increase-brain-power/. 73


ಟಿಪ್ಪಣಿಗಳು ಮತ್ತು ಚುಟುಕು-ಚಿತ್ರಗಳು

74 | PSYCHE | 2022


75


ಸೈನ್ಸ್‌ಗ್ಯಾಲರಿ ಬೆಂಗಳೂರಿನ

www.bengaluru.sciencegallery.com

@SCIGALLERYBLR

76 | PSYCHE | 2022


Turn static files into dynamic content formats.

Create a flipbook
Issuu converts static files into: digital portfolios, online yearbooks, online catalogs, digital photo albums and more. Sign up and create your flipbook.