ಸೋಂಕು
ಕೈಪಿಡಿ
30.04.2021-13.06.2021
ವಿಷಯ ಸೂಚಿ ರೋಗ ಪಿಡುಗನ್ನು ಅನುಕರಿಸುವ ಕ್ರೀಡೆ
6
ನಿಮಗೆ ಕಾಣುತ್ತಿದೆಯೇ ?
10
ನಮ್ಮೊಡನಿರುವ ವೈರಾಣುಗಳು
16
ವ್ಯಾಪಕ ಮಸಲತ್ತು
22
ಮುಸುಕನ್ನು (ಮಾಸ್)ಕ್ ತೆರೆಯಿರಿ
26
ನನ್ನ ನಿರಂತರ ನೆಗಡಿ
32
ಫ್ಲೂರೋ ಸೆಂಸ್- ಗುರುತನ್ನು ಪತ್ತೆ ಮಾಡಿ
36
ಕರೋನಾ ರೇಖಾ ಚಿತ್ರ
40
ಎಲ್ಲೆಲ್ಲಿಯೂ ವೈರಾಣುಗಳು
44
ಗೋಜಲು ಒಗಟು
46
ಆತ್ಮೀಯ ಸಹಭಾಗಿಗಳೇ, ವ್ಯಾಪನಗಳ ವಿಚಿತ್ರ ಸಂಚಿನ ವಿಶ್ವಕ್ಕೆ ಸ್ವಾಗತ. ನಮ್ಮ ಪ್ರದರ್ಶಿಕೆಗಳನ್ನು ನೋಡಿ,
ಉಪನ್ಯಾಸಗಳನ್ನು ಕೇಳಿ, ಕಾರ್ಯಾಗಾರಗಳಲ್ಲಿ ಭಾಗಿಯಾಗಿ, ವಿವಿಧ ರೀತಿಯಲ್ಲಿ ಹೇಗೆ ವ್ಯಾಪನಗಳು ನಮ್ಮ ಬದುಕನ್ನು ಸುತ್ತುವರೆದಿವೆ ಎಂಬುದರ ಬಗೆಗೆ ಹೊಸ ದೃಷ್ಟಿಕೋನ ಮತ್ತು ಅನುಭವವನ್ನು ಪಡೆದಿರುವಿರಿ ಎಂದು ಭಾವಿಸುತ್ತೇವೆ.
ನಮ್ಮ ಡಿಜಿಟಲ್ ಪ್ರದರ್ಶನ ʼಸೋಂಕುʼ (ಕಂಟೇಜನ್) ವಿನ ಜೊತೆಯಲ್ಲಿ ಈ
ಚಟುವಟಿಕೆ ಕೈಪಿಡಿಯನ್ನು ನೀಡಲಾಗುತ್ತಿದೆ. ಈ ಚಟುವಟಿಕೆಗಳು, ʼನೀವೇ ಮಾಡಿ
ನೋಡಿʼ ಪ್ರಯೋಗಗಳು ಮತ್ತು ಒಗಟುಗಳ ಮೂಲಕ ವ್ಯಾಪನಗಳ ಗುಣ ಸ್ವಭಾವಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರಕುವುದು.
ಅಗೋಚರ ಸೂಕ್ಷ್ಮಾಣುಗಳ ಅಧ್ಯಯನವನ್ನು ಸಂಶೋಧಕರು ಹೇಗೆ ನೆಡೆಸಿದ್ದಾರೆ ಎಂದು ಫ್ಲೂರೋಸೆಂಸ್ ಪ್ರಯೋಗದ ಮೂಲಕ ತಿಳಿದುಕೊಳ್ಳಿ . ಗಾಳಿ ಸುದ್ದಿ ,
ಸಿದ್ಧಾಂತಗಳು ಇಂದಿನ ಡಿಜಿಟಲ್ ಕಾಲಮಾನದಲ್ಲಿ ಹೇಗೆ ಹಬ್ಬುತ್ತವೆ ಎಂದು
ಕೆಲವು ಖ್ಯಾತ ಸುಳ್ಳು ಸುದ್ಧಿಗಳ ಮೂಲಕ ತಿಳಿಯಿರಿ, ನಿಮ್ಮ ಕಲ್ಪನೆಯಿಂದ ಹೊಸ ಬಗೆಯ ಗಾಳಿ ಕಥನವನ್ನು ಹುಟ್ಟುಹಾಕಿ, ವೈರಾಣುಗಳ ಕಲೆಯನ್ನು ಸೃಜಿಸಿ, ಸೂಕ್ಷ್ಮಾಣುಗಳ ಲೋಕವನ್ನು ವೀಕ್ಷಿ ಸಿ.
ಬೆಂಗಳೂರು ವಿಜ್ ಞಾ ನ ವೇದಿಕೆಯು ಸಂಯೋಜಿಸಿ ಪ್ರಸ್ತುತ ಪಡಿಸಿರುವ ಈ
ಚಟುವಟಿಕೆಗಳ ಅನುಭವವು ನಿಮ್ಮದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ,
#ExperimentWithSGB ಹಾಗು #TransmissionStartsNow, ಈ ಹ್ಯಾಶ್
ಟ್ಯಾ ಗ್ ಬಳಸಿಕೊಂಡು ತಮ್ಮ ಪ್ರಯೋಗಗಳನ್ನು ಮತ್ತು ಸೃಜನಶೀಲ ರಚನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ .
ಹೃತ್ಪೂರ್ವಕ ಅಭಿನಂದನೆಗಳು,
ಬೆಂಗಳೂರು ವಿಜ್ ಞಾ ನ ವೇದಿಕೆ ತಂಡ.
ರೋಗ ಪಿಡುಗನ್ನು ಹೋಲುವ ಕ್ರೀಡೆ ಸೋಫೋಕಲ್ಸ್ ನ ಪ್ರಖ್ಯಾತ ನಾಟಕ ಓಡಿಪಸ್ ರೆಕ್ಸ್, ಕರುಣಾಜನಕ ಮನವಿಯೊಂದಿಗೆ ಪ್ರಾರಂಭವಾಗುತ್ತದೆ. ರಾಜ ಓಡಿಪಸ್ನನ್ನು ಭೇಟಿಯಾಗಿ, ನಗರವನ್ನೇ ಅಳಿದು ಹಾಕುತ್ತಿರುವ ಪ್ಲೇಗ್ ರೋಗ ಮಹಾಮಾರಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಪುರೋಹಿತ ಒಬ್ಬರು ಮನವಿ ಸಲ್ಲಿಸುತ್ತಿದ್ದಾರೆ. ಪ್ಲೇಗ್ ರೋಗ ಮಹಾಮಾರಿಯ ಚಿತ್ರಣವು ಹಿಂಬದಿಯಲ್ಲಿ ಪರದೆಯ ಮೇಲೆ ಪ್ರದರ್ಶಿತವಾಗಿದೆ. ವೇದಿಕೆಯ ಮೇಲೆ ಓಡಿಪಸ್ ನ ಕಥಾ ರೂಪಕ ಮುಂದುವರಿಯುತ್ತದೆ. ನಾಟಕ ಹಾಗೂ ರೋಗ ಪಿಡುಗಿನ ಪ್ರಾರಂಭಿಕ ನಂಟು ತೆರೆಗೆ ಬಂದಿದೆ.
ತೇಬೇಸ್ ನಗರವು ಮಾರಣಾಂತಿಕ ಅಲೆಗಳಲಿ ತೊಯ್ದಾಡುತಿದೆ, ಸಾವಿನ ಸುಳಿಯಿಂದ ಮೆಲೇಳಲು ಸಾಧ್ಯವೇ ಇಲ್ಲ . ಭೂಮಿಯ ಫಲ ಪುಷ್ಪಗಳನೆಲ್ಲ ನುಂಗುತಿದೆ ಈ ತುಕ್ಕು; ಮಂದೆಗಳು ರೋಗಕ್ಕೆ ತುತ್ತಾಗಿವೆ, ಗರ್ಭದಲ್ಲೇ ಮಕ್ಕಳು ಸಾವನಪ್ಪಿವೆ, ಪ್ರಸವ ಬೇನೆ ವ್ಯರ್ಥ, ಚಿತೆಯ ರೂಪ ತಾಳಿದ ʼಪ್ಲೇಗಮ್ಮʼ ಊರಿನ ಎಲ್ಲೆಡೆ ಮಿಂಚು ಎಂಬಂತೆ ಸಂಚರಿಸಿ ಕಾಡ್ಮೋಸ್ ಮನೆಗಳಲಿ ಎಲ್ಲವೂ ಸ್ಥಗಿತ, ಬರಿದು, ಎಲ್ಲೆಡೆ ಕತ್ತಲು, ಮೆರೆದಿರುವುದು ಒಂದೇ ʼಸಾವು” ತೇಬೆಸ್ ನ ಸಂಕಟಕೆ ಎಣೆಯೇ ಇಲ್ಲವೇ. (ಸೋಫೋಕಲ್ಸ್ 1991, 26–34)
ಸೋಜಿಗ ಎಂದರೆ, ರೋಗ ಪಿಡುಗುಗಳಿಗೂ ರಂಗಮಂದಿರದ ನಾಟಕಗಳಿಗೂ ಗಾಢವಾದ ಸಂಬಂಧವನ್ನು ಕಾಣುತ್ತೇವೆ. ಶೇಕ್ಸ್ಪಿಯರ್ ಕಾಲದಿಂದಲೂ, ರಂಗ ಮಂದಿರವನ್ನು ಪಾಪ ಪ್ರಜ್ಞೆಯ ವೇದಿಕೆಯಾಗಿಯೇ ಪರಿಗಣಿಸಲಾಗಿದೆ. ನಗರ ಗಳಲ್ಲಿ ಮತ್ತು ಊರುಗಳಲ್ಲಿ ರೋಗ ಪಿಡುಗುಗಳನ್ನು ಹರಡುವ ತಾಣವಾಗಿ 1 ನಾಟಕಗಳನ್ನು ನೋಡಲಾಗುತ್ತಿತ್ತು . (“ಶೇಕ್ಸ್ಪಿಯರ್ ಇನ್ ಲಾಕ್ ಡೌನ್: ಡಿಡ್ ಹಿ ರೈಟ್ ಕಿಂಗ್ ಲಿಯರ್ ಇನ್ ಪ್ಲೇಗ್ ಕ್ವಾರಂಟೈನ್?“ 2020). ರಂಗಮಂದಿರಗಳು, ರೋಗ ಪಿಡುಗುಗಳನ್ನು ಹರಡುವ ತಾಣವಷ್ಟೇ ಅಲ್ಲ , ʼರೋಗಗಳ ಮೂಲʼ ಎಂದೇ ಜನರು ನಂಬಿದ್ದರು. ವಿರೋಧಾಭಾಸ ಎಂದರೆ, ಏಡ್ಸ್ ರೋಗ ಪಿಡುಗು ಅತಿಯಾಗಿ 2 ವ್ಯಾಪಿಸಿದಾಗ, ಅನೇಕ ಕಾರ್ಯಕರ್ತರು ನಾಟಕಗಳ ಮೂಲಕವೇ ಈ ರೋಗದ ಲಕ್ಷ ಣ – ಕಾರಣಗಳ ಅರಿವನ್ನು ಎಲ್ಲೆಡೆ ಮೂಡಿಸಿದ್ದರು. (ರಿಸ್ತಾನಿ 2020). ಸೋಂಕು ಮತ್ತು ಸಾಂಕ್ರಾಮಿಕತೆ, ಸಹಜವಾಗಿಯೇ, ರಂಗ ಮಂದಿರಗಳಲ್ಲಿ ಮತ್ತು ಚಿತ್ರ ಮಂದಿರಗಳಲ್ಲಿ ಅಸ್ಥಿತ್ವವನ್ನು ಪಡೆದಿವೆ. ನಾಟಕವನ್ನು ನೋಡುವ ಪ್ರೇಕ್ಷ ಕರು, ನಾಟಕದಲ್ಲಿ ಅಭಿನಯಗೊಳ್ಳುವ ಭಾವನೆಗಳಲ್ಲಿ ಮುಳುಗಿ ಬಿಟ್ಟಿರುತ್ತಾರೆ, ನಟ ನಟಿಯರೊಂದಿಗೆ ಮಾನಸಿಕ ಸಂಪರ್ಕ ಕಲ್ಪಿಸಿಕೊಂಡಿರುತ್ತಾರೆ. 1992 ರಲ್ಲಿ , ಇಟಲಿಯ ಸಂಶೋಧಕರು ಮಾಕ್ಯೂ ಕೋತಿಗಳಲ್ಲಿ ಇಂತಹುದೇ ರೀತಿಯ ಅನುಕರಣಿಯ ಸ್ವಭಾವಗಳನ್ನು ಗಮನಿಸಿದ್ದರು. ʼಮಿರರ್ ನ್ಯೂರಾನ್ಸ್ʼ, ಒಂದು ಕೋತಿಯು ಯಾವುದಾದರೂ ಕ್ರಿಯೆಯನ್ನು ಪ್ರದರ್ಶಿಸಿದರೆ, ಅದರ ನ್ಯೂರಾನ್ ಗಳು ಉದ್ದೀಪನ ಗೊಳ್ಳುತ್ತಿದ್ದವು, ಅಷ್ಟೇ ಅಲ್ಲ , ಅದೇ ಸಮಯಕ್ಕೆ ಬೇರೆ ಕೋತಿಗಳಲ್ಲೂ ಅದೇ ರೀತಿಯ ಪ್ರತಿಕ್ರಿಯೆಯು ಸಕ್ರಿಯಗೊಳ್ಳುವುದನ್ನು ಗಮನಿಸಿದರು (ಫ್ಯಾಬ್ರಿ – ಡೆಸ್ಟ್ರೋ ಆಂಡ್ ರಿಜೋಲಟ್ಟಿ , 2008). ಮಾನವರಲ್ಲಿ ಇಂತಹ ಕಾಕತಾಳೀಯ ಸ್ವಭಾವಗಳಿಗೆ ಅನ್ವಯಿಸುವಂತೆ, ಮಿರರ್ ನ್ಯೂರಾನ್ ಗಳ ಬಗ್ಗೆ ಸಾಕಷ್ಟು ಸಂಶೋಧನೆ ನೆಡೆದಿಲ್ಲ , ಆದ ಕಾರಣ, ಖಚಿತವಾದ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ . ಆದರೆ, ನಾಟಕಗಳು, ಚಲನ ಚಿತ್ರಗಳು ಪ್ರದರ್ಶಿತವಾದಾಗ, ನಟ-ನಟಿಯರು ಮತ್ತು ಪ್ರೇಕ್ಷ ಕರ ನಡುವಣ ಮಾನಸಿಕ ಹೊಂದಾಣಿಕೆಯು, ಇಂತಹ ಏಕರೂಪ ಪ್ರತಿಕ್ರಿಯೆಗಳಿಗೆ ಕನ್ನಡಿಯಾಗಿದೆ. ʼಮಿರರ್ ನ್ಯೂರಾನ್ಸ್ʼ, ಉದ್ದೀಪನ 3 ಗೊಳ್ಳುತ್ತವೋ ಇಲ್ಲವೋ ಗೊತ್ತಿಲ್ಲ , ಆದರೆ, ಮಾನವ ಭಾವನೆಗಳು ಸಾಂಕ್ರಾಮಿಕ ಎಂಬುದು ಸತ್ಯ . (ವೈಡ್, ಎರ್ಬ್, ಆಂಡ್ ಬಾರ್ಟೆಲ್ಸ್, 2001). ನಾಟಕಗಳು ಮತ್ತು ರಂಗ ಮಂದಿರಗಳು, ರೋಗ ಪಿಡುಗುಗಳ ಐತಿಹಾಸಿಕ ಸಂಪರ್ಕ ಮಾಧ್ಯಮಗಳು, ಅಷ್ಟೇ ಅಲ್ಲ , ಸಾಂಕ್ರಾಮಿಕವಾಗಿ ವ್ಯಾಪಿಸಿ ಪ್ರತಿಬಿಂಬಿಸುವ ಭಾವನೆಗಳನ್ನು ಮತ್ತು ನೆಡವಳಿಕೆಗಳನ್ನು ಅರ್ಥೈಸಲು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ.
6 / ಸೋಂಕು 2021
ಅನ್ ಸ್ಪ್ಲಾಶ್ ಬಗ್ಗೆ ಹಸನ್ ಆಲ್ಮಸಿ ಅವರು ತೆಗೆದಿರುವ ಛಾಯಾಚಿತ್ರ
7
ಕನ್ನಡಿ, ಪ್ರತಿಬಿಂಬ ಬೇಕಾದ ಸಾಮಗ್ರಿ ಒಬ್ಬರು ಸಹ ಆಟಗಾರರು ಸ್ವಲ್ಪ ಸ್ಥಳ
ಅನುಭವವನ್ನು ಬರೆದ ನಂತರ, ನಿಮ್ಮ ಲೇಖನವನ್ನು ಬದಲಾಯಿಸಿಕೊಂಡು, ಚರ್ಚಿಸಿ.
ನಿಮ್ಮ ಅನಿಸಿಕೆಗಳು ಮತ್ತು ಅನುಭವ ಒಂದೇ ತರಹ ಇತ್ತೇ ?
ಹೀಗೆ ಮಾಡಿ • ಆಟಕ್ಕೆ ಒಬ್ಬರು ಜೊತೆಗಾರರನ್ನು ಆರಿಸಿ ಕೊಳ್ಳಿ. ಅಂಗಳದಲ್ಲಿ , ಇಬ್ಬರೂ ಮುಖಾ ಮುಖಿಯಾಗಿ ನಿಂತುಕೊಳ್ಳಿ.
ಒಬ್ಬರನ್ನು ಒಬ್ಬರು ಅನುಕರಣೆ ಮಾಡಿದುದು ನಿಮ್ಮಲ್ಲಿ ಯಾವ ಭಾವವನ್ನು ಮೂಡಿಸಿದೆ ?
• ಏನೂ ಮಾತನಾಡದೇ ಒಬ್ಬರು ಹಾವ ಭಾವವನ್ನು ಬದಲಾಯಿಸಿ ಅಥವಾ ಯಾವುದೇ ರೀತಿಯ ಮೂಕಾಭಿನಯ ಮಾಡಿ. • ಜೊತೆಗಾರರು ಅದೇ ಹಾವ ಭಾವ ಅಥವ ಅಭಿನಯವನ್ನು ಅನುಕರಿಸ ಬೇಕು. ಇಬ್ಬರೂ ಒಂದೇ ಬಗೆಯ ಹಾವ ಭಾವಗಳನ್ನು ಒಟ್ಟಿಗೆ ಏಕ ಕಾಲಕ್ಕೆ ಮಾಡಬೇಕು.
ಅನುಕರಣೆ ಮಾಡುವುದು ಸುಲಭವಾಗಿತ್ತೇ ಅಥವಾ ಕಷ್ಟ ಎನಿಸಿತೇ ?
• ಒಬ್ಬರನ್ನು ಇನ್ನೊಬ್ಬರು ಅನುಕರಿಸುತ್ತಾ ಸಾಗಿ. ಮಧ್ಯೆ ಎಲ್ಲೂ ಸಮಯ ನೀಡದೇ ಒಂದೇ ಸಮನೆ, ನಿಧಾನವಾಗಿ ಈ ಅನುಕರಣಾ ಚಟುವಟಿಕೆಯನ್ನು ಮುಂದುವರಿಸಿ. • ಸ್ವಲ್ಪ ಸಮಯದ ನಂತರ ಮೌನವಾಗಿಯೇ ಈ ಚಟುವಟಿಕೆಯನ್ನು ಒಟ್ಟಿಗೆ ಅಂತ್ಯ ಗೊಳಿಸಿ. • ನಿಮ್ಮ ಅನುಭವವನ್ನು ನಿಮ್ಮ ಜೊತೆಗಾರರೊಂದಿಗೆ ಚರ್ಚಿಸ ಬೇಡಿ. ಪ್ರತ್ಯೇಕವಾಗಿ, ಇಬ್ಬರೂ, ಚಟುವಟಿಕೆಅನುಭವವನ್ನು ದಾಖಲಿಸಲು ನೀಡಿರುವ ಸ್ಥಳದಲ್ಲಿ ನಿಮ್ಮ ಅನಿಸಿಕೆಯನ್ನು ಬರೆಯಿರಿ.
8 / ಸೋಂಕು 2021
ಯಾವಾಗಲೂ ಯಾರು ಮೊದಲು ಅಭಿನಯ ಮಾಡುತ್ತಿದ್ದರು ಮತ್ತು ಯಾರು ಅನುಕರಣೆ ಮಾಡುತ್ತಿದ್ದರು ಎಂದು ನಿಮಗೆ ಖಚಿತವಾಗಿ ಗೊತ್ತಾಗುತ್ತಿತ್ತೇ ?
9
ನಿಮಗೆ ಕಾಣುತ್ತಿದೆಯೇ ? ವ್ಯಾಪನವನ್ನು ಗಮನಿಸಿ ಒಂದು ಪ್ರದರ್ಶನ ನೆಡೆಯುತ್ತಿದೆ. ಪ್ರೇಕ್ಷ ಕ ವೃಂದದಲ್ಲಿ ನೀವೂ ಒಬ್ಬರು. ಪ್ರದರ್ಶನವು ಕೊನೆಗೊಳ್ಳುತ್ತಿದಂತೆ, ಕೆಲವು ಪ್ರೇಕ್ಷ ಕರು ಎದ್ದು ನಿಂತು ಕರ ತಾಡನ ಮಾಡಿ ಅಭಿನಂದಿಸುತ್ತಾರೆ. ಇನ್ನೂ ಕೆಲವರು ತಮ್ಮ ಆಸನಗಳಿಂದ ಎದ್ದು ಹೊರಗೆ ಹೋಗುತ್ತಾರೆ. ನೀವೂ ಸಹ ಎದ್ದು ಹೊರಗೆ ಬರುತ್ತೀರ. ಇದು ಸ್ವಾಭಾವ ಸಾಂಕ್ರಾಮಿಕತೆಯ ಅಥವಾ ಸಮೂಹ ವರ್ತನೆಯ ಒಂದು ಉದಾಹರಣೆ. ಒಬ್ಬ ವ್ಯಕ್ತಿಯ ಸ್ವಭಾವೋಚಿತ ವರ್ತನೆಯು ಬಹಳಷ್ಟು ಜನರಿಗೆ ಅನುಕರಣೆ ಮಾಡುವಂತೆ ಪ್ರೇರಣೆ ನೀಡುತ್ತದೆ. ಒಬ್ಬರನ್ನು ಮತ್ತೊಬ್ಬರು ಅನುಕರಿಸಿ, ಕೊನೆಗೆ ಎಲ್ಲರೂ ಒಂದೇ ಬಗೆಯಲ್ಲಿ ವರ್ತಿಸುತ್ತಾರೆ.
ನೆಡವಳಿಕೆಗೆ ಸಂಬಂಧಿಸಿದ ಸಾಂಕ್ರಾಮಿಕಗಳು ಅಥವಾ ಸಾಮಾಜಿಕ ವ್ಯಾಪನಗಳನ್ನು ಹಲವು ಬಗೆಯಲ್ಲಿ ಬಣ್ಣಿಸಿ ಪರಿಭಾಷೆ ನೀಡಿದ್ದಾರೆ, ಇದರಿಂದ ಹೊಸ ಬಗೆಯ ಅಧ್ಯಯನ ಕ್ಷೇತ್ರವು ತೆರೆದುಕೊಂಡಿದೆ. ಸಾಮಾಜಿಕ ಮನೋವಿಜ್ ಞಾ ನದ ಸಂಶೋಧನೆಯು, ಒಬ್ಬರಿಂದ ಮತ್ತೊಬ್ಬರಿಗೆ ವ್ಯಾಪಿಸುವ ಹಲವು ಸಾಂಕ್ರಾಮಿಕ ವರ್ತನೆಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಬೆಳಕಿಗೆ ತಂದಿದೆ. ಸಾಮಾನ್ಯವಾಗಿ ನಿಯಮಗಳನ್ನು ಉಲ್ಲಂಘಿಸುವ ಸ್ವಭಾವ ಸಾಂಕ್ರಾಮಿಕವಾಗಿರುತ್ತವೆ, ಒಂದೇ ಬಗೆಯ ಉಡುಪುಗಳು ಖ್ಯಾತಿ ಪಡೆದಿರುವುದನ್ನು ಕಾಣ ಬಹುದು, ಉದಾಹರಣೆಗೆ ಜೀನ್ಸ್ ಉಡುಪುಗಳು, ಹೀಗೆ. ಸ್ಟಾಕ್ ಮಾರುಕಟ್ಟೆಯ ಏರು ಪೇರುಗಳನ್ನು ಸಹ ಸಾಮಾಜಿಕ ವ್ಯಾಪನ ತತ್ವಗಳ ಮೂಲಕ ಸ್ವಲ್ಪ ಮಟ್ಟಿಗೆ ಅರ್ಥೈಸ ಬಹುದು. ಸಾಮಾಜಿಕ ವ್ಯಾಪನಗಳ ಬಗೆಗೆ ನಿರ್ಧಿಷ್ಟ ಪರೀಕ್ಷೆ ಗಳು ಮತ್ತು ಅಧ್ಯಯನಗಳು ರೂಪಗೊಳ್ಳುವ ಮೊದಲು, ನೆಡವಳಿಕೆಗಳನ್ನು ಸೂಕ್ಷ ್ಮವಾಗಿ ಗಮನಿಸಿ, ಬಹಳಷ್ಟು ವಿಷಯಗಳನ್ನು ಕಲೆ ಹಾಕಲಾಗುತ್ತಿತ್ತು. ಸಾಮಾನ್ಯವಾಗಿ ಚಳುವಳಿಗಳು, ಧಂಗೆ, ನಾಗರೀಕರ ಸಮೂಹ ವಿರೋಧ, ಮುಂತಾದವುಗಳ ಬಗೆಗೆ ಸೂಕ್ಷ ್ಮವಾಗಿ ಗಮನ ಹರಿಸಿ, 4 ಅಂತಹ ಗುಂಪುಗಳ ಸದಸ್ಯರ ನೆಡವಳಿಕೆಗಳನ್ನು ಲೇಖನಗಳಲ್ಲಿ ದಾಖಲಿಸುತ್ತಿದ್ದರು. (ಜರೇಟ್ಸ್ಕಿ 2016) . ಆಗಿನಿಂದ, ಸಾಮಾಜಿಕ ವ್ಯಾಪನಗಳ ಬಗೆಗೆ ಹೆಚ್ಚು ತಿಳಿದು ಕೊಳ್ಳಲು, ಭಾವನೆಗಳನ್ನು ಅಧ್ಯಯನ ಮಾಡಲು, ಸಾಂಕ್ರಾಮಿಕ ಭಾವನೆಗಳಿಗೆ ಸಂಬಂಧಿಸಿದ ಎಲ್ಲಾ ಸೂಕ್ಷ ್ಮ ವಿವರಣೆಗಳನ್ನು ಕಲೆ ಹಾಕಲು ಪ್ರಾರಂಭಿಸಿದ್ದಾರೆ. ಜನರು ಬೇರೆಯವರನ್ನು ನೋಡಿ ಅನುಕರಿಸುವುದು ಏಕೆ ಎಂಬುದನ್ನು ತಿಳಿಯುವುದು ಇಂದಿಗೂ ಬಹು ಮುಖ್ಯವಾಗಿದೆ.
10 / ಸೋಂಕು 2021
ಅನ್ ಸ್ಪ್ಲಾಶ್ ಬಗ್ಗೆ ಹ್ಯಾನ್ಸನ್ ಲು ಅವರು ತೆಗೆದಿರುವ ಛಾಯಾಚಿತ್ರ
11
ಹಿಂಬಾಲಿಸಿ ಮತ್ತು ಗಮನಿಸಿ
ಹೀಗೆ ಮಾಡಿ
ವಿನ್ಯಾಸಗಳು, ಶಬ್ದಗಳು, ಬಣ್ಣಗಳು ಮತ್ತು ಜನರು. ನಾವು ಯಾವಾಗಲೂ ನಮ್ಮ ಸುತ್ತಮುತ್ತಲಿನ ಜಗತ್ತನ್ನು ಗಮನಿಸುತ್ತಿರುತ್ತೇವೆ. ಬೇರೆಯವರನ್ನು ನೋಡಿ , ಗಮನಿಸಿ ಹಲವು ವಿಷಯಗಳನ್ನು ಅರಿತುಕೊಳ್ಳುತ್ತೇವೆ. ಕುತೂಹಲ ಪ್ರಕ್ರಿಯೆಗಳನ್ನು ಸೂಕ್ಷ ್ಮವಾಗಿ ಗಮನಿಸುವುದರಿಂದ ಹಲವು ವೈಜ್ ಞಾ ನಿಕ ಸಿದ್ಧಾಂತಗಳು ಮತ್ತು ಅನ್ವೇಷಣೆಗಳು, ಬೆಳಕಿಗೆ ಬಂದಿವೆ. ಸೂಕ್ಷ ್ಮವಾಗಿ, ಗಹನವಾಗಿ, ಹತ್ತಿರದಿಂದ ಗಮನಿಸುವುದರಿಂದ ನೆಡವಳಿಕೆಗಳಿಗೆ ಸಂಬಂಧಿಸಿದ ವ್ಯಾಪನಗಳ ಅಧ್ಯಯನ ಮಾಡ ಬಹುದು.
ಕೆಲವು ಸ್ವಭಾವಗಳು, ನೆಡವಳಿಕೆಗಳು ಎಷ್ಟು ವ್ಯಾಪಕವಾಕವಾಗಿ ಹರಡುತ್ತವೆ ಎಂದು ತಿಳಿಯಲು ಇಂತಹ ಸಾಮಾನ್ಯ ಕ್ರಿಯೆಗಳ ಸೂಚಿಯನ್ನು ತಯಾರಿಸಿ. ಆಕಳಿಕೆ, ಕೆಮ್ಮು , ನಗು, ಕೆರೆತ ಮತ್ತು ತುರಿತ ಮುಂತಾದವು . ಈ ನೆಡವಳಿಕೆಗಳು ಎಷ್ಟು ಸಾಂಕ್ರಾಮಿಕ ಎಂದು ಅಧ್ಯಯನ ಮಾಡಿ ತಿಳಿಯಲಾಗಿದೆ. ಇವೆಲ್ಲ ಒಂದು ಹಂತಕ್ಕೆ ವ್ಯಾಪನಗಳೇ , ನೀವು ಈ ಸಾಮಾನ್ಯ ನೆಡವಳಿಕೆಗಳನ್ನು ಗಮನಿಸಿ, ಹಾಗೆಯೆ ಇಂತಹ ಬೇರೆ ವ್ಯಾಪಕವಾಗಿ ಹರಡ ಬಲ್ಲ ನೆಡವಳಿಕೆಗಳನ್ನು ಸಹ ಗಮನಿಸಿ. ನಿಮ್ಮ ಪ್ರತಿಕ್ರಿಯೆ ಮತ್ತು ಅನುಭವವನ್ನು ಅವುಗಳಿಗೆಂದು ನಮೂದಿಸಿರುವ ಸ್ಥಳದಲ್ಲಿ ವಿವರಿಸಿ.
ನೀವು ನಿಮ್ಮ ಸುತ್ತ ಮುತ್ತ ಇರುವ ಜನರ ನೆಡವಳಿಕೆಗಳನ್ನು ಗಮನಿಸಿದ ನಂತರ, ನೀವು ಕಂಡು ಕೊಂಡ ಸತ್ಯ ಗಳನ್ನು ಖಂಡಿತವಾಗಿಯೂ ನಮ್ಮೊಂದಿಗೆ ಈ ಹ್ಯಾಶ್ ಟ್ಯಾ ಗ್ #ExperimentWithSGB ಮತ್ತು #TransmissionStartsNow ಮೂಲಕ ಹಂಚಿಕೊಳ್ಳಿ.
ಬೇಕಾದ ಸಾಮಗ್ರಿ ಒಂದು ನೋಟ್ ಪುಸ್ತಕ ಲೇಖನಿ ಇಲ್ಲವೇ ಪೆನ್ಸಿಲ್ ಜನಗಳ ಒಂದು ಗುಂಪು (!)
ಪ್ರಯೋಗದ ವಿವಿಧ ಹಂತಗಳು • ಜನ ಒಕ್ಕೂಟದಲ್ಲಿ ನೀವೂ ಸೇರಿಕೊಳ್ಳಿ. ನೀವು ಕೈಗೊಳ್ಳುತ್ತಿರುವ ಪ್ರಯೋಗದ ಬಗೆಗೆ ಮೊದಲೇ ಯಾರಿಗೂ ಹೇಳಬೇಡಿ. • ಎಲ್ಲರೊಂದಿಗೆ ಸಹಜವಾಗಿ ಬೆರೆತು ಮಾತನಾಡುತ್ತಾ, ಈ ನೆಡವಳಿಕೆಗಳನ್ನು ಎಲ್ಲರಿಗೂ ಗೊತ್ತಾಗುವಂತೆ ಆದರೆ ಸಹಜ ರೀತಿಯಲ್ಲಿ ಅಭಿನಯಿಸಿ (ಆಕಳಿಕೆ / ಕೆಮ್ಮು / ಮೈಯನ್ನು ಕೆರೆದುಕೊಳ್ಳುವುದು ಇತ್ಯಾದಿ). • ಮುಂದಿನ ಕೆಲವು ಕ್ಷ ಣಗಳಲ್ಲಿ ನಿಮ್ಮಂದಿಗೆ ಸುತ್ತ ಮುತ್ತ ಇರುವ ಎಷ್ಟು ಮಂದಿ ನಿಮ್ಮನ್ನು ಅನುಕರಿಸಿದರು ಎಂದು ಪತ್ತೆ ಮಾಡಿ. ಅದೇ ಹಾವ ಭಾವ ಕ್ರಿಯೆಯನ್ನು ಪುನರಾವರ್ತಿಸಿ. • ನೀವು ಗಮನಿಸಿದ ವಿಷಯಗಳನ್ನು ಪುಸ್ತಕದಲ್ಲಿ ನಮೂದಿಸಿರಿ. ಈ ಚಟುವಟಿಕೆಗೆ ಸೂಕ್ತ ಎನಿಸುವ ಬೇರೆ ಮಾಹಿತಿಯನ್ನೂ ನಮೂದಿಸ ಬಹುದು. • ಇದೇ ರೀತಿ ಒಂದೊಂದಾಗಿ ಬೇರೆ ನೆಡವಳಿಕೆಗಳನ್ನು ಪ್ರದರ್ಶಿಸಿ. ಆದರೆ ಒಂದರಿಂದ ಇನ್ನೊಂದು ಕ್ರಿಯೆಯ ನಡುವೆ ಸಾಕಷ್ಟು ಸಮಯದ ಅಂತರವಿರಲಿ. ಆಗ ನೀವು ಎಲ್ಲರನ್ನೂ ಸರಿಯಾಗಿ ಗಮನಿಸ ಬಹುದು. • ನೀವು ಸಂಕಲಿಸಿರುವ ವಿವರಣೆಗಳನ್ನು ಮತ್ತೊಮ್ಮೆ ನೋಡಿ. ಬಹಳ ವ್ಯಾಪಕವಾಗಿ ಅನುಕರಣೆ ಮಾಡಲಾದ ಕ್ರಿಯೆ ಯಾವುದು ? ಎಷ್ಟು ಜನರು ನಿಮ್ಮನ್ನು ಅನುಕರಿಸಿದರು ? ನಿಮ್ಮ ಕ್ರಿಯೆಯು ಒಬ್ಬರಿಂದ ಒಬ್ಬರಿಗೆ ಹಬ್ಬುವ ಸ್ವಾಭಾವ ಹೊಂದಿತ್ತೇ ? ನೀವು ಗಮನಿಸಿದ ಸಹಜ ಪ್ರತಿಕ್ರಿಯೆಯನ್ನು ಆಧರಿಸಿ ಯಾವ ನಿರ್ಣಯಕ್ಕೆ ಬರುತ್ತೀರಿ ? • ಪ್ರಯೋಗದ ನಂತರ, ನೀವು ನೆಡೆಸಿದ ಈ ಪ್ರಯೋಗದಲ್ಲಿ ಗೊತ್ತಿಲ್ಲದೇ ಭಾಗಿಯಾದ ಜನರಿಗೆ ಇದರ ಪರಿಣಾಮಗಳನ್ನು ಖಂಡಿತವಾಗಿಯೂ ತಿಳಿಸಿ.
12 / ಸೋಂಕು 2021
13
ಎರಡನೇ ಬಾರಿಯಲ್ಲಿ ನಿಮ್ಮ ಕ್ರಿಯೆ / ನೆಡವಳಿಕೆಯನ್ನು ಅನುಕರಿಸಿದ ಜನಗಳ ಸಂಖ್ಯೆ
ದಿನ ಮತ್ತು ದಿನಾಂಕ
ನಿಮ್ಮ ಕ್ರಿಯೆ ಅಥವಾ ನೆಡವಳಿಕೆ
ನೀವು ಗಮನಿಸುತ್ತಿರುವ ಸಮೂಹದಲ್ಲಿ ಎಷ್ಟು ಜನರಿದ್ದಾರೆ ?
ಮೂರನೇ ಬಾರಿಯಲ್ಲಿ ನಿಮ್ಮ ಕ್ರಿಯೆ / ನೆಡವಳಿಕೆಯನ್ನು ಅನುಕರಿಸಿದ ಜನಗಳ ಸಂಖ್ಯೆ
ನಿಮ್ಮ ಕ್ರಿಯೆ / ನೆಡವಳಿಕೆಯನ್ನು ಅನುಕರಿಸಿದ ಜನಗಳ ಒಟ್ಟು ಸಂಖ್ಯೆ
ನಿಮ್ಮ ಕ್ರಿಯೆಯನ್ನು ಅನುಕರಿಸಿದ ಜನಗಳ ಒಟ್ಟು ಸಂಖ್ಯೆಯ ಶೇಕಡ ಪ್ರಮಾಣ ಎಷ್ಟು ? ಮೊದಲನೇ ಬಾರಿಯಲ್ಲಿ ನಿಮ್ಮ ಕ್ರಿಯೆ / ನೆಡವಳಿಕೆಯನ್ನು ಅನುಕರಿಸಿದ ಜನಗಳ ಸಂಖ್ಯೆ
ಅನ್ಯ ಗಮನಾರ್ಹ ಮಾಹಿತಿ
14 / ಸೋಂಕು 2021
15
ನಮ್ಮೊಡನಿರುವ ವೈರಾಣುಗಳು ವ್ಯಾಪನಗಳನ್ನು ಅಧ್ಯಯನ ಮಾಡಲು, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಕುತೂಹಲದಿಂದ ಗಮನಿಸುವುದು ಹೆಚ್ಚು ಲಾಭಕರ. ಸಾಮಾಜಿಕ ಮಾಧ್ಯಮಗಳಲ್ಲಿ , ಆನ್ ಲೈನ್ ಪ್ರಪಂಚದಲ್ಲಿ , ಅಂತರ್ಜಾಲದ ಮೂಲಕ ಯಾವುದೇ ವಿಷಯವು ಸ್ವಾಭಾವಿಕವಾಗಿಯೇ ಬಹು ವೇಗವಾಗಿ ಹರಡುತ್ತವೆ, ವೀಡಿಯೋಗಳು , ಮೆಮೆಗಳು, ಟ್ವೀಟ್ ಗಳು ಮತ್ತು ಟ್ರೆಂಡ್ ಗಳು ಸಾಮಾಜಿಕ ಮಾಧ್ಯಮದ ಮೂಲಕ ಜಗತ್ತಿನ ಮೂಲೆ ಮೂಲೆಯನ್ನು ಸ್ವಲ್ಪ ಸಮಯದಲ್ಲೇ ತಲುಪಿ ಬಿಡುತ್ತದೆ. ವಿಜ್ ಞಾ ನಿಗಳು, ಈ ಸಮಾಜಿಕ ಅಲೆಗಳು / ಟ್ರೆಂಡ್ಗಳು ಸಾಂಕ್ರಾಮಿಕವಾಗಿ ವ್ಯಾಪಿಸುವ ಹಿಂದಿನ ಪ್ರಕ್ರಿಯೆಯ 5 ಸಂಶೋಧನೆ ಮಾಡುತ್ತಿದ್ದಾರೆ. “ಚಾರ್ಲಿ ಬಿಟ್ ಮೈ ಫಿಂಗರ್– ಅಗೇನ್!” ಎಂಬ ಪ್ರಖ್ಯಾತ ವೀಡಿಯೋವನ್ನು 879 ದಶ ಲಕ್ಷ ಕ್ಕೂ ಹೆಚ್ಚು ಬಾರಿ ವೀಕ್ಷಿ ಸಲಾಗಿದೆ. (ಎಚ್.ಡಿ.ಸಿ.ವೈ.ಟಿ 2007). ನೀವೂ ಈ ವೀಡಿಯೋವನ್ನು ನೋಡಿರ ಬಹುದು. ಸಾಮಾನ್ಯವಾದ ವಿಷಯ ಹೊಂದಿದ್ದರೂ, ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಈ ವೀಡಿಯೋ ಬಹುತೇಕ ಕುತೂಹಲಕಾರಿ ಪ್ರಶ್ನೆಗಳಿಗೆ ಎಣೆ ಮಾಡಿ ಕೊಟ್ಟಿದೆ. ನಾವು ಕೆಲವು ಬಗೆಯ ವಿಷಯಗಳನ್ನೇ ಏಕೆ ಎಲ್ಲರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ, ಸಾಮಾನ್ಯವೆನಿಸುವ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಬಹು ವೇಗವಾಗಿ ಏಕೆ ಹಬ್ಬುತ್ತವೆ? ವ್ಹಾರ್ಟನ್ ಸ್ಕೂಲ್ ಅಲ್ಲಿ ಸಂಶೋಧಕರು ಮತ್ತು ಪ್ರೊಫೆಸರ್ ಆಗಿರುವ ಜೋನಾಹ್ ಬರ್ಗರ್, ಅವರು ಹೇಳುವಂತೆ, “ಚಾರ್ಲಿ ಬಿಟ್ ಮೈ ಫಿಂಗರ್– ಅಗೇನ್!” ಅಂತಹ ವೀಡಿಯೋಗಳಲ್ಲಿ ಹೊಮ್ಮವ ಭಾವನೆಗಳು 6 ವೀಕ್ಷ ಕರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. (ಲೆಹ್ರರ್, 2011) . ಇಂತಹ ಲಘು ಚಲನಚಿತ್ರಗಳನ್ನು ನೋಡುವಾಗ ನಮ್ಮಲ್ಲಿ ಆಗುವ ಮಾನಸಿಕ ಬದಲಾವಣೆ ಹಾಗೂ ಉತ್ಸುಕತೆಯ ಸಂಚಲನಗಳಿಂದಾಗಿ ಈ ತರಹದ ವಿಷಯವನ್ನು ಅನ್ಯರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ. ಇನ್ನೊಂದು ಸಂಶೋಧನೆಯ ಪ್ರಕಾರ, 7 ಭಾವನೆಗಳು ಆನ್ ಲೈನ್ ಮೂಲಕ ವಿಭಿನ್ನ ಗತಿಯಲ್ಲಿ ಪ್ರಸರಿಸುತ್ತವೆ. (ಶೇಯರ್2014). ವೀಡಿಯೋ, ಲೇಖನ , ಛಾಯಾಚಿತ್ರ ಇಂತಹ ಕೃತಿಗಳಲ್ಲಿ ಯಾವ ವಿಷಯ ಅಡಗಿದೆ ಎಂಬುದಕ್ಕಿಂತಲೂ, ಅವು ಉದ್ದೀಪನ ಗೊಳಿಸುವ ಭಾವನೆಗಳು ಮುಖ್ಯ ಪಾತ್ರ ವಹಿಸುತ್ತವೆ. ಅದ್ಭುತ / ಆಶ್ಚರ್ಯ / ಉತ್ಸುಕತೆ ಮತ್ತು ಕೋಪವು ಹೆಚ್ಚು ಪ್ರಭಾವಕಾರಿಯಾಗಿದ್ದು , ಭಾವನೆಗಳನ್ನು ಕೆರಳಿಸುವುದರಲ್ಲಿ ಸಹಕಾರಿಯಾಗಿರುತ್ತವೆ. ಅದೇ ದುಃಖಕರವಾದ ವಿಷಯಗಳನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಹಿಂಜರಿಯುತ್ತಾರೆ.
16 / ಸೋಂಕು 2021
ಪ್ರಖ್ಯಾತ ವೀಡಿಯೋ “ಚಾರ್ಲಿ ಬಿಟ್ ಮೈ ಫಿಂಗರ್– ಅಗೇನ್!” ನ ಚಿತ್ರಣ
Caption placeholder
17
ಚಟುವಟಿಕೆ ಸಾಮಾಜಿಕ ಮಾಧ್ಯಮದ ವ್ಯಾಪನ ಪ್ರವೃತ್ತಿಯ ಬಗ್ಗೆ ಹೆಚ್ಚು ತಿಳಿಯಲು, ಸಾಂಕ್ರಾಮಿಕತೆಯ ಗತಿ ಮತ್ತು ಶಕ್ತಿಯ ಅರಿವು ಬಹು ಮುಖ್ಯ . ನಿಮ್ಮ ಅನುಭವಕ್ಕೆ ಬಂದಿರುವಂತಹ ಕೆಲವು ಸಾಂಕ್ರಾಮಿಕ ವಿಷಯಗಳನ್ನು ನೆನಪು ಮಾಡಿಕೊಳ್ಳಿ.
ಯಾವ ವರ್ಗದ ಜನರನ್ನು ಗಮನದಲ್ಲಿಟ್ಟು ಕೊಂಡು ವಿಷಯಗಳ ಈ ಅಲೆಯು ವ್ಯಾಪಕವಾಗಿ ಹರಡಿತು ?
8
ದೀರ್ಘ ಪಟ್ಟಿಯನ್ನು ಇಲ್ಲಿ ಕಾಣಬಹುದು
ನೀವು ನೆನಪಿಸಿಕೊಳ್ಳಲು ಸಹಕಾರಿಯಾಗುವ ಸೂಚಿಯು ಇಲ್ಲಿ ಇದೆ (ಫ್ರಿಯಸ್, 2019). ವ್ಯಾಪಕವಾಗಿ ಹರಡಿದ ಕೆಲವು ವಿಷಯ ಸಂದರ್ಭಗಳನ್ನು ನೆನಪಿಸಿಕೊಂಡ ನಂತರ ಈ ಪ್ರಶ್ನೆಗಳಿಗೆ ನಿಮ್ಮ ಅಭಿಪ್ರಾಯವನ್ನು ಕೆಳಗಿರುವ ಖಾಲಿ ಜಾಗದಲ್ಲಿ ವ್ಯಕ್ತ ಪಡಿಸಿ :
ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ನಿಮ್ಮಲ್ಲಿ ಯಾವ ಭಾವನೆಗಳು ಮೂಡಿವೆ ?
ಈ ಹೊಸ ಅಲೆಯ ಉದ್ದೇಶ ಏನು ?
ಈ ತರಹದ ವೀಡಿಯೋಗಳು / ಪ್ರವೃತ್ತಿಗಳು / ವಿಷಯ ಅಲೆಗಳು ಮೇಲಿನಿಂದ ಮೇಲೆ ಏಕೆ ಹಬ್ಬುತ್ತವೆ ?
ಯಾವ ವಿಷಯವನ್ನು ಕುರಿತಂತೆ, ಈ ಅಲೆಯು ಎದ್ದಿತು ? ಜನರು ವಿಷಯವನ್ನು ಸ್ವೀಕರಿಸುವ ರೀತಿಯನ್ನು ಈ ಅಲೆಯು ಹೇಗೆ ಬದಲಾಯಿಸಿತು ?
18 / ಸೋಂಕು 2021
ಈ ವಿಷಯವು ಏಕೆ ಮತ್ತು ಹೇಗೆ ವ್ಯಾಪಿಸಿತು ಎಂಬುದಕ್ಕೆ ನಿಮಗೆ ತೋಚುವ ಬೇರೆ ಯಾವುದಾದರೂ ಚಿಂತನೆಯನ್ನೂ ನಮೂದಿಸಿ. 19
ಈ ಎಲ್ಲಾ ಪ್ರಶ್ನೆಗಳಿಗೂ ಸೂಕ್ತ ಉತ್ತರ ದೊರೆತ ಮೇಲೆ, ಯಾವುದಾದರೂ ವಿಷಯವನ್ನು ಹಬ್ಬಿಸಲು ನೀವು ಏನು ಮಾಡುವಿರಿ ಎಂದು ಒಮ್ಮೆ ಚಿಂತಿಸಿ:
ನಿಮ್ಮ ಚಿಂತನೆಗಳನ್ನು , ಬರಹಗಳನ್ನು , ಛಾಯಾಚಿತ್ರಗಳನ್ನು , ನಿದರ್ಶನಗಳನ್ನು , ನಮ್ಮೊಂದಿಗೆ ಈ ಹ್ಯಾಶ್ ಟ್ಯಾ ಗ್ ಬಳಸಿ ಹಂಚಿಕೊಳ್ಳಿ : #ExperimentWithSGB ಆಂಡ್ #TransmissionStartsNow
ಎಂಥಹ ವಿಷಯ ವಸ್ತುವನ್ನು ಸೃಷ್ಟಿಸಲು ಬಯಸುವಿರಿ: ಲೇಖನ, ಛಾಯಾಚಿತ್ರ, ವೀಡಿಯೋ, ಸವಾಲು ಅಥವಾ ಇವೆಲ್ಲಕ್ಕಿಂತ ವಿಭಿನ್ನವಾದ ರಚನೆ ?
ಯಾವ ಭಾವನೆಗಳನ್ನು ನೀವು ಉದ್ದೀಪನಗೊಳಿಸಲು ಇಚ್ಛಿಸುವಿರಿ ?
ವಿವಿಧ ಭಾವನೆಗಳನ್ನು ಒಮ್ಮೆಲೇ ಮೂಡಿಸುವುದು ಪ್ರಭಾವಕಾರಿಯೋ ಅಥವಾ ಒಂದೇ ಭಾವನೆಯನ್ನು ಮೂಡಿಸುವುದು ಲೇಸೋ ?
ಯಾವುದಾದರೂ ವಿಷಯವು ಅಲೆಯಂತೆ ವ್ಯಾಪಿಸಿ ಬಿಟ್ಟಿದೆ ಎಂದು ಹೇಗೆ ಹೇಳ ಬಹುದು ?
20 / ಸೋಂಕು 2021
ಯಾವುದಾದರೂ ವಿಷಯ ವಸ್ತುವನ್ನು ಹಬ್ಬಿಸುವ ಸಲುವಾಗಿ, ನಿಮಗೆ ಇಷ್ಟವಿಲ್ಲದ ನಿರ್ಣಯವನ್ನು ತೆಗೆದುಕೊಳ್ಳ ಬೇಕಾದ ಸಂದರ್ಭ ಒದಗಿದೆಯೇ ?
21
ವ್ಯಾಪಕ ಮಸಲತ್ತು ವ್ಯಾಪಕವಾಗಿ ಹರಡುವ ಪ್ರವೃತ್ತಿಯ ಬಂಡಿಯಲ್ಲಿ ಸಾಗುತ್ತಾ ಎಲ್ಲಾ ಬಗೆಯ ವೇದಿಕೆಗಳನ್ನೂ ಏರ ಬಹುದು, ಜನರು ವಿಷಯಗಳನ್ನು ಹಬ್ಬಿಸಲು ಯಾವ ಹಂತವನ್ನು ಬೇಕಾದರೂ ತಲುಪುತ್ತಾರೆ. ಕೋಪ ಮತ್ತು ಆಕ್ರೋಶದ ಅಲೆಯನ್ನು ಎಬ್ಬಿಸುವ ವಿಷಯಗಳು ವೇಗವಾಗಿ ಹರಡುತ್ತವೆ ಮತ್ತು ಸತ್ಯಕ್ಕಿಂತಲೂ, ಸುಳ್ಳು ವದಂತಿಗಳೇ 9 ವೇಗವಾಗಿ ಪ್ರಸರಿಸುತ್ತವೆ ಎಂಬುದನ್ನು ವಿಷಯ-ವಸ್ತುಗಳನ್ನು ಹುಟ್ಟುಹಾಕುವವರು ಚೆನ್ನಾಗಿ ಅರಿತಿರುತ್ತಾರೆ. ನಮ್ಮ ಆಪ್ ಗಳು ದಿನವೂ ಹಲವಾರು ವದಂತಿಗಳಿಂದ ತುಂಬಿ ಹೋಗಿರುತ್ತವೆ, ಗಾಬರಿ ಮತ್ತು ಆಕ್ರೋಶದ ಅಲೆಯನ್ನೂ ಹಬ್ಬಿಸಿರುತ್ತವೆ (ವೊಸೋಘಿ, ರೋಯ್ ಮತ್ತು ಅರಲ್, 2018). ವೇಗವಾಗಿ ಹರಡುವ ಪ್ರವೃತ್ತಿ ಇದ್ದರೆ ಸಾಕು, ವಿಷಯವು ಸತ್ಯವೋ ಸುಳ್ಳೋ, ಸರಿಯಾಗಿದೆಯೋ, ಉಚಿತವೋ, ಅನುಚಿತವೋ, ಏನೂ ಗಮನಕ್ಕೆ ಬರುವುದೇ ಇಲ್ಲ . ಅಂತರ್ಜಾಲದ ಮೂಲಕ ಹಲವು ತಪ್ಪು ಅಂಕಿ-ಅಂಶಗಳು, ಪರಿಶೀಲಿಸದ ಮಾಹಿತಿ, ಕಟ್ಟುಕತೆಗಳು, ಸಂಯೋಜಿಸಿದ ಪ್ರತಿಕೃತಿಗಳು ಮುಂತಾದವು ಹರಡುತ್ತವೆ, ಚಿತ್ರ-ವಿಚಿತ್ರವಾದ ಸಂಚು ಸಿದ್ದಾಂತಗಳಿಗೆ ಎಣೆ ಮಾಡಿ ಕೊಡುತ್ತವೆ. “ಬ್ಯಾಡ್-ಡೇ.ಎಂ.ಪಿ.ಜಿ” ಎಂಬ ವೀಡಿಯೋ ಬಹುಶಃ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ವ್ಯಾಪಿಸಿದಂತಹ ಸಾಂಕ್ರಾಮಿಕ ವೀಡಿಯೋ ತುಣುಕಿರ ಬೇಕು. ಇಂತಹ ಪರಿಕಲ್ಪನೆಯು ಅಂತರ್ಜಾಲದಲ್ಲಿ ಇನ್ನೂ ಖ್ಯಾತಿ ಪಡೆಯದ ಕಾಲವದು. ಈ ವೀಡಿಯೋದಲ್ಲಿ , ಒಬ್ಬ ವ್ಯಕ್ತಿಯು, ಕಛೇರಿಯ ಕೆಲಸದ ವೇಳೆಯಲ್ಲಿ , ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಲು ಯತ್ನಿಸುತ್ತಿರುವಂತೆಯೂ, ನಿಧಾನ ಗತಿಯ ತಂತ್ರಜ್ ಞಾ ನದಿಂದ ಬೇಸತ್ತು, ಆಕ್ರೋಶಗೊಂಡು, ಕೀಲಿ ಮಣೆಯನ್ನು ಚಚ್ಚಿ , ಮಾನಿಟರ್ ಪರದೆಯನ್ನು ಉರುಳಿಸುವ ದೃಶ್ಯವಿದೆ. ಈ 25 ಕ್ಷ ಣಗಳ ವೀಡಿಯೋ ತುಣುಕು, ಅನೇಕ ಸಂಚು ಸಿದ್ಧಾಂತಗಳನ್ನು ಹುಟ್ಟು ಹಾಕಿದೆ. ಜಾಲತಾಣವಿಕಸನತಂತ್ರಜ್ಞ ʼಬೆನೋಯಿಟ್ ರಿಗಾಟ್ʼಅವರು, ಈ ವೀಡಿಯೋದಲ್ಲಿ ಹಲವು ಅಸಂಬದ್ಧ ಸಂಗತಿಗಳನ್ನು ಪತ್ತೆ ಹಚ್ಚಿದರು. ಅಸಂಗತಗಳನ್ನು ಕೆಂಪು ಬಣ್ಣದಲ್ಲಿ ಗುರುತು ಮಾಡಿ ಅವುಗಳನ್ನು ಸೆರೆ ಹಿಡಿದಿದ್ದಾರೆ. ಇದರಿಂದಾಗಿ, 10 ಇಂದಿಗೂ ಈ ವೀಡಿಯೋ ಪ್ರಚಲಿತವಾಗಿದೆ. (ವೈಕ್ಸ್, 2018). ವ್ಯಾಪನವಾಗಿ ಹರಡಿದ ಈ ವೀಡಿಯೋ ಯಾವ ಹಾನಿಯನ್ನೂ ಮಾಡಿಲ್ಲವಾದರೂ, ಪ್ರಸಕ್ತ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಅನೇಕ ವ್ಯಾಪಕ ಮಸಲತ್ತುಗಳು, ಹಲವು ಬಗೆಯ ಸಾಮಾಜಿಕ ಮತ್ತು ರಾಜಕೀಯ ಒಳತಂತ್ರಗಳನ್ನು ಹೂಡಿ ಜನ ಸಾಮಾನ್ಯರ ಮೇಲೆ ಪ್ರಭಾವವನ್ನು ಬೀರುವ ಸಾಧ್ಯತೆ ಇದೆ. ಕೋವಿಡ್-19: ರೋಗ ವೈರಾಣುವಿನ ಉದಾಹರಣೆಯನ್ನೇ ತೆಗೆದುಕೊಂಡರೆ, ಕಾಣದಿದ್ದರೂ ಹೊಸ ಬಗೆಯ ಪ್ರಭಾವಕರ ಮಾರಣಾಂತಕ ರೋಗಕ್ಕೆ ಕಾರಣವಾಗಿ ಬಿಟ್ಟಿದೆ. ವಿಶ್ವದೆಲ್ಲೆಡೆ, ಏಕಾಏಕಿ, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಒಬ್ಬರಿಂದ ಒಬ್ಬರು ದೂರ ಇರುವಂತೆ ಆಗಿ ಬಿಟ್ಟಿದೆ. ಅನೇಕ ಪಿತೂರಿ ಸಿದ್ದಾಂತಗಳು ನಮ್ಮನ್ನು ಮಾನಸಿಕ ವತ್ತಡಕ್ಕೆ ನೂಕಿವೆ, ಪರಿಸ್ಥಿತಿಯ ಪ್ರಭಾವದಿಂದ ಈ ಊಹಾ ಸಿದ್ಧಾಂತಗಳನ್ನು ನಂಬುವಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವಂತೆಯೂ ಆಗಿದೆ. ಕೋವಿಡ್-19 ರ ಬಗೆಗಿನ ತಪ್ಪು ಮಾಹಿತಿಗಳು, ಯಾವುದೇ ಭೌತಿಕ ಸಂಪರ್ಕವಿಲ್ಲದೆಯೂ ವೈರಾಣುವಿಗಿಂತಲೂ ವೇಗವಾಗಿ ವ್ಯಾಪಕವಾಗಿ ಹಬ್ಬಿವೆ. 22 / ಸೋಂಕು 2021
“ವದಂತಿಗಳು ಮತ್ತು ಪಿತೂರಿ ಸಿದ್ದಾಂತದಂತೆಯೇ, ಅಂತರ್ಜಾಲದ ಮೂಲವನ್ನು ಹುಡುಕುವುದು ಕಷ್ಟ ಸಾಧ್ಯ . ಸತತವಾಗಿ ಹೊಸ ಮಾಹಿತಿಗಳು, ಹಳೆಯ ತತ್ವಗಳ ಹೊಸ ರೂಪಗಳು ಮೂಡುತ್ತಲೇ ಇರುತ್ತವೆ. ನಮ್ಮ ಜೀವನದಲ್ಲಿ , ಡಿಜಿಟಲ್ ತಂತ್ರಾಂಶಗಳು ಹೆಚ್ಚಿದಂತೆಲ್ಲಾ , ಎಲ್ಲ ಬಗೆಯ ವಿಷಯಗಳು, ಅಧ್ಯಕ್ಷರ ಹುಟ್ಟು ಸಾವಿನಿಂದ ಹಿಡಿದು ಭಯೋತ್ಪಾದಕ ದಾಳಿಗಳು, ಲಿಸಿಕೆಗಳು, ಈ ಗ್ರಹದ ಆರೋಗ್ಯ ಮುಂತಾದವುಗಳ ಬಗ್ಗೆ , ಪೂರ್ಣ ಸತ್ಯವೂ ಅಲ್ಲದ ಸುಳ್ಳೂ ಅಲ್ಲದ ಅನೇಕ ವಿಷಯ ಗ್ರಾಸದ ಸುಳಿಯಲ್ಲಿ ಸಿಲುಕಿರುತ್ತೇವೆ. (ಬ್ಯಾಂಕ್ಸ್, 2016)“ 11
- ಕ್ಯಾಥಲೀನ್ ಸ್ಟೇವರ್ಟ್’, ಮಾನವ ಶಾಸ್ತ್ರಗಳ ಪ್ರೊಫೆಸರ್, ಟೆಕ್ಸಾಸ್ ವಿಶ್ವ ವಿದ್ಯಾಲಯ, ಆಸ್ಟಿನ್ 23
ಕೋವಿಡ್ - ಪಿತೂರಿ “ರೋಗ ಪಿಡುಗುಗಳ ಇತಿಹಾಸದಲ್ಲಿ , ಪಿತೂರಿ ಸಿದ್ಧಾಂತಗಳ ಚಾವಟಿ ಬೀಸು ಹೊಸತೇನು ಅಲ್ಲ . 1918 ರಲ್ಲಿ ಅಮೇರಿಕಾವನ್ನು ಆವರಿಸಿದ ಫ್ಲೂ ಜ್ವರಕ್ಕೆ ಮುಖ್ಯ ಕಾರಣವೇ, ಜರ್ಮನ್ ಸಬ್ಮರೀನ್ ಗಳ ಮೂಲಕ ಪಸರಿಸಿದ ವೈರಾಣುಗಳು ಎಂಬ ಸುದ್ಧಿಯು ಎಲ್ಲೆಡೆ ಹಬ್ಬಿತ್ತು .12 ಪಿತೂರಿ ಸಿದ್ಧಾಂತಗಳಂತೆಯೇ, ರೋಗ ಪಿಡುಗುಗಳು ಕೂಡ ನಮ್ಮಲ್ಲಿಯೇ ಅಗೋಚರವಾಗಿ ಅಡಗಿರುವ ಶತ್ರುಗಳು, ಹಾಗೆಯೀ, ಗಾಳಿ ಸುದ್ಧಿಗಳು ಸಹ ರೋಗಗಳಂತೆಯೇ ಸಾಂಕ್ರಾಮಿಕ 13 (ಗಿಲ್ ಹಾಟ್, 2020).” ಕೋವಿಡ್-19 ರ ಬಗೆಗೆ ಹತ್ತು ಹಲವು ಗಾಳಿ ಸುದ್ದಿ , ಸಂಚು-ಸಿದ್ಧಾಂತಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಗಮನಿಸಿರ ಬಹುದು. ಕೋವಿಡ್-19 ರೋಗ ಪಿಡುಗನ್ನು ಸುತ್ತು ವರೆದ ಪ್ರಖ್ಯಾತ ಪಿತೂರಿ ಸಿದ್ಧಾಂತಗಳ ಪಟ್ಟಿಯೇ ಇಲ್ಲಿದೆ. ಇವುಗಳಲ್ಲಿ ಯಾವು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂಬುದನ್ನು ನೀವೇ ದೃಢೀಕರಿಸಿ. ಈ ಸಿದ್ಧಾಂತಗಳ ಬಗೆಗೆ ನೀವು ಏನನ್ನು ಕೇಳಿದ್ದೀರಿ ? ಈ ಸಿದ್ಧಾಂತಗಳು ಖ್ಯಾತಿ ಪಡೆಯಲು ಕಾರಣವೇನು, ಇವುಗಳು ಯಾವ ಭಾವನೆಗಳನ್ನು ಉದ್ದೀಪನ ಗೊಳಿಸುತ್ತವೆ ? ಇವೆಲ್ಲವನ್ನು ಅರಿತುಕೊಳ್ಳಿ.
ಇವುಗಳಲ್ಲಿ ಯಾವುದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂಬುದನ್ನು ನೀವೇ ದೃಢೀಕರಿಸಿ. ಈ ಸಿದ್ಧಾಂತಗಳ ಬಗೆಗೆ ನೀವು ಏನನ್ನು ಕೇಳಿದ್ದೀರಿ ? ಈ ಸಿದ್ಧಾಂತಗಳು ಖ್ಯಾತಿ ಪಡೆಯಲು ಕಾರಣವೇನು , ಇವುಗಳು ಯಾವ ಭಾವನೆಗಳನ್ನು ಉದ್ದೀಪನ ಗೊಳಿಸುತ್ತವೆ ? (ಆನ್ ಲೈನ್ ನಲ್ಲಿದ್ದರೆ ಪೆನ್ ಟೂಲ್ ಬಳಸಿ) ಪಿತೂರಿ ಸಿದ್ಧಾಂತಗಳ ಸೂಚಿ: ಕೋವಿಡ್-19, ಚೀನಾ ದೇಶವು ಹೂಡಿರುವ ಒಂದು ಜೈವಿಕ ಶಸ್ತ್ರ .
16
ಅಸಂಭಾವ್ಯ ಗಳು
ಸಂಭಾವ್ಯ ಗಳು
ಬಿಲ್ ಗೇಟ್ಸ್ ಕೇವಲ ರೋಗ ಪಿಡುಗಿನ ಮುನ್ಸೂಚನೆ ನೀಡುವು ಅಷ್ಟೇ ಅಲ್ಲ , ರೋಗ ವೈರಾಣುವನ್ನೇ ಸೃಜಿಸಿದ್ದರು. ಸಾಂಕ್ರಾಮಿಕ ರೋಗವು ವಿಶ್ವವನ್ನೇ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಬಿಲ್ ಗೇಟ್ಸ್ ತಿಳಿಸುತ್ತಿರುವ ವೀಡಿಯೋ ಒಂದು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಲಿತವಾಗಿದೆ, ಅಷ್ಟೇ ಅಲ್ಲದೇ ತಾವೇ 17 ಹೊಸ ರೀತಿಯ ಕರೋನ ವೈರಾಣುವನ್ನು ಸೃಜಿಸಿರ ಬಹುದು ಎಂಬ ಭ್ರಮೆಯನ್ನೂ ಮೂಡಿಸುತ್ತದೆ. ಅಸಂಭಾವ್ಯ ಗಳು
ಸಂಭಾವ್ಯ ಗಳು
ಕೋವಿಡ್-19, ರಿಂದ ಸಂಭವಿಸಿದ ಸಾವುಗಳನ್ನು ಹೆಚ್ಚಾಗಿ ತೋರಿಸಲಾಗಿತ್ತು, ಅಷ್ಟೊಂದು ಸಾವುಗಳು 18 ಸಂಭವಿಸಿಲ್ಲ . ಅಸಂಭಾವ್ಯ ಗಳು
ಪಿತೂರಿ ತಂತ್ರಗಳು ಹೇಗೆ ಕೆಲಸ ಮಾಡುತ್ತವೆ ಎಂದು ಪಿತೂರಿ ಕೈಪಿಡಿಯು ವಿವರಿಸುತ್ತದೆ. ಈ ಪುಸ್ತಕವನ್ನು ಓದುವುದರಿಂದ ಮೇಲಿನ ಪ್ರಶ್ನೆಗಳಿಗೆ ನೀವು ನೀಡಿರುವ ಉತ್ತರಗಳು ಬದಲಾಗುವುದೇ ಎಂದು ಪರೀಕ್ಷ ಸಿ. 14
ಈಗ ನಿಮ್ಮದೇ ಸುಳ್ಳು ಕಥನವನ್ನು (ಗಾಳಿ ಮಾತು) ಸೃಜಿಸುವ ಸಮಯ. ಕೋವಿಡ್ – 19 ಪತ್ತೆ ಹಚ್ಚುವ ಸಂಚು ಕೈಪಿಡಿ15 ಯ ಟೆಂಪ್ಲೇಟ್(ಮೇಲೆ ಕೇಳಿರುವ ಪ್ರಶ್ನಾವಳಿ) ಬಳಸಿಕೊಂಡು, ಪ್ರಸಕ್ತ ನಿಮ್ಮ ಸುತ್ತ ಮುತ್ತಲಿನ ಪರಿಸರಕ್ಕೆ ಹೊಂದುವಂತಹ ಕಥೆಯೊಂದನ್ನು ಕಟ್ಟಿ ಸುತ್ತಲಿನ ಜನರೊಂದಿಗೆ ಹಂಚಿಕೊಳ್ಳಿ. ಅವರ ಪ್ರತಿಕ್ರಿಯೆಗಳ ವಿವರಣೆಯನ್ನು ಬರೆದುಕೊಳ್ಳಿ. 24 / ಸೋಂಕು 2021
ಸಾಮಾನ್ಯ ನೆಗಡಿಯಂತೆಯೇ ಕರೋನಾ ವೈರಾಣುವು ಅತಿ ಭಯಾನಕವೇನಲ್ಲ . ಅಸಂಭಾವ್ಯ ಗಳು
ಸಂಭಾವ್ಯ ಗಳು
19
ಸಂಭಾವ್ಯ ಗಳು
5 ಜಿ ಮೊಬೈಲ್ ಫೋನ್ ನ ಸಂವಾಹಕ ಅಲೆಗಳ ಪರಿಣಾಮವಾಗಿ ವೈರಾಣುವು ಪಸರಿಸಿದೆ. ಅಸಂಭಾವ್ಯ ಗಳು
20
ಸಂಭಾವ್ಯ ಗಳು
25
ಮುಸುಕನ್ನು ತೆರೆಯಿರಿ. ಕೋವಿಡ್-19 ನ್ನು ಸುತ್ತು ವರೆದಿರುವ ಹಲವು ಗಾಳಿ ಸುದ್ಧಿಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಅಥವಾ ಮುಖ ಗೌಸು ಧರಿಸುವುದು ಪ್ರಯೋಜನವಿಲ್ಲ ಎಂಬುದು ಪ್ರಮುಖವಾದುದು. (ಖಜಾನ 2020). ಮುಖ ಗೌಸಿನಿಂದ ನಾವು ಇನ್ನಷ್ಟು ಶಕ್ತಿ ಹೀನರಾಗುತ್ತೇವೆ, ಮುಸುಕನ್ನು ಧರಿಸುವುದು ನಮ್ಮ ದುರ್ಬಲತೆಯನ್ನು 21 ತೋರಿಸುತ್ತದೆ ಎಂದೆಲ್ಲಾ ವದಂತಿಗಳು ಹಬ್ಬಿದವು. ರೋಗ ಪಿಡುಗು ಹರಡಿದಂತೆಲ್ಲಾ , ಮುಖ ಗೌಸಿನ ವಿರುದ್ಧವೂ ಚರ್ಚೆಗಳು ನೆಡೆದವು. ಪ್ರಸಕ್ತ , ಮುಖ ಗೌಸನ್ನು ಧರಿಸಿ ಬಾಯಿ ಮತ್ತು ಮೂಗನ್ನು ಸರಿಯಾಗಿ ಮುಚ್ಚುವುದರಿಂದ ಕೋವಿಡ್-19 ರೋಗರಿಂದ ಬಹಳಷ್ಟು ರಕ್ಷ ಣೆ ಪಡೆಯ ಬಹುದು ಎಂದು ಖಡಾಖಂಡಿತವಾಗಿ ತಿಳಿದು ಬಂದಿದೆ. ಡ್ಯೂಕ್ ವಿಶ್ವವಿದ್ಯಾಲಯ ದ ವಿಜ್ ಞಾ ನಿಗಳು, ಜನರು ಮುಖ ಗೌಸನ್ನು ಧರಿಸಿ ಮಾತಾಡುವಾಗ ಬಾಯಿಯಿಂದ ಹೊರ ಹೊಮ್ಮುವ ಎಂಜಲ ಕಣಗಳ ಮೇಲೆ ಆಪ್ಟಿಕಲ್ ಲೇಸರ್ ಬಳಸಿಕೊಂಡು ಬೆಳಕನ್ನು ಚೆಲ್ಲಿ ಪ್ರಯೋಗ ನೆಡೆಸಿದ್ದಾರೆ. ಇದರಿಂದ ವಿವಿಧ ಬಗೆಯ ಮುಖ ಗೌಸುಗಳು ಎಷ್ಟು ಪ್ರಭಾವಕಾರಿಯಾಗಿವೆ ಎಂದು ತಿಳಿದು ಬಂದಿದೆ. (ಡ್ಯೂಕ್ ಹೆಲ್ಥ್ ನ್ಯೂಸ್, 2020). ಮುಖ ಗೌಸುಗಳನ್ನು ತಯಾರಿಸಲು ಬಳಸ ಬಹುದಾದ 14 ವಿವಿಧ ಬಗೆಯ ವಸ್ತ್ರ ಸಾಮಗ್ರಿಗಳನ್ನು ಪರೀಕ್ಷಿ ಸಿದ್ದು , ಇವುಗಳಲ್ಲಿ ಎನ್95 ಮಾಸ್ಕ್ ಅತಿ ಪ್ರಭಾವಕಾರಿ ಎಂಬ 22 ನಿರ್ಣಯಕ್ಕೆ ಬಂದಿದ್ದಾರೆ. ನೀವು, ಆ ವಿಜ್ ಞಾ ನಿಗಳು ನೆಡೆಸಿದ ಪ್ರಯೋಗವನ್ನು ಇಲ್ಲಿ ವೀಕ್ಷಿ ಸ ಬಹುದು. “ಮನೆಯಲ್ಲಿಯೇ ಪ್ರಭಾವಕಾರಿಯಾದ ಮುಖ ಗೌಸುಗಳನ್ನು ಹೇಗೆ ತಯಾರಿಸುವುದು” ಎಂಬುದನ್ನು ಇಲ್ಲಿ ವೀಕ್ಷಿ ಸ ಬಹುದು.
26 / ಸೋಂಕು 2021
23
ಪೆಕ್ಸಿಲ್ಸ್ ಮೇಲೆ ಮುಖ ಗೌಸಿನ ಬಿಳಿಯ ಕಾಂಕ್ರೀಟ್ ಶಿಲ್ಪಕಲೆಯ ಛಾಯಾಚಿತ್ರಣ
27
ಚಟುವಟಿಕೆ ನಿಮ್ಮ ಮುಖ ಗೌಸು (ಮಾಸ್ಕ್) ಎಷ್ಟು ಪ್ರಭಾವಕಾರಿ ಎಂದು ಅರಿಯಿರಿ !
ಬೇಕಾದ ಸಾಮಗ್ರಿ 2 ಪೆಟ್ರಿ ಡಿಶ್(ಮುಚ್ಚಳವಿರುವ ಸಣ್ಣ ಪಿಂಗಾಣಿ ಅಥವಾ ಪ್ಲಾಸ್ಟಿಕ್ ತಟ್ಟೆಗಳು / ಡಬ್ಬಿಗಳು ) ಅಗರ್ ದ್ರಾವಣ (ಬೇಕಿಂಗ್ ಗೆ ಸಂಬಂಧಿಸಿದ / ಕಿರಾಣಿ ಅಂಗಡಿಯಲ್ಲಿ ದೊರಕುತ್ತದೆ) ಪೌಷ್ಟಿಕತೆ ಒದಗಿಸುವ ದ್ರವ ಮಾಧ್ಯಮ ನೀವು ಪರೀಕ್ಷಿ ಸಲು ಇಷ್ಟ ಪಡುವ ಮುಸುಕು / ಗೌಸು ಒಂದು ಜೊತೆ ಕೈಗೌಸುಗಳು ಉಜ್ಜಿ ಸ್ವಚ್ಛಗೊಳಿಸಲು ಆಲ್ಕೋಹಾಲ್ ದ್ರವ ಇಕ್ಕಳ / ಟಾಂಗ್ 10% ಬ್ಲೀಚ್ ದ್ರಾವಣ ಸಾಬೂನು 2 ನವಿರಾದ ನೂಲಿನ ಬಟ್ಟೆಯ ತುಂಡುಗಳು
ಹೀಗೆ ಮಾಡಿ ಅ. ಪೆಟ್ರಿ ಡಿಶ್/ ತಳ್ಟೆಗಳು / ಡಬ್ಬಿಗಳನ್ನು ಹೀಗೆ ಸಿದ್ಧ ಪಡಿಸಿ • ಬಟ್ಟೆಯಲ್ಲಿ ಆಲ್ಕೋಹಾಲ್ ದ್ರವದಲ್ಲಿ ಅದ್ದಿಕೊಂಡು, ತಟ್ಟೆ ಅಥವಾ ಡಬ್ಬಿಯನ್ನು ಶುಭ್ರಗೊಳಿಸಿ. ಅದಾದ ನಂತರ ಆ ತಟ್ಟೆ / ಡಬ್ಬಿಯನ್ನು ಯಾರೂ ಮುಟ್ಟ ಬಾರದು. • ಅರ್ಧ ಬಟ್ಟಲು ಬ್ಲೀಚ್ ಪುಡಿಯನ್ನು 4.5 ಬಟ್ಟಲು ಬಿಸಿ ನೀರಿನಲ್ಲಿ ಬೆರೆಸಿ ದ್ರಾವಣವನ್ನು ತಯಾರಿಸಿಕೊಳ್ಳಿ. ಇಲ್ಲವೇ 9:1 ನೀರು ಮತ್ತು ಬ್ಲೀಚ್ ಪುಡಿಯ ಪ್ರಮಾಣವನ್ನು ಸಹ ಬಳಸ ಬಹುದು. • ಆಲ್ಕೋಹಾಲ್ ದ್ರವದಲ್ಲಿ ಬಟ್ಟೆಯನ್ನು ಅದ್ದಿ ಹಿಂಡಿ, ಅದರಿಂದ ಇಕ್ಕಳ (ಟಾಂಗ್) ಅನ್ನೂ ಸಹ ಸ್ವಚ್ಛಗೊಳಿಸಿಇಟ್ಟುಕೊಳ್ಳಿ. • ನೀವು ತೆಗೆದುಕೊಂಡಿರುವ ತಟ್ಟೆಗಳು ಅಥವಾ ಡಬ್ಬಿಗಳನ್ನು ಬಿಸಿ ನೀರು ಮತ್ತು ಸಾಬೂನಿನಲ್ಲಿ ಚಿನ್ನಾಗಿತೊಳೆಯಿರಿ. • ಒಂದು ತಟ್ಟೆ / ಡಬ್ಬಿಯನ್ನು ಬಹಳ ಜಾಗರೂಕತೆಯಿಂದ ಇಕ್ಕಳದಲ್ಲಿ ಹಿಡಿದು ಬ್ಲೀಚ್ ಮತ್ತು ನೀರಿನ ದ್ರಾವಣದಲ್ಲಿ 2 ನಿಮಿಷದ ವರೆಗೂ ನೆನೆಸಿಡಿ. • ನಂತರ, ಇಕ್ಕಳದಲ್ಲಿ ತಟ್ಟೆ / ಡಬ್ಬಿಯನ್ನು ಹೊರ ತೆಗೆದು ಆಲ್ಕೋಹಾಲ್ ದ್ರಾವಣದಲ್ಲಿ ಅದ್ದಿ ತಕ್ಷ ಣವೇ ಹೊರ ತೆಗೆಯಿರಿ. • ಸ್ವಚ್ಛಗೊಳಿಸಿರುವ ಸ್ಥಳದಲ್ಲಿ ಇಡಿ. ಇನ್ನೊಂದು ತಟ್ಟೆ / ಡಬ್ಬಿಯನ್ನು ಇದೇ ರೀತಿ ಸ್ವಚ್ಛಗಲೊಳಿಸಿ. • ಈ ರೀತಿ ಸ್ಟೆರಲೈಸ್ ಮಾಡಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ . ಪ್ರಯೋಗದಲ್ಲಿ ಬಳಸಲಾಗುವ ಸೂಕ್ಷ್ಮಾಣುಗಳ (ಮುಖ್ಯವಾಗಿ ಬ್ಯಾಕ್ಟೀರಿಯಾಗಳ ) ಬೆಳವಣಿಗೆಗೆ ಅನುಕೂಲಕರ!
ಬಿಸಿ ನೀರು ಗುರುತು ಮಾಡಲು ಮಾರ್ಕರ್
28 / ಸೋಂಕು 2021
29
ಆ. ಪೌಷ್ಟಿಕತೆ ಒದಗಿಸುವ ಅಗರ್ ದ್ರವ ಮಾಧ್ಯಮವನ್ನು ತಯಾರಿಸಿ :
ಈ. ವಿಶ್ಲೇಷಣೆ
• 6.9 ಗ್ರಾಂ ಅಗರ್ ಪುಡಿಯನ್ನು ತೂಗಿ ತೆಗೆದಿಟ್ಟುಕೊಳ್ಳಿ.
• ಎರಡೂ ತಟ್ಟೆಗಳು / ಡಬ್ಬಿಗಳನ್ನು ಸೂಕ್ಷ ್ಮವಾಗಿ ಗಮನಿಸಿ. ʼನಮೂನೆ 1 : ಮುಸುಕು ಗೌಸು ಇಲ್ಲದ” ಮತ್ತು ʼನಮೂನೆ 2: ಮುಸುಕು / ಮುಖ ಗೌಸು ಹಾಕಿಕೊಂಡು ಕೆಮ್ಮಿದ / ಸೀನಿದ ತಟ್ಟೆಗಳು / ಡಬ್ಬಿಗಳ ನಡುವೆ ಏನು ವ್ಯತ್ಯಾಸ / ಅಂತರ ಕಾಣುತ್ತಿದೆ ? ಎಷ್ಟು ಬ್ಯಾಕ್ಟೀರಿಯಾ ಗುಂಪುಗಳನ್ನು ನಿಮಗೆ ಗೋಚರಿಸುತ್ತಿವೆ ?
• ಅರ್ಧ ಲೀಟರ್ ನೀರಿನೊಂದಿಗೆ ಅಗರ್ ಪುಡಿಯನ್ನು ಬೆರೆಸಿಕೊಳ್ಳಿ. • ಈ ದ್ರಾವಣವನ್ನು ಬಿಸಿ ಮಾಡಿ. ಅಗರ್ ಪುಡಿಯು ಸಂಪೂರ್ಣವಾಗಿ ಕರಗ ಬೇಕು. • ಸಂಪೂರ್ಣವಾಗಿ ಸ್ವಚ್ಛಗೊಳಿಸಿರುವ ತಟ್ಟೆಗಳು / ಡಬ್ಬಿಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳಿ. ಕೈಗೌಸುಗಳನ್ನು ಖಂಡಿತವಾಗಿಯೂ ಧರಿಸಿರಿ. !
• ಇದೇ ಪ್ರಯೋಗವನ್ನು ಬೇರೆ ಬೇರೆ ಮುಖ ಗೌಸುಗಳನ್ನು ಬಳಸಿಕೊಂಡು ಪುನಃ ಪ್ರಯತ್ನಿಸಿ ನೋಡ ಬಹುದು. ಮಾತಾಡಿದಾಗ, ಕೆಮ್ಮಿದಾಗ ಮತ್ತು ಸೀನಿದಾಗಲೆಲ್ಲಾ ಎಷ್ಟು ಬ್ಯಾಕ್ತೀರಿಯಾ ಬೆಳೆಯುತ್ತವೆ ಎಂದು ಅರಿಯಬಹುದು.
• ಅಗರ್ ದ್ರಾವಣವನ್ನು ಒಂದು ತಟ್ಟೆ / ಡಬ್ಬಿಗೆ ಅರ್ಧದಷ್ಟು ಸುರಿಯಿರಿ. ತಕ್ಷ ಣವೇ ಮುಚ್ಚಳದಿಂದ ಮುಚ್ಚಿಡಿ. ಹೀಗೆ ಇನ್ನೊಂದು ತಟ್ಟೆ / ಡಬ್ಬಿಗೂ ಉಳಿದ ಅಗರ್ ದ್ರಾವಣವನ್ನು ಸುರಿದು ಮುಚ್ಚಳ ಮುಚ್ಚಿಡಿ. • ಅಗರ್ ದ್ರಾವಣವು ಸಂಪೂರ್ಣವಾಗಿ ನಿಂತು ಘನ ರೂಪಕ್ಕೆ ಬರಲು ಕೆಲವು ಗಂಟೆಗಳೇ ಬೇಕಾಗುತ್ತದೆ. ಕೈ ಗೌಸುಗಳನ್ನು ಧರಿಸಿ ದ್ರವವು ಘನೀಕರಿಸಿದೆಯೇ ಎಂದು ದೃಢ ಪಡಿಸಿಕೊಳ್ಳಿ. • ಈ ತಟ್ಟೆಗಳು / ಡಬ್ಬಿಗಳಲ್ಲಿ ಅಗರ್ ದ್ರಾವಣವು ಪೂರ್ತಿಯಾಗಿ ತಣ್ಣಗಾಗಿ ಘನ ರೂಪಕ್ಕೆ ಬಂದಿದ್ದರೆ, ಪ್ರಯೋಗ ಪ್ರಾರಂಭಿಸ ಬಹುದು !
ಸ್ಥಿತಿ ( ಮಾಸ್ಕ್ ಮುಖ ಗೌಸು ರಹಿತ / ಮಾಸ್ಕ್ ಮುಖ ಗೌಸು ಸಹಿತ)
ಮುಖ ಗೌಸು ಇದ್ದರೆ, ಅದು ಯಾವ ವಸ್ತುವಿನಿಂದ ಮಾಡಲಾಗಿದೆ ಎಂದು ವ್ಯಕ್ತ ಪಡಿಸಿ
ರೂಪ
ವಾಸನೆ
ಬ್ಯಾಕ್ಟೀರಿಯಾ ಕಾಲೋನಿಗಳ ಸಂಖ್ಯೆ
ಇ. ಪರೀಕ್ಷಿ ಸುವ ಸಮಯ. • ಕೈ ಗೌಸುಗಳನ್ನು ಧರಿಸಿ, ಮುಖದಿಂದ ದೂರ ಇಟ್ಟುಕೊಂಡು, ನಿಧಾನವಾಗಿ ಅಗರ್ ತಟ್ಟೆ / ಡಬ್ಬಿಯನ್ನು ತೆಗೆಯಿರಿ. ಎರಡು ಬಾರಿ ಈ ಅಗರ್ ಮೇಲೆ ಕೆಮ್ಮಿ ಅಥವಾ ಮೆಣಸಿನ ಘಮ ತೆಗೆದುಕೊಂಡು ಸೀನಲೂ ಬಹುದು. • ಈಗ ತಟ್ಟೆ / ಡಬ್ಬಿಯನ್ನು ಮಚ್ಚಳದಿಂದ ಮುಚ್ಚಿಡಿ. ʼನಮೂನೆ 1 : ಮುಸುಕು ಗೌಸು ಇಲ್ಲ” ಎಂದು ನಮೂದಿಸಿ. • ಮುಖ ಗೌಸನ್ನು ಧರಿಸಿ, ಎರಡನೇ ತಟ್ಟೆ / ಡಬ್ಬಿಯೊಳಗೆ ಎರಡು ಬಾರಿ ಕೆಮ್ಮಿ (ಇಲ್ಲವೇ ಸೀನಿ) ತಟ್ಟೆ / ಡಬ್ಬಿಯನ್ನು ಮಚ್ಚಳದಿಂದ ಮುಚ್ಚಿಡಿ. ʼನಮೂನೆ 2: ಮುಸುಕು / ಮುಖ ಗೌಸು ಹಾಕಿಕೊಂಡು” ಎಂದು ನಮೂದಿಸಿ. • ಸುಮಾರು 10 ದಿನಗಳ ವರೆಗೂ ಈ ತಟ್ಟೆಗಳು / ಡಬ್ಬಿಗಳನ್ನು ಒಂದೇ ಕಡೆ ಬೆಚ್ಚ ಗಿರುವ ಜಾಗದಲ್ಲಿ ಅಲುಗಾಡಿಸದೇ / ಮುಟ್ಟದೇ ಇಟ್ಟು ಬಿಡಿ. ಇದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ಚೆನ್ನಾಗಿ ಆಗುವುದು.
30 / ಸೋಂಕು 2021
31
ನನ್ನನ್ನು ಕಾಡುತ್ತಿರುವ ನೆಗಡಿ ಸೀನು ನಾವು ಮಾತಾಡಿದಾಗ, ಸೀನಿದಾಗ , ಕೆಮ್ಮಿದಾಗ, ಸ್ರವಿಸುವ ಕಣಗಳೊಂದಿಗೆ ವೈರಾಣುಗಳು ಪ್ರಸರಿಸುತ್ತವೆ. ಮುಖ ಗೌಸು / ಮುಸುಕುಗಳಿಂದ ಬಾಯಿ ಮತ್ತು ಮೂಗನ್ನು ಮುಚ್ಚುವುದರಿಂದ ಈ ವೈರಾಣುಗಳನ್ನು ಬಹಳ ಮಟ್ಟಿಗೆ ತಡೆಯ ಬಹುದು. ಮುಸುಕುಗಳು ಗೌಸುಗಳು ಇಲ್ಲದೇ ಇದ್ದರೆ ಈ ಕಣಗಳು ಎಷ್ಟು ದೂರ ಪ್ರವಹಿಸ ಬಹುದು ಎಂದು ಅರಿಯುವುದರಿಂದ, ನಾವು, ಒಬ್ಬರಿಂದ ಒಬ್ಬರು ಎಷ್ಟು ದೂರ ಇದ್ದರೆ ಒಳಿತು ಎಂದು ತಿಳಿದು ಕೊಳ್ಳ ಬಹುದು. ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಎಂ.ಐ.ಟಿ ಸಂಸ್ಥೆಯಲ್ಲಿ ʼಲಿಡಿಯಾ ಬೌರೌಬಾʼ ಮತ್ತು ತಂಡದವರು ನೆಡೆಸಿದ ಸಂಶೋಧನೆಯಲ್ಲಿ , ಮಾನವರು ಸೀನಿದಾಗ ಸ್ರವಿತವಾಗುವ ಕಣಗಳು ಹರಡುವ ಕ್ರಿಯೆಯನ್ನು , ಅತಿ-ವೇಗ ಕ್ಯಾಮರಾಗಳ ಮೂಲಕ ದಾಖಲಿಸಿದ್ದಾರೆ. ಬಣ್ಣ ಎರಚಿದಾಗ ಹೇಗೆ ಬಣ್ಣದ ಕಣಗಳು ಗಾಳಿಯಲ್ಲಿ ಹೊಮ್ಮುತ್ತವೋ, ಅದರಂತೆಯೇ, ಸೀನಿದಾಗ ಇಲ್ಲವೇ ಕೆಮ್ಮಿದಾಗ, ಹೊರ ಬರುವ ಕಣಗಳು ಸಹ ಗಾಳಿಯಲ್ಲಿ ಏಕಾಏಕಿ ಬಹಳ ದೂರಕ್ಕೆ ಎಗರಿ ಪ್ರಸರಿಸುತ್ತವೆ.24 (ಚು. 2016).. ಸೀನು ಕೆಮ್ಮಿನ ದ್ರಾವಣವು, ಹಾಳೆಯಂತೆ ಹೊರಗೆ ಬಂದು ಬಲೂನಿನಂತೆ ಉಬ್ಬಿಕೊಳ್ಳುತ್ತದೆ, ನಂತರ ಸಣ್ಣ ಕಣಗಳಾಗಿ ಹೊರ ಚೆಲ್ಲಿ ಚಲ್ಲಾ ಪಿಲ್ಲಿಯಾಗಿ ಹರಡುತ್ತವೆ. ಸೀನಿದಾಗ ಅಥವಾ ಕೆಮ್ಮಿದಾಗ, ಸಣ್ಣ ಕಣಗಳು ಮೋಡದಂತೆ ಕವಿದು ಬಿಡುತ್ತವೆ. ಸೀನಿನ ಕಣಗಳು 8 ಮೀಟರ್ ಗಳ ವರೆಗೂ ಮತ್ತು ಕೆಮ್ಮಿನ ಕಣಗಳು 6 ಮೀಟರ್ ವರೆಗೂ ಚಲಿಸಿ ಹರಡ ಬಹುದು. 2014 ರಲ್ಲಿ ಪ್ರಾರಂಭವಾದ ಈ ಅಧ್ಯಯನವು ಕೋವಿಡ್-19 ರ ಈ ಪಿಡುಗಿನ ಕಾಲದಲ್ಲಿ ಮಹತ್ವ ಕಂಡಿದೆ.
32 / ಸೋಂಕು 2021
ಸೀನಿದಾಗ ಕರವಸ್ತ್ರವು ಹಾರಿರುವ ಪ್ರಸಂಗದ ಬಣ್ಣದ ಚಿತ್ರಣ, 1946 ನೇ ಇಸವಿಯಲ್ಲಿ ಮೂಡಿಸಿರುವ ಚಿತ್ರ. ವೆಲ್ಲ್ ಕಮ್ ಸಂಗ್ರಹಣೆ
33
ಚಟುವಟಿಕೆ
• ನೀವು ನಿಂತಿರುವ ಸ್ಥಳವನ್ನು ಗುರುತಿಸಿಕೊಳ್ಳಿ. ನಂತರ, ಈ ಸ್ಥಳದಿಂದ ರೋಗಾಣುಗಳು ಎಷ್ಟು ದೂರಕ್ಕೆ ಹರಡುತ್ತವೆ ಎಂದು ಅಳೆಯಬಹುದು.
ಕೆಮ್ಮು ಸೀನುಗಳ ಮೂಲಕ ಹೊರ ಬರುವ ಕಣಗಳ ಸಮೂಹವನ್ನು ಕಾಣಲು , ನಮ್ಮಲ್ಲಿ , ಅತಿ – ವೇಗ ಕ್ಯಾಮರಾಗಳು ಲಭ್ಯವಿಲ್ಲವಾದರೂ, ಅನ್ಯ ವಿಧದಲ್ಲೂ ಈ ಪ್ರಕ್ರಿಯೆಗಳನ್ನು ಅರಿಯ ಬಹುದಾಗಿದೆ.
• ಈಗ ಬಲೂನ್ ಅನ್ನು ಊದಿ . ಸಾಕಷ್ಟು ದೊಡ್ಡದಾಗಿ ಊದಿದಿ ಮೇಲೆ, ಅದನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಿ.
ಬೇಕಾದ ಸಾಮಗ್ರಿ ಒಂದು ಬಲೂನು ಕಾಗದದ ಹಲವು ಗೋಳಾಕಾರದ ತುಣುಕುಗಳು. ವ್ಯಾಸ ಸುಮಾರು 0.5 ಸಿ. ಎಂ ಇರುವ ಕನಿಷ್ಟ 30 ಚೂರುಗಳು. (ಸಿಂಗಲ್ ಹೋಲ್ ಪಂಚ್ ಮೂಲಕ ಕಾಗದವನ್ನು ಮಡಿಕೆ ಮಾಡಿ ಪಂಚ್ ಮಾಡಿಕೊಳ್ಳ ಬಹುದು) ಒಂದು ಕೊಳವೆ ಫನೆಲ್ ಅಥವ ಒಂದು ಕಾಗದದಿಂದ ಕೊಳವೆ ಫನೆಲ್ಯ ಆಕಾರದಲ್ಲಿ ಮಾಡಿಕೊಳ್ಳಿ.
• ಬಲೂನ್ ನಿನ ತೆರೆದ ತುದಿಯನ್ನು ನೆಲ ಮುಖ ಮಾಡಿ ಹಿಡಿಯಿರಿ. ಕಾಗದದ ಚೂರುಗಳು, ಸೂಕ್ಷ ್ಮಜೀವಿಗಳನ್ನು ಪ್ರತಿಬಿಂಬಿಸುತ್ತವೆ. ಅವು ತೆರೆದ ತುದಿಯ ಕಡೆಗೆ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. • ನಿದಾನವಾಗಿ ಬಲೂನ್ ಅನ್ನು ಅಡ್ಡಲಾಗಿ ಓರೆಯಾಗಿಸಿ, ಕಾಗದದ ಚೂರುಗಳು ತೆರೆದ ತುದಿಯ ಕಡೆ ಇರುವಂತೆ ನೋಡಿಕೊಳ್ಳಿ • ಈಗ ಬಲೂನ್ ನಿಂದ ನಿಮ್ಮ ಹಿಡಿತವನ್ನು ಸಡಿಲಗೊಳಿಸಿ ಇಲ್ಲವೇ ಬಲೂನನ್ನು ಸ್ಫೋಟಿಸಿ, ಸೂಕ್ಷ ್ಮ ಜೀವಿಗಳನ್ನು ಹೋಲುವ ಕಾಗದದ ಚೂರುಗಳು, ಚದುರುವುದನ್ನು ಗಮನಿಸಬಹುದು. • ಕಾಗದ ಚೂರುಗಳು ಸಂಪೂರ್ಣವಾಗಿ ಹರಡಿದ ಮೇಲೆ, ಅವು ಎಷ್ಟು ದೂರಕ್ಕೆ ಹರಡಿವೆ ಎಂದು ಅಳೆಯ ಬಹುದು. ಪ್ರಯೋಗ ಸಂಖ್ಯೆ
ಗರಿಷ್ಠ ಎಷ್ಟು ದೂರದ ವರೆಗೂ ಹರಡಿದೆ
ಹೀಗೆ ಮಾಡಿ • ಕಾಗದದ ಚೂರುಗಳನ್ನು ಒಂದುಕಡೆ ಸಂಗ್ರಹಿಸಿಟ್ಟಿಕೊಳ್ಳಿ. ಇವು ಸೂಕ್ಷಾಣುಗಳಂತೆ ಎಂದು ಭಾವಿಸಿ. ಇವು ಹೇಗೆ ಹರಡುತ್ತವೆ ಎಂಬುದನ್ನು ನೋಡೋಣ. • ನಿಮ್ಮ ಹತ್ತಿರ ಕೊಳವೆ ಇಲ್ಲದಿದ್ದರೆ, A4 ಹಾಳೆಯನ್ನು ತೆಗೆದುಕೊಂಡು ಕೊಳವೆಯ ಆಕಾರದಲ್ಲಿ ಮಾಡಿಕೊಳ್ಳಿ. • ಕೊಳವೆಯ ಕಿರಿದಾದ ತುದಿಯನ್ನು ಬಲೂನ್ ನಿನ ಒಳಕ್ಕೆ ಇಟ್ಟು ನಿಧಾನವಾಗಿ ಸಣ್ಣ ಕಾಗದದ ಚೂರುಗಳನ್ನು ಕೊಳವೆಯ ಮೂಲಕ ಬಲೂನಿನ ಒಳಗೆ ಹಾಕಿ.
34 / ಸೋಂಕು 2021
ಸರಾಸರಿ
35
ಫ್ಲೂರೋ ಸೆಂಸ್ಗುರುತನ್ನು ಪತ್ತೆ ಮಾಡಿ ಕೋವಿಡ್-19 ರೋಗದಿಂದ ಸೋಂಕಿತ ವ್ಯಕ್ತಿಯ ಜೊತೆ ಪ್ರತ್ಯಕ್ಷ ಸಂಪರ್ಕದಲ್ಲಿ ಇರುವವರಿಗೆ, ಗಾಳಿಯಿಂದ ರೋಗವು ಹರಡುತ್ತದೆ. ರೋಗಾಣುಗಳಿಂದ ಸೋಂಕಿತ ವಸ್ತುಗಳಿಂದಲೂ ಕೆಲವೊಮ್ಮೆ ರೋಗ ಸೋಂಕು ಹರಡುವ ಸಾಧ್ಯತೆ ಇದೆ. ರೋಗಿಗಳೊಂದಿಗೆ ಸದಾಕಾಲ ಕಾರ್ಯ ನಿರ್ವಹಿಸುವ ವೈದ್ಯಕೀಯ ವೃಂದಕ್ಕೆಮತ್ತು ಸ್ವಾಸ್ಥ್ಯ ಕೆಲಸಗಾರರಿಗೆ, ರೋಗದ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪಿ.ಪಿ.ಈ ಕಿಟ್ ಗಳು ಎಷ್ಟು
ರಕ್ಷ ಣೆ ನೀಡಲು ಸಾಧ್ಯ ಎಂದು ಅರಿಯಲು ಸಂಶೋಧಕರು, ಫ್ಲೂರೋಸೆಂಟ್ ನೀರನ್ನು ಬಳಸಿ ವಿಷ್ಲೇಷಣೆ ನೆಡೆಸಿದರು. ಈ ಲೇಪನ , ಕೇವಲ ಅತಿ ನೇರಳೆ ಬೆಳಕಿನಲ್ಲಿ ಸೋಂಕಿನ ರುವಾರಿಯಾಗಿ ಗೋಚರಿಸುತ್ತದೆ. ಸ್ವಾಸ್ಥ್ಯ ಕೆಲಸಗಾರರು, ಈ ಫ್ಲೂರೋಸೆಂಟ್ ದ್ರವದಲ್ಲಿ ಅದ್ದಿದ ʼಪಿ.ಪಿ.ಈʼ ಕಿಟ್ ಗಳನ್ನು ಧರಿಸಿದರು. ನಂತರ ರೋಗಿಗಳ ಆರೈಕೆ ಕಾರ್ಯದಲ್ಲಿ ತೊಡಗಿದರು. ತಮ್ಮ ಸುರಕ್ಷಾ ಉಡುಪುಗಳನ್ನು ತೆಗೆದು ಅತಿನೇರಳೆ ಬೆಳಕಿನ ಅಡಿಯಲ್ಲಿ ಸ್ವತಃ ತಮ್ಮನ್ನು ಗಮನಿಸಿದಾಗ, ತಮ್ಮ ದೇಹದ ಯಾವ ಭಾಗಗಳು ಹೆಚ್ಚಾಗಿ ಫ್ಲೂರೋಸೆಂಸ್ ಸಂಪರ್ಕಕ್ಕೆ 25 ಬಂದಿವೆ ಎಂಬುದು ತಿಳಿದು ಬಂತು. (ಹಗ್ಸ್, ಹಗ್ಸ್, ಮತ್ತು ಅಹಮದ್, 2020) . ವೈರಾಣುವು ಹೇಗೆ ಸಂಚಲಿಸುತ್ತದೆ ಎಂಬುದು ಕಣ್ಣಿಗೆ ಗೋಚರಿಸದೇ ಇದ್ದರೂ ಈ ಸರಳ ಪದ್ಧತಿಯ ಮೂಲಕ ವೈರಾಣುಗಳು ಹರಡುವ ಬಗೆಯನ್ನು , ಸುಲಭದಲ್ಲಿ ಪತ್ತೆ ಮಾಡ ಬಹುದು. ಜಪಾನಿನಲ್ಲಿ , ರೆಸ್ಟಾರೆಂಟ್ ಒಂದರಲ್ಲಿ ಇಂತಹುದೇ ಪ್ರಯೋಗ ನೆಡೆಸಲಾಯಿತು. ವ್ಯಕ್ತಿಯೊಬ್ಬರ ಕೈಯನ್ನು ಫ್ಲೂರೋಸೆಂಟ್ ದ್ರವದಲ್ಲಿ ತೊಳೆಯಲಾಯಿತು. ಎಂದಿನಂತೆಯೇ ಎಲ್ಲರೂ ರೆಸ್ಟೋರೆಂಟ್ ಅಲ್ಲಿ ಊಟ ಮಾಡಿದರು. ನಂತರ ಕತ್ತಲಲ್ಲಿ 26 ನೋಡಿದಾಗ, ಖಾದ್ಯ ಗಳ ಮೇಲೆ, ಮುಖಗಳ ಮೇಲೆ ಪಾತ್ರೆಗಳ ಮೇಲೂ ಪ್ಲೂರೋಸೆಂಸ್ ಲೇಪನ ಕಂಡುಬಂತು. ಇದೇ ರೀತಿಯಲ್ಲಿಯೇ ವೈರಾಣುಗಳೂ ಹರಡ ಬಹುದು ಎಂಬ ನಿರ್ಣಯಕ್ಕೆ ಬರಲಾಗಿದೆ. (ಜ್ಹಾನ್ಸನ್2020). ಈ ಪ್ಲೂರೋಸೆಂಸ್ ಏಕೆ ಕಾಣುತ್ತದೆ ? ಕೆಲವು ವಸ್ತುಗಳು ಬೆಳಕಿನ ಕಿರಣಗಳನ್ನು ಹೀರಿಕೊಂಡಾಗ ಫೋಟಾನ್ ಗಳು ವಿಚಲಿತಗೊಂಡು, ಪ್ಲೂರೋಸೆಂಸ್ ಪ್ರಕ್ರಿಯೆಯು ಕಾಣ ಬರುತ್ತದೆ. ನಂತರದಲ್ಲಿ ಆ ವಸ್ತುಗಳು , ಹೀರಿಕೊಂಡ ಬೆಳಕನ್ನು ಹೊರ ಸೂಸುತ್ತವೆ. ಯಾವುದೇ ವಸ್ತುವು ಅತಿ ನೇರಳೆ ಕಿರಣಗಳನ್ನು ಹೀರಿಕೊಂಡರೆ, ನಮ್ಮ ಕಣ್ಣಿಗೆ ಅದು ಕಾಣ ಬರುವುದಿಲ್ಲ . ಆದರೆ ಅಂತಹ ವಸ್ತುಗಳು ನಂತರದಲ್ಲಿ ಹೊರ ಸೂಸುವ ಬೆಳಕನ್ನು ನಾವು ಕಾಣ ಬಹುದು.
36 / ಸೋಂಕು 2021
ಅತಿನೇರಳೆ ಕಿರಣಗಳ ಮೂಲಕ , ವೈರಾಣುಗಳನ್ನು ಪ್ರಸರಿಸುವ ದೇಹದ ದ್ರಾವಣಗಳ ರೂಪಚಿತ್ರ , ಸೈಮನ್ ಡೇವಿಸ್/ ಡಿ.ಎಫ್.ಐ.ಡಿ ತೆಗೆದಿರುವ ಛಾಯಾಚಿತ್ರ
37
ಪ್ರಯೋಗ : ನಿಮಗೆ ಅರಿವಿಲ್ಲದೆಯೇ , ನೀವು ಯಾವೆಲ್ಲ ಪದಾರ್ಥಗಳನ್ನು ಮುಟ್ಟಿದ್ದೀರಿ ಎಂದು ತಿಳಿದುಕೊಳ್ಳುವ ಆಸಕ್ತಿ ಇದೆಯೇ ? ಈ ಪ್ರಯೋಗದ ಮೂಲಕ ತಿಳಿಯ ಬಹುದು! ಬೇಕಾದ ಸಾಮಗ್ರಿ • ಫ್ಲಾಶ್ ಲೈಟ್ • 2 ರಬ್ಬರ್ ಬ್ಯಾಂಡ್ • ನೀಲಿ ಮತ್ತು ನೇರಳೆ ಬಣ್ಣದ ಸೆಲೋಫೇನ್ ಕಾಗದ. ಅಥವಾ ನಿಮ್ಮ ಫೋನ್ ಅಲ್ಲಿ ಅತಿ ನೇರಳೆ ಸಿಮುಲೇಟರ್ ಆಪ್ ಇದ್ದರೆ ಬಳಸ ಬಹುದು. • ಒಂದು ಚೊಂಬು ಹದವಾದ ಬಿಸಿ ನೀರು. • ಹಳದಿ ಹೈಲೈಟರ್
ಹೀಗೆ ಮಾಡಿ ಅ. ಅತಿ ನೇರಳ ಬೆಳಕನ್ನು ಪಡೆಯಲು ಹೀಗೆ ಮಾಡಿ: • ಬಣ್ಣದ ಸೆಲೋಫೇನ್ ಕಾಗದ ಮತ್ತು ಫ್ಲಾಶ್ ಲೈಟ್ ತೆಗೆದುಕೊಳ್ಳಿ. • ಫ್ಲಾಶ್ ಲೈಟ್ ಮುಂಭಾಗದ ಸುತ್ತಲೂ ಬಣ್ಣದ ಸೆಲೋಫೇನ್ ಕಾಗದವನ್ನು ಸುತ್ತಿ . 2 ನೀಲಿ ಸೆಲೋಫೇನ್ ಹಾಳೆಗಳು ಮತ್ತು 1 ನೇರಳೆ ಬಣ್ಣದ ಕಾಗದವನ್ನು ತೆಗೆದುಕೊಳ್ಳಿ. • ನೀಲಿ ಸೆಲೋಫೇನ್ ಹಾಳೆಗಳನ್ನು ಫ್ಲಾಶ್ ಲೈಟ್ ಸುತ್ತ ಬಿಗಿಯಾಗಿ ಸುತ್ತಿ ರಬ್ಬರ್ ಬ್ಯಾಂಡ್ ಹಾಕಿ ಕಟ್ಟಿ. • ಈಗ , ನೇರಳೆ ಬಣ್ಣದ ಸೆಲೋಫೇನ್ ಕಾಗದವನ್ನು ಫ್ಲಾಶ್ ಲೈಟ್ ಮೇಲೆ ಮತ್ತೆ ಸುತ್ತಿ ರಬ್ಬರ್ ಬ್ಯಾಂಡ್ ಹಾಕಿ ಕಟ್ಟಿ. • ಫ್ಲೂರೋಸೆಂಸ್ ಬೆಳಕನ್ನು ಹೊಮ್ಮಿಸಲು ನಿಮ್ಮ ಫೋನ್ ಅಲ್ಲಿ ಅತಿ ನೇರಳೆ ಸಿಮುಲೇಟರ್ ಆಪ್ ಇದ್ದರೆ ಬಳಸ ಬಹುದು. ಈಗ ಆಂಡ್ರೋಯ್ಡ್ ಮತ್ತು ಐ.ಓ.ಎಸ್ ಎರಡರಲ್ಲೂ ಈ ಸೌಲಭ್ಯವಿದೆ. ಆ. ಫ್ಲೂರೋಸೆಂಟ್ ದ್ರವ ತಯಾರಿಸುವ ಬಗೆ. • ಕೈ ಗೌಸುಗಳನ್ನು ಧರಿಸಿ. ಒಂದು ಮಗ್ ಅಥವಾ ಪಾತ್ರೆಯಲ್ಲಿ ಬಿಸಿ ನೀರನ್ನು ತುಂಬಿಸಿಡಿ. • ಹೈಲೈಟರ್ ತೆಗೆದು ಕೊಳ್ಳಿ. (ಈ ಪ್ರಯೋಗದ ನಂತರ ಹೈಲೈಟರ್ ಬಳಸಲಾಗುವುದಿಲ್ಲ .) ಹೈಲೈಟರ್ ಒಳಗಿನ ಇಂಕ್ ಟ್ಯೂಬ್ ತೆಗೆದುಕೊಳ್ಳಿ. • ಹೈಲೈಟರ್ ಬಣ್ಣವನ್ನು ನೀರಿನಲ್ಲಿ ಅದ್ದಿ ಕರಗಿಸಿ ಇಲ್ಲವೇ ಇಂಕ್ ಟ್ಯೂಬ್ ಕತ್ತರಿಸಿ ಬಣ್ಣವನ್ನು ಬಿಸಿ ನೀರಿನಲ್ಲಿ ಕದಡಿ. • ಕೈ ಗೌಸುಗಳನ್ನು ತೆಗೆದು ನಿಮ್ಮ ಕೈಗಳನ್ನು ಈ ಹೈಲೈಟರ್ ಬಣ್ಣದ ದ್ರಾವಣದಲ್ಲಿ ಅದ್ದಿ ತೊಳೆಯಿರಿ. ಈಗ ಸಾಮಾನ್ಯವಾಗಿ ನಿಮ್ಮ ಕೆಲಸಗಳನ್ನೆಲ್ಲ ಮಾಡಿಕೊಳ್ಳಿ. ಪ್ರತಿ ಗಂಟೆಗೆ ಒಮ್ಮೆ ಈ ಬಣ್ಣದ ದ್ರಾವಣದಲ್ಲಿ ನಿಮ್ಮ ಕೈಗಳನ್ನು ತೊಳೆದು ಕೊಳ್ಳಿ. • ರಾತ್ರಿಯಲ್ಲಿ ಎಲ್ಲ ಬೆಳಕನ್ನು ಆರಿಸಿ ಅತಿ ನೇರಳೆ ಬೆಳಕನ್ನು ಮನೆಯ ಎಲ್ಲ ಕಡೆ ಹಿಡಿಯಿರಿ. ನಿಮ್ಮ ಮೇಲೂ ಬೆಳಕನ್ನು ಹರಿಸಿ. ನೀವು ಯಾವೆಲ್ಲ ಪದಾರ್ಥಗಳನ್ನು ಮುಟ್ಟಿದ್ದೀರಿ ಎಂದು ತಿಳಿಯ ಬಹುದು.
38 / ಸೋಂಕು 2021
39
ಕರೋನಾ ರೇಖಾ ಚಿತ್ರ ಎಲ್ಲರೂ ಪ್ರಯೋಗಾಲಯಕ್ಕೆ ಭೇಟಿ ನೀಡಲು ಆಗುವುದಿಲ್ಲ . ಅತಿ ನೇರಳೆ ಫ್ಲೂರೋಸೆಂಸ್ ಪ್ರಯೋಗದ ಮೂಲಕ, ವೈರಾಣುವಿನ ಅಗೋಚರ ಪ್ರವೃತ್ತಿಯನ್ನು ಬೆಳಕಿಗೆ ತಂದು ವೈರಾಣುವಿನ ಇರುವಿಕೆಯನ್ನು ಜನ ಸಾಮಾನ್ಯರಿಗೆ ಸಾಬೀತು ಮಾಡ ಬಹುದು. ವೈರಾಣುವು ಹೇಗೆ ಪ್ರಸರಿಸುತ್ತದೆ ಎಂದು ತಿಳಿಯ ಬಹುದು. ವೈಜ್ ಞಾ ನಿಕ ಜ್ ಞಾ ನವನ್ನು ಜನ-ಸಾಮಾನ್ಯರಿಗೆ ಸರಿಯಾಗಿ ಸ್ಪಷ ್ಟ ರೀತಿಯಲ್ಲಿ ಮನದಟ್ಟು ಮಾಡುವುದು ಮುಖ್ಯ .. ಅಗೋಚರ , ಕ್ಲಿಷ್ಟಕರ ವೈರಾಣುವಿನ ಇರುವಿಕೆಯನ್ನು , ಅದರ ಸಂರಚನೆಯನ್ನು ಜನರಿಗೆ ತಿಳಿಸುವುದು ನಿಜಕ್ಕೂ ದೊಡ್ಡ ಸವಾಲಾಗಿದೆ. ಡೇವಿಡ್ ಗೂಡ್ ಸೆಲ್ ಅಂತಹ ಕಲಾವಿದರು, ತಮ್ಮ ವೈಜ್ ಞಾ ನಿಕ ಅಭ್ಯಾಸವನ್ನು ಕಲೆಯೊಂದಿಗೆ ಸಮಗ್ರವಾಗಿ 27 ಸಂಯೋಜಿಸಿದ್ದಾರೆ (ಕೋಹನ್, 2019). ಸಂರಚನಾತ್ಮಕ ಜೀವ ವಿಜ್ ಞಾ ನಿಯಾದ ಡೇವಿಡ್ ಗೂಡ್ ಸೆಲ್ ಅವರು, ಸೂಕ್ಷ್ಮಾಣುಗಳನ್ನು ಸೂಕ್ಷ ್ಮದರ್ಶಕದ ಮುಖೇಣ ಗಹನವಾಗಿ ಗಮನಿಸಿ, ಅವುಗಳ ಸಂರಚನೆಯನ್ನು ಸ್ವತಃ ನಿಖರವಾಗಿ ಚಿತ್ರಿಸಿ ಬಣ್ಣ ಹಾಕುತ್ತಾರೆ. ಇವರು ತಮ್ಮ ಚಿತ್ರಕಲೆಗೆ ಬೇಕಾದ ಬಣ್ಣಗಳ ಉಪಯೋಗ ಮತ್ತು ಸೂಕ್ಷ ್ಮ ವಿವರಣೆಗಳನ್ನು ಬಿಡಿಸಲು, ಸೂಕ್ತ ಅನುಮತಿಯನ್ನು ಪಡೆದಿದ್ದಾರೆ. ಮಾರಣಾಂತಕವಾದ ಅಪಾಯಕಾರಿ ಸೂಕ್ಷ್ಮಾಣುಗಳಿಗೆ, ಸುಂದರ ಕಲಾಕೃತಿಗಳ ರೂಪ ನೀಡುತ್ತಾರೆ. ಸೂಕ್ಷ್ಮಾಣುಗಳ ಸಂರಚನೆಯನ್ನು ಸಂರಕ್ಷಿ ಸುವಲ್ಲಿ ಇದು ಸಹಕಾರಿಯಾಗಿದೆ. ಪ್ರೇಕ್ಷ ಕರು ಸಹ ಈ ಕಲಾ ಸಂರಚನೆಗಳ ಮೂಲಕ ವಿಷಯವಸ್ತುವನ್ನು ತಿಳಿದುಕೊಳ್ಳುತ್ತಾರೆ.
40 / ಸೋಂಕು 2021
ಡೇವಿಡ್ ಗೂಡ್ ಸೆಲ್ ಮತ್ತು ಆರ್. ಸಿ.ಎಸ್.ಬಿ ಪಿ.ಡಿ.ಬಿ ಅವರು ಚಿತ್ರಿಸಿರುವ ನಿದರ್ಶನಗಳು . ಸಿ ಸಿ- ಬಿ.ವೈ- 4.0 ಲೈಸೆಂಸ್ ಮೂಲಕ ಹಂಚಿಕೊಳ್ಳಲಾಗಿದೆ
41
ವೈರಾಣುವಿಗೆ ಬಣ್ಣ ಹಚ್ಚಿ , ರಂಗುಗೊಳಿಸಿ !
CORONAVIRUS
ಬೇಕಾದ ಸಾಮಗ್ರಿ • ಬಣ್ಣದ ಪೆನ್ಸಿಲ್ / ಬಣ್ಣಗಳು / ಸ್ಕೆಚ್ ಪೆನ್/ ಚಿತ್ರಿಸಲು ಬೇಕಾದ ಅನ್ಯ ಸಾಮಗ್ರಿ • ಇಲ್ಲಿ ತೋರಿರುವ ಚಿತ್ರದ ಪ್ರತಿ.
ಹೀಗೆ ಮಾಡಿ ಬಣ್ಣದ ಪೆನ್ಸಿಲ್ ಅಥವಾ ಬಣ್ಣಗಳನ್ನು ತೆಗೆದುಕೊಳ್ಳಿ. ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ . ಚಿತ್ರಕ್ಕೆ ಬಣ್ಣ ಹಾಕಿ. ಎಲ್ಲರೊಂದಿಗೆ ನಿಮ್ಮ ಕಲಾಕೃತಿಯನ್ನು ಹಂಚಿಕೊಳ್ಳಿ. ನಮ್ಮೊಂದಿಗೆ ಈ ಹ್ಯಾಶ್ ಟ್ಯಾ ಗ್ ಮೂಲಕ ನಿಮ್ಮ ಚಿತ್ರಾಕೃತಿ ಹಂಚಿಕೊಳ್ಳಿ. #ExperimentWithSGB ಮತ್ತು #TransmissionStartsNow.
42 / ಸೋಂಕು 2021
ಡೇವಿಡ್ ಗೂಡ್ ಸೆಲ್ ಮತ್ತು ಆರ್. ಸಿ.ಎಸ್.ಬಿ ಪಿ.ಡಿ.ಬಿ ಅವರು ಚಿತ್ರಿಸಿರುವ ನಿದರ್ಶನಗಳು . ಸಿ ಸಿ- ಬಿ.ವೈ- 4.0 ಲೈಸೆಂಸ್ ಮೂಲಕ ಹಂಚಿಕೊಳ್ಳಲಾಗಿದೆ
43
ಎಲ್ಲೆಲಿಯೂ ವೈರಾಣುಗಳು ಮಾನವನ ಸೌಂದರ್ಯ ಪ್ರಜ್ಞೆ ಮತ್ತು ಅದರ ಕುರುಹಾಗಿ ಮಾರಣಾಂತಕ ವೈರಾಣುಗಳನ್ನು ಸಹ ಕಲೆಯ ರೂಪದಲ್ಲಿ ಪ್ರತಿಬಿಂಬಿಸುವುದು, ಮಾನವ ಸಹಜ ಸ್ವಭಾವ. ನೀವು ನಿಮ್ಮದೇ ವೈರಾಣು ಕಲೆ ಸಂಗ್ರಹಕ್ಕೆ ಈ ಚಿತ್ರವನ್ನು ಅಳವಡಿಸಿಕೊಳ್ಳ ಬಹುದು. ಸೂಕ್ಷ ್ಮ ದರ್ಶಕಗಳ ಮೂಲಕ ಗಮನಿಸಿದಾಗ, ಸಾಮಾನ್ಯವಾಗಿ ಬಹಳಷ್ಟು ವೈರಾಣುಗಳು ಸಮರೂಪತೆ ಹೊಂದಿರುತ್ತವೆ. ಗ್ಲಾಸ್ ಗೋ ವಿಶ್ವ ವಿದ್ಯಾಲಯದ ಸಂಶೋಧಕರು, ಇಂತಹ ಹಲವು ವೈರಾಣುಗಳ ಹಿಮ- ಹೆಪ್ಪಳಿಕೆಗಳ ಸಮೂಹದ ಸಂಗ್ರಹಣವನ್ನೇ ನಿರ್ಮಿಸಿದ್ದಾರೆ. ಈ ಪುಟದ ಚಿತ್ರಣವನ್ನು ಇಲ್ಲಿ ಕತ್ತರಿಸಿ ಸಂರಕ್ಷಿ ಸ ಬಹುದು.
28
ಪ್ರಿಂಟ್ ಮಾಡಿ ಹಾಗೂ
ಇಲ್ಲವೇ ನಿಮ್ಮದೇ ಆದ ʼಜಿಕಾʼ ವೈರಾಣುವನ್ನು ಹೋಲುವ ಮಾದರಿ ಪ್ರತಿಕೃತಿಯನ್ನು ನಿರ್ಮಿಸ ಬಹುದು. ಮುದ್ರಿಸಬಹುದಾದ ಮಾದರಿಯನ್ನು ಇಲ್ಲಿ
44 / ಸೋಂಕು 2021
29
ಕಾಣಿರಿ
ಅನ್ ಸ್ಪ್ಲಾಶ್ ಬಗ್ಗೆ ರಾಫೇಲ್ ರೆಂಟರ್ ಅವರು ತೆಗೆದಿರುವ ಛಾಯಾಚಿತ್ರ
45
ಗೋಜಲು ಒಗಟು ಪದಗಳು ಈ ಎಲ್ಲಾ ಪ್ರಯೋಗಗಳನ್ನು ಮಾಡಿ, ಗಮನಿಸಿ ಅರಿತ ಹಲವು ವಿಷಯಗಳು, ಚಿಂತನೆಯ ನಂತರ ವ್ಯಾಪನ ಗೋಜಲು ಪದಗಳ ಚಟುವಟಿಕೆಯನ್ನು ನಿಮಗಾಗಿ ತಂದಿದ್ದೇವೆ. ನಿಮ್ಮ ಸುತ್ತಲೂ ಆವರಿಸಿರುವ ಅರ್ಥವಾಗದ ಗೋಜಲು ಪರಿಸರವು ಏಕಾಏಕಿ ಅರ್ಥವಾಗ ತೊಡಗಿದರೆ ಹೇಗಿರುತ್ತದೆ ? ಈ ಚಟುವಟಿಕೆಯಲ್ಲಿ , ಪದಗಳಲ್ಲಿನ ಅಕ್ಷ ರ ಪುಂಜಗಳು ಗೋಜಲಾಗಿವೆ. ಇವುಗಳನ್ನು ಗಮನಿಸಿ, ಸರಿಯಾದ ಅರ್ಥ ಕೊಡುವ ಪದಗಳನ್ನು ರಚಿಸಿ. ವ್ಯಾಪನಗಳನ್ನು ಬಹಳಷ್ಟು ಬಾರಿ ಅರ್ಥೈಸಲು ಸಾಧ್ಯವಾಗುವುದಿಲ್ಲ . ಕೋವಿಡ್-19 ರೋಗ ಪಿಡುಗು ಕೂಡ ಪ್ರಸಕ್ತದಲ್ಲಿ ವಿಶ್ವ ವ್ಯಾಪನವಾಗಿದೆ. ಎಲ್ಲೆಲ್ಲೂ ಹರಡಿದೆ. ಅರ್ಥವಾಗದ ವಿಚಿತ್ರ ರೀತಿಯಲ್ಲಿ ಹಲವು ಜನರು ಹಲವು ಬಗೆಯಲ್ಲಿ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿದ್ದಾರೆ. ಸಾರ್ಥಕವಾದ ವಿಷಯವೆಂದರೆ , ವಿಶ್ವದೆಲ್ಲೆಡೆ, ಜನರು ಇದರ ಬಗೆಗೆ ಅಧ್ಯಯನ ಮತ್ತು ಚಿಂತನೆಯಲ್ಲಿ ತೊಡಗಿದ್ದಾರೆ, ಸೃಜನ ಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ, ಪ್ರತಿ ಪ್ರತಿಕ್ರಿಯೆಯನ್ನು ಸೂಕ್ಷ ್ಮವಾಗಿ ದಾಖಲಿಸುತ್ತಿದ್ದಾರೆ.
ಇಲ್ಲಿ ಪ್ರಸ್ತುತ ಪಡಿಸುತ್ತಿರುವ ಪ್ರತಿಯೊಂದು ಪದವೂ ವ್ಯಾಪನಕ್ಕೆ ಸಂಬಂಧಿಸಿದೆ, ಗೋಜಲನ್ನು ಬಿಡಿಸಿ ಸರಿಯಾದ ಪದವನ್ನು ಹುಡುಕಿ.
ರ್ಮೋ ಡ ಕಾ
..............................................
ತ ಣಾಂ ಕ ಮಾ ರ
ಹೀ ರ್ಕ ನ ವಿ ಸಂ ಪ .................................................. ಕ ರ್ಮ ಣ ನಿ ರ ಲೀ ಗ ಜ ಬೀ ಳು ಕ ಮದ್ಧಿಬುಣೆ
..................................................
...........................................
..................................................
ನ ಲ ಹ ವ ಸಂ ಶೀ
..................................................
ಧಾ ಲ ಮೂ ಆ ರ
..................................
ಲು ಚ ಗೊಂ ತ್ವ ಅ ಸ್ಥಿ
.................................
.............................
ಕ ಸಂ ಹ ವಾ ಗ ಲೆ ಅ ಳು
46 / ಸೋಂಕು 2021
..................................................
................................... ................................
ಲ ರ್ಜಾ ಅಂ ತ
.....................................
ಕ ಢೀ ದೃ ಸು ರಿ
..............................................
ಸು ನು ಅ ರಿ ಕ
...........................
47
ಸಂದರ್ಭ ಸಾಹಿತ್ಯ 1. “ಶೇಕ್ಸ್ಪಿಯರ್ ಇನ್ ಲಾಕ್ ಡೌನ್: ಡಿಡ್ ಹಿ ರೈಟ್ ಕಿಂಗ್ ಲಿಯರ್ ಇನ್ ಪ್ಲೇಗ್ ಕ್ವಾರಂಟೈನ್?” 2020. ದಿ ಗಾರ್ಡಿಯನ್, ಮಾರ್ಚ್ 22. http://www.theguardian.com/stage/2020/mar/22/shakespeare-in-lockdown-did-he-write-kinglear-in-plague-quarantine. 2. ರಿಸ್ತಾನಿ, ಮರಿಯಾ. 2020. “ಥಿಯೇಟರ್ ಆಂಡ್ ಎಪಿಡಮಿಕ್ಸ್: ಆನ್ ಏಜ್ ಓಲ್ಡ್ ಲಿಂಕ್.” ಕ್ರಿಟಿಕಲ್ ಸ್ಟೇಜ್ಸ್, ನಂ. 21. ಜೂನ್ http://www.critical-stages.org/21/theatre-and-epidemics-an-age-old-link/. 3. ವೈಲ್ಟ್, ಬರ್ಬರ, ಮೈಖೇಲ್ ಎರ್ಬ್, ಆಂಡ್ ಮಾಥಿಯಾಸ್ ಬಾರ್ಟೆಲ್ಸ್. 2001. “ಆರ್ ಎಮೋಷನ್ನ್ ಕಂಟೇಜಸ್? ಇವೋಕ್ಡ್ ಎಮೋಶನ್ಸ್ ವೈಲ್ ವ್ಯೂಯಿಂಗ್ ಎಮೋಶನಲಿ ಎಕ್ಸ್ ಪ್ರೆಸಿವ್ ಫೇಸಸ್: ಕ್ವಾಲಿಟಿ, ಕ್ವಾಂಟಿಟಿ, ಟೈಮ್ ಕೋರ್ಸ್ ಆಂಡ್ ಜೆಂಡರ್ ಡಿಫರೆಂಸಸ್.” ಜೂನ್ 1. ಸೈಖಿಯಾಟರಿ ರಿಸರ್ಚ್102 (2): 109–24. https://doi.org/10.1016/S0165-1781(01)00225-6. 4. ಜರೆಟ್ಸ್ಕಿ , ರಾಬರ್ಟ್.. 2016. “ದಿ ಮಿಥ್ ಆಫ್ ಮೋಬೋಕ್ರಸಿ .” ದಿ ಅಟ್ಲಾಂಟಿಕ್. ಜುಲೈ27. https://www.theatlantic.com/international/archive/2016/07/trump-le-bon-mob/493118/. 5. ಎಚ್.ಡಿ.ಸಿ.ವೈ.ಟಿ. 2007. “ಚಾರ್ಲಿ ಬಿಟ್ ಮೈ ಫಿಂಗರ್– ಅಗೇನ್ ! ಯೂಟ್ಯೂಬ್. https://www.youtube.com/watch?v=_OBlgSz8sSM.
12. ಶಾಫರ್, ರೋನಾಲ್ಡ್ ಜಿ. 2020. “1918 ರ ಮಾರಣಾಂತಿಕ ಫ್ಲೂ ರೋಗ ಪಿಡುಗಿನೊಂದಿಗೆ ತನ್ನ ಹೆಸರು ಸೇರಿರುವುದನ್ನು ಸ್ಪೇನ್ ದೇಶವು ಒಪ್ಪುವುದಿಲ್ಲ . ಟ್ರಂಪ್ ಅವರ ʼಚೀನಾ ವೈರಾಣುʼ ಎಂಬ ಉದ್ಗಾರದಲ್ಲಿ ಇದು ಪ್ರತಿದ್ವನಿಸುತ್ತದೆ.” ವಾಶಿಂಗ್ಟನ್ ಪೋಸ್ಟ್, ಮಾರ್ಚ್23, 2020. https://www.washingtonpost.com/history/2020/03/23/spanish-flu-chinese-virus-trump/. 13. ಗಿಲ್ಹಾಟ್, ನಿಖೋಲಸ್. 2020. “ವೈ ಪ್ಯಾಂಡಮಿಕ್ಸ್ ಆರ್ ದಿ ಪರ್ಫೆಕ್ಟ್ ಎನ್ವೈರ್ನಮೆಂಟ್ ಫಾರ್ ಕಾಂಸ್ಪಿರಸಿಥಿಯರೀಸ್ ಟು ಫ್ಲರಿಶ್.” ದಿ ಕಾನ್ವರ್ಸೇಷನ್. ಏಪ್ರಿಲ್ 6. http://theconversation.com/why-pandemics-are-the-perfect-environment-for-conspiracytheories-to-flourish-135475. 14. ಲೆವಾಂಡೋಸ್ಕಿ , ಎಸ್., ಆಂಡ್ ಕುಕ್, ಜೆ.2020. ದಿ ಕಾಂಸ್ಪಿರಸಿ ಥಿಯರಿ ಹ್ಯಾಂಡ್ ಬುಕ್. http://sks.to/conspiracy. 15. ಲೆವಾಂಡೋಸ್ಕಿ , ಎಸ್., ಕುಕ್, ಜೆ.., ಈಕರ್, ಯೂ., ವ್ಯಾನ್ ಡೆರ್ ಲಿಂಡೆನ್, ಎಸ್. 2020. ಹೌ ಟು ಸ್ಪಾಟ್ ಕೋವಿಡ್- 19 ಕಾಂಸ್ಪಿರಸಿ ಥಿಯರೀಸ್. http://sks.to/conspir. 16. ಎವಾಂಸ್, ನಿಖೋಲಸ್ ಜಿ. 2020. “ವ್ಹೇರ್ ದಿ ಕರೋನಾ ವೈರಸ್ ಬಯೋವೆಪನ್ ಕಾಂಸ್ಪಿರಸಿ ಥಿಯರೀಸ್ ರಿಯಲಿ ಕಮ್ ಫ್ರಂ .” ಸ್ಲೇಟ್ ಮ್ಯಾ ಗ್ ಜೈನ್. ಫೆಬ್ರವರಿ 27. https://slate.com/technology/2020/02/coronavirus-bioweapon-conspiracy-theories.html.
6. ಲೆಹ್ರರ್, ಜೋನಹ್. 2011. “ವೈ ಡೂ ವೈರಲ್ ವೀಡಿಯೋಸ್ ಗೋ ವೈರಲ್?” ವೈರ್ಡ್. ಜುಲೈ25. https://www.wired.com/2011/07/why-do-viral-videos-go-viral/.
17. ರೆಟರ್ಸ್. 2020. “ಫ್ಯಾಕ್ಟ್ ಚೆಕ್: ಬಿಲ್ ಗೇಟ್ಸ್ ಇಸ್ ನಾಟ್ ರೆಸ್ಪಾಂಸಿಬಲ್ ಫಾರ್ ಕೋವಿಡ್-19.” ರೆಟರ್ಸ್, ಸೆಪ್ಟೆಂಬರ್, 11. https://www.reuters.com/article/uk-factcheck-gates-idUSKBN2613CK.
7. ಶೇರ್, ಮ್ಯಾಥ್ಯೂ . 2014. “ವಾಟ್ ಎಮೋಶನ್ ಗೋಸ್ ವೈರಲ್ ದಿ ಫಾಸ್ಟೆಸ್ಟ್?” ಸ್ಮಿಥ್ಸೋನಿಯನ್ ಮ್ಯಾ ಗ್ ಜೈನ್. ಏಪ್ರಿಲ್. https://www.smithsonianmag.com/science-nature/what-emotion-goes-viralfastest-180950182/.
18. ಆಶ್ವಾಡನ್, ಕ್ರಿಸ್ಟೀ. 2020. “ಡಿಬಂಕಿಂಗ್ ದಿ ಫಾಲ್ಸ್ ಕ್ಲೇಮ್ ಧಟ್ ಕೋವಿಡ್ ಡೆಥ್ ಕೌಂಟ್ಸ್ ಆರ್ ಇಂಫ್ಲೇಟೆಡ್” ಸೈಂಟಿಫಿಕ್ ಅಮೇರಿಕನ್, ಅಕ್ಟೋಬರ್, 20. https://www.scientificamerican.com/article/debunking-the-false-claim-that-covid-death-countsare-inflated1/.
8. ಫ್ರಿಯಾಸ್, ಲಾರೆನ್. 2019. “ದಿ 60 ಬಿಗೆಸ್ಟ್ ವೈರಲ್ ಮೊಮೆಂಟ್ಸ್ ಫ್ರಂ ದಿ 2010 ಸ್ ಡೆಕೆಡ್.” ಇಂಸೈಡರ್ ಡಿಸಂಬರ್, 17. https://www.insider.com/biggest-viral-moments-videos-memes-from-the-2010s#2018-selfiekid-45.
19. ಜ್ಹಾನ್ ಹಾಪ್ಕಿನ್ಸ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ಥ್.. 2020. “ನೋ, ಕೋವಿಡ್-19 ಇಸ್ ನಾಟ್ ದಿ ಫ್ಲೂ” ಜ್ಹಾನ್ ಹಾಪ್ಕಿನ್ಸ್ ಬ್ಲೂಂಬರ್ಗ್ ಸ್ಕೂಲ್ ಆಫ್ ಪಬ್ಲಿಕ್. ಅಕ್ಟೋಬರ್, 20. https://www.jhsph.edu/covid-19/articles/no-covid-19-is-not-the-flu.html.
9. ವೊಸೌಘಿ, ಸೌರೋಶ್, ದೇಬ್ ರೋಯ್, ಆಂಡ್ ಸಿನಾನ್ ಅರಲ್. 2018. “ದಿ ಸ್ಪ್ರೇಡ್ ಆಫ್ ಟ್ರೂ ಆಂಡ್ಫಾ ಲ್ಸ್ ನ್ಯೂಸ್ ಆನ್ ಲೈನ್.” ಮಾರ್ಚ್ 9. ಸೈನ್ಸ್ 359 (6380): 1146–51. https://doi.org/10.1126/science.aap9559. 10. ವೈಕ್ಸ್, ಜೋ. 2018. “ದಿ ಸ್ಟ್ರೇಂಜ್ ಹಿಸ್ಟರಿ ಆಫ್ ಒನ್ ಆಫ್ ದಿ ಇಂಟರ್ ನೆಟ್ಸ್ ಫಸ್ಟ್ ವೈರಲ್ ವೀಡಿಯೋಸ್.” ವೈರ್ಡ್. ಜನವರಿ 12. https://www.wired.com/story/history-of-the-first-viral-video/. 11. ಬ್ಯಾಂಕ್ಸ್, ಡೇವಿಡ್. 2016. “ದಿ ಇಂಟರ್ನೆಟ್ ಆಸ್ ಕಾಂಸ್ಪಿರಸಿ ಥಿಯರಿ.” ದಿ ಸೊಸೈಟಿ ಪೇಜಸ್, ಸೈಬರ್ಗೋಲೋಜಿ, ಜೂನ್ 3. https://thesocietypages.org/cyborgology/2016/06/03/the-internet-as-conspiracy-theory/.
48 / ಸೋಂಕು 2021
20. ಟೆಂಪರ್ಟನ್, ಜೇಮ್ಸ್. 2020 . “ 5 ಜಿ ಕರೋನ ವೈರಾಣು ಪಿತೂರಿ ಸಿದ್ಧಾಂತದ ಹುಟ್ಟು ಮತ್ತು ಹರಡುವಿಕೆ”, ವೈರ್ಡ್, ಏಪ್ರಿಲ್9, 2020. https://www.wired.co.uk/article/5g-coronavirus-conspiracy-theory. 21. ಖಜನ್, ಓಲ್ಗಾ . 2020. “ಹೌ ಅ ಬೈಜಾರ್ ಕ್ಲೇಮ್ ಅಬೌಟ್ ಮಾಸ್ಕ್ಸ ಹ್ಯಾಸ್ ಲಿವ್ಡ್ ಆನ್ ಫಾರ್ ಮಂಥ್ಸ್.” ದಿ ಅಟ್ಲಾಂಟಿಕ್. ಅಕ್ಟೋಬರ್ 9. https://www.theatlantic.com/politics/archive/2020/10/can-masks-make-you-sicker/616641/. 22. ಡ್ಯೂಕ್ ಹೆಲ್ಥ್. 2020.ಕೋವಿಡ್– 19 ಸಾಂಕ್ರಾಮಿಕತೆಯನ್ನು ತಡೆಯಲು ಮುಖ ಗೌಸು ಎಷ್ಟು ಪ್ರಭಾವಕಾರಿ ಎಂಬುದನ್ನು ಉಚಿತವಾಗಿ ಪರೀಕ್ಷಿ ಸುವ ರೀತಿ. https://www.youtube.com/watch?v=LeEBn4ttZZY.
49
23. ಮ್ಯಾಕ್ ಗ್ರೀವೀ, ನೋರಾ. 2021.”ವಿಜ್ ಞಾ ನದ ಪ್ರಕಾರ, ಮನೆಯಲ್ಲಿಯೇ ಉತ್ತಮವಾದ ಮುಖ ಗೌಸನ್ನು ತಯಾರಿಸುವ ಬಗೆ” ಸ್ಮಿಥ್ಸೋನಿಯನ್ ಮ್ಯಾ ಗ್ ಜೈನ್. ಮಾರ್ಚ್17, 2021. https://www.smithsonianmag.com/smithsonian-institution/using-store-bought-microscopesand-eye-detail-heres-what-smithsonian-scientists-have-learned-about-mask-effectiveness-180977216/. 24. ಚು, ಜೆನಿಫರ್. 2016. “ಸ್ನೀಸಿಂಗ್ ಪ್ರಡ್ಯೂಸಸ್ ಕಾಂಪ್ಲೆಕ್ಸ್ ಫ್ಲೂಯಿಡ್ ಕ್ಯಾಸ್ಕೇಡ್, ನಾಟ್ ಅ ಸಿಂಪಲ್ ಸ್ಪ್ರೇ.” ಎಂ.ಐ.ಟಿ ವಾರ್ತೆಗಳು | ಮಸಾಚುಸೆಟ್ಸ್ ತಂತ್ರಜ್ ಞಾ ನ ಸಂಸ್ಥೆ. ಫೆಬ್ರವರಿ 10. https://news.mit.edu/2016/sneezing-fluid-cascade-not-simple-spray-0210. 25. ಹಗ್ಸ್, ಪ್ಯಾಟ್ರಿಕ್ ಜಿ., ಕೇಟ್ ಈ. ಹಗ್ಸ್,, ಆಂಡ್ ರಮೀ ಏ ಅಹಮದ್. 2020. “ಡಸ್ ಮೈ ಪರ್ಸನೆಲ್ ಪ್ರೊಟೆಕ್ಟೀವ್ ಎಕ್ವಿಪ್ ಮೆಂಟ್ ರಿಯಲಿ ವರ್ಕ್? ಎ ಸಿಮುಲೇಶನ್– ಬೇಸ್ಡ್ ಅಪ್ರೋಚ್.” 24 ಏಪ್ರಿಲ್. ಮೆಡಿಕಲ್ ಎಡುಕೇಶನ್54 (8): 759–60. https://doi.org/10.1111/medu.14188. 26. ಜ್ಹಾನ್ಸನ್, ಲಾರೆನ್ ಎಂ. 2020. “ಬ್ಲಾಕ್ ಲೈಟ್ ಎಕ್ಸ್ ಪೆರಿಮೆಂಟ್ ಶೋಸ್ ಹೌ ಕ್ವಿಕ್ಲಿ ಅ ವೈರಸ್ ಲೈಕ್ ಕೋವಿಡ್– 19 ಕ್ಯಾನ್ ಸ್ಪ್ರೆಡ್ ಆಟ್ ಅ ರೆಸ್ಟರಾಂಟ್.” ಸಿ.ಎನ್.ಎನ್. ಮೇ . 14. https://www.cnn.com/2020/05/13/health/japan-black-light-experiment-coronavirus-trndwellness/index.html. 27. ಕೋಹೆನ್, ಜಾನ್. 2019. “ಮೀಟ್ ದಿ ಸೈಂಟಿಸ್ಟ್ ಪೇಂಟರ್ ಹು ಟರ್ನ್ಸ ಡೆಡ್ಲಿ ವೈರಸಸ್ ಇನ ಟು ಬ್ಯೂಟಿಫುಲ್ ವರ್ಕ್ಸ್ ಆಫ್ ಆರ್ಟ್.” ಸೈನ್ಸ್ | ಏಏಏಎಸ್. ಏಪ್ರಿಲ್ 11. https://www.sciencemag.org/news/2019/04/meet-scientist-painter-who-turns-deadly-virusesbeautiful-works-art. 28. ಹಚಿನ್ಸನ್, ಎಡ್.“ವೈರಾಣು ಹಿಮ ಹೆಪ್ಪಳಿ ಕೆಗಳು”. ವೈರಾಣು ಸಂಶೋಧನಾ ಕೇಂದ್ರ , ಎಂ.ಆರ್.ಸಿ – ಗ್ಲಾಸಗೋ ವಿಶ್ವವಿದ್ಯಾಲಯ. https://www.gla.ac.uk/media/Media_765622_smxx.pdf. 29. ಪ್ರೋಟೀನ್ ಡಾಟಾ, ಬ್ಯಾಂಕ್.“ಜಿಕಾ ವೈರಾಣುವಿನ ಕಾಗದದ ಪ್ರತಿರೂಪವನ್ನು ನಿರ್ಮಿಸಿ”. https://cdn.rcsb.org/pdb101/learn/resources/zika/zika-paper-model.pdf.
ಎಲ್ಲಾ ಐಕಾನ್ ಬಿಲ್ಲೆಗಳು : ಕೊಡುಗೆ ನೌನ್ ಪ್ರಾಜೆಕ್ಟ್.
50 / ಸೋಂಕು 2021
ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ಕೊಡುಗೆ ಫ್ಲೂರೋಸೆಂಸ್ ಪ್ರಯೋಗದ ಎಚ್. ಎಚ್. ವಿ -8 ಲಾನಾ ಡಾಟ್ಸ್, ಕ್ರಿಯೇಟಿವ್ ಕಾಮನ್ ಲೈಸೆಂಸ್ ಸಹಿತ
51
ಬೆಂಗಳೂರು ವಿಜ್ ಞಾ ನ ವೇದಿಕೆ
ಸೋಂಕು
ಈ ಕೈಪಿಡಿಯಲ್ಲಿರುವ ಚಟುವಟಿಕೆಗಳ ಬಗೆಗೆ ನಿಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ , ನಮ್ಮೊಂದಿಗೆ ಹಂಚಿಕೊಳ್ಳಿ #ExperimentWithSGB #TransmissionStartsNow
@SCIGALLERYBLR